More

    ಬಿಜೆಪಿ ಬಲ ಹೆಚ್ಚಾದರೆ ಶಿಕ್ಷಕರ ವಿರೋಧಿ ಕಾನೂನುಗಳಿಗೆ ಬ್ರೇಕ್

    ಚಿತ್ರದುರ್ಗ: ವಿಧಾನ ಪರಿಷತ್‌ನಲ್ಲಿ ಪಕ್ಷದ ಸಂಖ್ಯಾಬಲ ಹೆಚ್ಚಾದರೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಶಿಕ್ಷಕರ ಮತ್ತು ಜನ ವಿರೋಧಿ ಕಾನೂನುಗಳನ್ನು ತಡೆಬಹುದಾಗಿದೆ ಎಂದು ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.
    ವಿಧಾನಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಅವರ ಪರ ನಗರದ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಬುಧವಾರ ಮತಯಾಚಿಸಿದ ಅವರು,ಪರಿಷತ್‌ನಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ ಅಧಿಕವಾದರೆ ವಿಧಾನಸಭೆಯಲ್ಲಿ ಅಂಗೀಕಾರವಾದ ಜನ,ಶಿಕ್ಷಕ ವಿರೋಧಿ ಕಾನೂನುಗಳನ್ನು ಪರಿಷತ್‌ನಲ್ಲಿ ನಿಯಂತ್ರಿಸಲು ಸಾಧ್ಯವಾಗಲಿದೆ. ಆದ್ದರಿಂದ ಬಿಜೆಪಿ ಅಭ್ಯರ್ಥಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಬೇಕೆಂದು ಮನವಿ ಮಾಡಿದರು.
    ಅಧಿಕಾರಕ್ಕಾಗಿ ಕಾಂಗ್ರೆಸ್ ಜನರಿಗೆ ಬಿಟ್ಟಿ ಭಾಗ್ಯಗಳನ್ನು ನೀಡುತ್ತಿದೆ,ಈಗಾಗಲೇ ಬಿಟ್ಟಿ ಭಾಗ್ಯಗಳನ್ನು ಕಂಡಿರುವ ಪಾಕಿಸ್ತಾನ ಶ್ರೀಲಂಕಾದ ಸ್ಥಿತಿ ಏ ನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ ಟೀಕಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರಿಂದಾಗಿ ಪ್ರಪಂಚದಲ್ಲಿಂದು ಭಾರತಕ್ಕೆ ವಿಶೇಷ ಮನ್ನಣೆ ಸಿಗುತ್ತಿದೆ ಎಂದರು.
    ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್‌ಶಹಾಪುರ ಮಾತನಾಡಿ,ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಶಿಕ್ಷಕರ ಹಲವು ಸಮಸ್ಯೆಗಳನ್ನು ಪರಿಹರಿಸಿದೆ. ಕೋವಿಡ್ ಸಮಯದಲ್ಲಿ ಶಿಕ್ಷಕರ ಪರವಾಗಿ ನಮ್ಮ ಸರ್ಕಾರ ಕೆಲಸ ಮಾಡಿತ್ತು.ರಾಷ್ಟ್ರೀಯ ಶಿಕ್ಷಣ ನೀತಿ ವಿಚಾರದಲ್ಲಿ ಕಾಂಗ್ರೆಸ್ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ದೂರಿದರು.
    ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ,ನಾಗರಾಜ ಬೇದ್ರೆ,ದಗ್ಗೆ ಶಿವಪ್ರಕಾಶ್,ಕಲ್ಲೇಶಯ್ಯ,ಜಯಣ್ಣ,ನವೀನ್‌ಚಾಲುಕ್ಯ,ಪರಶುರಾಮ್,ತಿಪ್ಪೇಸ್ವಾಮಿ, ವೃಷಬೇಂದ್ರಸ್ವಾಮಿ,ನೀಲಕಂಠಯ್ಯ,ಶೈಲಜಾರೆಡ್ಡಿ,ಕಾಂಚನಾ,ಬಾಪೂಜಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ಎಂ.ವಿರೇಶ್,ಗೋಪಾಲಪ್ಪ,ನಾಗರಾ ಜ್,ಪೃಥ್ವಿ ಮತ್ತಿತರರು ಇದ್ದರು.
    ತಿಪ್ಪಾರೆಡ್ಡಿ,ಅರುಣ್‌ಶಹಾಪುರ ಹಾಗೂ ಪಕ್ಷದ ಪ್ರಮುಖರು ನಗರದ ಸೆಂಟ್‌ಜೋಸೆಫ್ ಸ್ಕೂಲ್,ರೋಟರಿ ವಿದ್ಯಾಲಯ,ವಾಸವಿ ವಿದ್ಯಾಸಂಸ್ಥೆ, ಡಯಟ್ ಕಾಲೇಜು,ಶಿಕ್ಷಕರ ಸರ್ಕಾರಿ ಶಿಕ್ಷಣ ವಿದ್ಯಾಲಯಗಳಿಗೂ ಭೇಟಿ ನೀಡಿ ಮತಯಾಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts