More

    ಜಿಲ್ಲೆಯಲ್ಲಿ ಇಂದಿನಿಂದ 23ರವರೆಗೆ ಭಾರಿ ಮಳೆ, ರೆಡ್ ಅಲರ್ಟ್ ಘೊಷಣೆ

    ಕಾರವಾರ: ಜಿಲ್ಲೆಯಲ್ಲಿ ಸೆಪ್ಟೆಂಬರ್ 20ರಿಂದ 23ರವರೆಗೆ ಭಾರಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚಿಸಿದೆ. ಸೆ. 20ರಿಂದ 22ರವರೆಗೆ ಸರಾಸರಿ 204 ಮಿಮೀಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ರೆಡ್ ಅಲರ್ಟ್ ಘೊಷಿಸಲಾಗಿದೆ. 23ರಂದು 155 ಮಿಮೀಗಿಂತ ಹೆಚ್ಚು ಮಳೆಯಾಗಲಿದೆ ಎಂದು ಕಿತ್ತಳೆ ಅಲರ್ಟ್ ಘೊಷಿಸಲಾಗಿದೆ. ಈ ಅವಧಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ಎಚ್ಚರಿಸಿದ್ದಾರೆ. ಕಡಲತೀರಗಳಿಗೆ ತೆರಳುವ ಪ್ರವಾಸಿಗರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ಸೂಚಿಸಿದ್ದಾರೆ.

    ಪ್ರಕೃತಿ ವಿಕೋಪ ಸಂಬಂಧಿತ ಯಾವುದೇ ಸಮಸ್ಯೆ, ತುತು ರ್ೇವೆಗೆ 247 ಟೋಲ್ ಫ್ರೀ ಕಂಟ್ರೋಲ್ ರೂಂ -1077, ವ್ಯಾಟ್ಸ್​ಆಪ್ ಮೊ.ನಂ.-94835 11015 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ದಡ ಸೇರಿದ ಬೋಟ್​ಗಳು: ಹವಾಮಾನ ವೈಪರೀತ್ಯದ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಹೊರ ರಾಜ್ಯ, ಜಿಲ್ಲೆಗಳ 50ಕ್ಕೂ ಹೆಚ್ಚು ಬೋಟ್​ಗಳು ಕಾರವಾರ ಕೆಲ ತೀರಕ್ಕೆ ಬಂದು ರಕ್ಷಣೆ ಪಡೆದಿವೆ. ಗೋವಾ ಹಾಗೂ ಮಲ್ಪೆಯ ಬೋಟ್​ಗಳು ಬೈತಖೋಲ್ ಬಂದರಿಗೆ ಬಂದಿವೆ. ಕಾರವಾರದ ಹೆಚ್ಚಿನ ಬೋಟ್​ಗಳು ಮೀನುಗಾರಿಕೆಗೆ ತೆರಳಿಲ್ಲ.

    ಅಲ್ಲಲ್ಲಿ ಮಳೆ: ಜಿಲ್ಲೆಯ ವಿವಿಧೆಡೆ ಶನಿವಾರ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ಚದುರಿದಂತೆ ಮಳೆ ಸುರಿದಿದೆ. ಶನಿವಾರ ಬೆಳಗಿನ ವರದಿಯಂತೆ ಅಂಕೋಲಾದಲ್ಲಿ 9.8, ಭಟ್ಕಳದಲ್ಲಿ 23.6, ಹೊನ್ನಾವರದಲ್ಲಿ 35.6, ಕಾರವಾರದಲ್ಲಿ 19.1, ಕುಮಟಾದಲ್ಲಿ 39.2, ಮುಂಡಗೋಡಿನಲ್ಲಿ 2.2, ಸಿದ್ದಾಪುರದಲ್ಲಿ 8.6, ಶಿರಸಿಯಲ್ಲಿ 5, ಜೊಯಿಡಾದಲ್ಲಿ 2, ಯಲ್ಲಾಪುರದಲ್ಲಿ 2.6 ಮಿಮೀ ಮಳೆಯಾಗಿದೆ.

    9 ಅಡಿ ಬಾಕಿ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಲಿಂಗನಮಕ್ಕಿ ಅಣೆಕಟ್ಟೆಗೆ ನೀರಿನ ಒಳ ಹರಿವು ಉತ್ತಮವಾಗಿದೆ. ಸದ್ಯ 8379 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 1819 ಅಡಿ ಗರಿಷ್ಠ ಸಂಗ್ರಹಣೆ ಸಾಮರ್ಥ್ಯದ ಅಣೆಕಟ್ಟೆ ಯಲ್ಲಿ 1810.05 ಅಡಿ ನೀರು ಸಂಗ್ರಹವಾಗಿದ್ದು, ತುಂಬಲು ಇನ್ನೂ 9 ಅಡಿ ನೀರು ಬೇಕಿದೆ. ಈಗಾಗಲೇ ಕೆಪಿಸಿ ಶರಾವತಿ ನದಿ ತಟದ ಜನರಿಗೆ ನೀರು ಬಿಡುವ ಮುನ್ನೆಚ್ಚರಿಕೆ ಸೂಚನೆ ನೀಡಿದೆ. ಮಳೆ ಹೆಚ್ಚಾದಲ್ಲಿ ಶೀಘ್ರದಲ್ಲಿಯೇ ಲಿಂಗನಮಕ್ಕಿಯಿಂದ ನೀರು ಹೊರಬಿಡುವ ಸಾಧ್ಯತೆ ಇದೆ. ಅಲ್ಲಿಂದ ನೀರು ಬಿಟ್ಟಲ್ಲಿ ಹೊನ್ನಾವರ ತಾಲೂಕಿನಲ್ಲಿರುವ ಗೇರುಸೊಪ್ಪ ಅಣೆಕಟ್ಟೆ ಯಾವುದೇ ಕ್ಷಣದಲ್ಲೂ ತುಂಬಲಿದ್ದು, ಶರಾವತಿ ನದಿಯಲ್ಲಿ ಪ್ರವಾಹ ಉಂಟಾಗಬಹುದು ಎಂದು ಎಚ್ಚರಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts