More

    ರಾಮನಗರ ಶಾಸಕನ ವಿಡಿಯೋ ವೈರಲ್… ಗಾಜಿನ ಮನೆಲಿ ಇರುವವರು ಮತ್ತೊಬ್ಬರ ಮೇಲೆ ಕಲ್ಲು ಎಸೆಯಬಾರದು…: ಕಾಂಗ್ರೆಸ್ಸಿಗೆ ವೆಂಕನಗೌಡ್ರ ಪ್ರಶ್ನೆ

    ಗದಗ: ಹುಬ್ಬಳ್ಳಿಯಲ್ಲಿ ಜೆಡಿಎಸ್ ಕೋರ್ ಕಮಿಟಿ ಸಭೆ ನಡೆದಾಗ ಕಾಂಗ್ರೆಸ್ ಕಾರ್ಯಕರ್ತರು ಗುಂಡಾಗಿರಿ ನಡೆಸಿದ್ದಾರೆ. ಈ ಗುಂಡಾಗಿರಿ ಜೆಡಿಎಸ್ ಪಕ್ಷ ಸಹಿಸುವುದಿಲ್ಲ. ಕಾಂಗ್ರೆಸ್ ಪಕ್ಷದ ರಾಮನಗರ ಶಾಸಕರದ್ದೇ ಖಾಸಗಿ ವಿಡಿಯೋ ಹರಿದಾಡುತ್ತಿದೆ. ಅವರ ನೈತಿಕತೆ ಏನು ಎಂದು ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ಪ್ರಶ್ನಿಸಿದರು.

    ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ನಗರಕ್ಕೆ ಮೆ.4 ರಂದು ಆಗಮಿಸುವ ಪ್ರಿಯಾಂಕಾ ವಾದ್ರಾ ಅವರನ್ನು ಮುತ್ತಿಗೆ ಹಾಕಲಿದ್ದೇವೆ. ಖಾಲಿ ಕೊಡ, ಕಪ್ಪು ಪಟ್ಟಿ ಪ್ರದರ್ಶಿಸಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಹೇಳಿದರು.

    ಕಾಂಗ್ರೆಸ್ ವಿರುದ್ದ ಹರಿಹಾಯ್ದ ವೆಂಕನಗೌಡ್ರ ಅವರು, ಕಾಂಗ್ರೆಸ್ಸಿನ ಹುಲ್ಲಪ್ಪ ಮೇಟಿ ಅವರ ಪ್ರಕರಣ ಏನಾಯ್ತು. ಎನ್. ಡಿ. ತಿವಾರಿ ಕಚೇರಿಯಲ್ಲಿ ಏನು ನಡೆಯಿತು ಎಂಬುದು ಕಾಂಗ್ರೆಸ್ ಪಕ್ಷ ಮರೆತಂತಿದೆ. ಪೆನ್ ಡ್ರೈವ್ ಹಂಚಿದ ಕಾಂಗ್ರೆಸ್ ಕಾರ್ಯಕರ್ತರು ಅಪರಾಧವಲ್ಲವೇ? ಎಂದು ಪ್ರಶ್ನಿಸಿದ ವೆಂಕನಗೌಡ, ಪೆನ್ ಡ್ರೈವ್ ಪ್ರಕರಣದಲ್ಲಿ 2 ರಿಂದ 3 ಸಾವಿರ ಮಹಿಳೆಯರು ಸಂತ್ರಸ್ತರಾಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ ಹೇಳಿದ್ದಾರೆ. ಈಗ ಮಹಿಳಾ ಸಂತ್ರಸ್ತರಿಗೆ ರಕ್ಷಣೆ ನೀಡುವುದು ಯಾರು? ಅವರ ಘನತೆ ಎನಾಗುತ್ತದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ ತಿಳಿಸಬೇಕು ಎಂದು ಪ್ರಶ್ನಿಸಿದರು.

    ಕೆಪಿಸಿಸಿ ಅಧಿಕಾರವನ್ನು ಗುಂಡಾಗಳಿಗೆ ನೀಡಿದ್ದಾರೆ. ಈ ಗುಂಡಾತನ ನಡೆಯುವುದಿಲ. ಕಾಂಗ್ರೆಸ್ ಪಕ್ಷದ ಶಾಸಕರ ಖಾಸಗಿ ವಿಡಿಯೋ ವೈರಲ್ ಆಗಿರುವ ಬಗ್ಗೆ ಕೆಪಿಸಿಸಿ ಎನು ಉತ್ತರ ನೀಡುತ್ತಿಲ್ಲ ಏಕೆ ಎಂದು ಪ್ರಶ್ನಿಸಿದ ಅವರು, ಗಾಜಿನ ಮನೆಯಲ್ಲಿ ಇರುವವರು ಮತ್ತೊಬ್ಬರ ಮೇಲೆ ಕಲ್ಲು ಎಸೆಯಬಾರದು ಎಂದರು.

    ಮಂಜುಳಾ ಮೇಟಿ, ಬಸವರಾಜ ಅಪ್ಪಣ್ಣವರ, ಗಿರೀಶ ಸಂಶಿ, ಎಂ.ಎಸ್, ಪರ್ವತಗೌಡರ, ಜೋಸೆಫ್ ಉದೋಜಿ, ಜಿ.ಕೆ. ಕೊಳ್ಳಿಮಠ ಇತರರು ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts