More

    ಜಮೀನು ಸಿಕ್ಕರೆ ಕಾಳಗಿಯಲ್ಲೂ ಉದ್ಯಾನವನ ನಿರ್ಮಿಸುವೆ

    ಕಾಳಗಿ: ಪಟ್ಟಣದಲ್ಲಿ ಯಾರಾದರೂ ಆಸಕ್ತ ವ್ಯಕ್ತಿಗಳು ಮುಂದೆ ಬಂದು ಐದು ಎಕರೆ ಜಮೀನು ನೀಡಿದರೆ ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರದಿಂದ ಒಂದು ಉದ್ಯಾನವನ ನಿರ್ಮಿಸುವ ಉದ್ದೇಶ ಹೊಂದಿರುವುದಾಗಿ ವಿಧಾನ ಪರಿಷತ್ನ ನೂತನ ಸದಸ್ಯ ಸುನೀಲ್ ವಲ್ಲ್ಯಾಪುರೆ ತಿಳಿಸಿದರು.
    ಕಲಬುರಗಿಯ ತಮ್ಮ ನಿವಾಸದಲ್ಲಿ ಕಾಳಗಿ ಪಟ್ಟಣದ ಬಿಜೆಪಿ ಕಾರ್ಯಕರ್ತರಿಂದ ಗುರುವಾರ ಸನ್ಮಾನ ಸ್ವೀಕರಿಸಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರು ನನ್ನ ಮೇಲೆ ನಂಬಿಕೆಯಿಟ್ಟು ನನಗೆ ನೀಡಿರುವ ಈ ಹೊಸ ಅಧಿಕಾರ ಜಿಲ್ಲೆಯ ಅಭಿವೃದ್ಧಿಗಾಗಿ ಬಳಸಿಕೊಳ್ಳುತ್ತೇನೆ ಎಂದರು.
    ಜಿಲ್ಲೆಯ ಯಾವ ಯಾವ ನಗರ ಪಟ್ಟಣಗಳಲ್ಲಿ ಜಮೀನು ಸಿಗುತ್ತದೆಯೋ ಅಲ್ಲಲ್ಲಿ ಸರ್ಕಾರದಿಂದ ಖಾಸಗಿ ಸಹಭಾಗಿತ್ವದಲ್ಲಿ ಉದ್ಯಾನವನ ನಿರ್ಮಿಸುವ ಕೆಲಸ ಮಾಡುತ್ತೇನೆ. ಕಾಳಗಿ ಪಟ್ಟಣದಲ್ಲೂ ಊರಿಗೆ ಸಮೀಪದಲ್ಲಿರುವ ಯಾರಾದರೂ ಕನಿಷ್ಠ ಐದು ಎಕರೆ ಜಮೀನು ನೀಡಲು ಸಿದ್ಧವಿದ್ದರೆ ಅಂಥ ಸ್ಥಳದಲ್ಲಿ ಉದ್ಯಾನವನ ನಿರ್ಮಿಸಲಾಗುವುದೆಂದು ಹೇಳಿದರು.
    ಉದ್ಯಾನವನ ನಿರ್ಮಾಣದಿಂದ ಮಕ್ಕಳ ಆಟಕ್ಕೆ, ಯುವಕರ ವ್ಯಾಯಾಮ, ಓಟಕ್ಕೆ ಹಾಗೂ ಹಿರಿಯ ನಾಗರೀಕರ ವಾಕಿಂಗ್ ಮತ್ತು ಧ್ಯಾನಕ್ಕೆ ಅನುಕೂಲವಾಗುತ್ತದೆ ಎಂದರು.
    ಮುಖಂಡರಾದ ಹಣಮಂತ ಒಡೆಯರಾಜ್, ಸೂರ್ಯಕಾಂತ ಕಟ್ಟಿಮನಿ, ತಿಮ್ಮಯ್ಯ ಒಡೆಯರಾಜ್, ಕೃಷ್ಣ ಸಿಂಗಶೆಟ್ಟಿ, ಶ್ರೀನಿವಾಸ ಗುರುಮಠಕಲ್, ಇಬ್ರಾಹಿಂ ಪಾಶಾ ಗಿರಣೀಕರ್, ಲಿಂಗು ಜಾಧವ್, ಈರಣ್ಣಗೌಡ ಟೆಂಗಳಿ, ರಾಜು ಒಡೆಯರಾಜ್, ರತ್ನಮ್ಮ ಡೊಣ್ಣೂರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts