More

    ನಮ ತುಳುವೆರ್ ಸಂಘಟನೆ ಕಲಾಸೇವೆ ಅದ್ಭುತ : ಹರೀಶ್ ಪೂಜಾರಿ

    ಹೆಬ್ರಿ: ಗ್ರಾಮೀಣ ಪ್ರದೇಶದಲ್ಲಿ ಕಲಾ ಲೋಕವನ್ನೇ ಸೃಷ್ಟಿಸಿದ ಮುದ್ರಾಡಿ ನಮತುಳುವೆರ್ ಕಲಾ ಸಂಘಟನೆಯ ಕಲಾ ಸೇವೆ ಅದ್ಭುತ, ಹಳ್ಳಿಯಲ್ಲಿದ್ದುಕೊಂಡು ಜಗತ್ತಿನಾದ್ಯಂತ ಕಲಾ ಸೇವೆ ಪಸರಿಸಿದ ಪರಿ ವಿಶೇಷವಾಗಿದೆ ಎಂದು ಲೆಕ್ಕಪರಿಶೋಧಕ ಹಾಗೂ ಕನ್ನಡಕ್ಕೆ ಸೇವೆ ಸಲ್ಲಿಸುತ್ತಿರುವ ಹೆಬ್ರಿ ಹರೀಶ ಪೂಜಾರಿ ಹೇಳಿದರು.

    ನಮ ತುಳುವೆರ್ ಕಲಾ ಸಂಘಟನೆ ವತಿಯಿಂದ ಮುದ್ರಾಡಿ ನಾಟ್ಕದೂರು ಬಿ.ವಿ.ಕಾರಂತ ಬಯಲು ರಂಗಭೂಮಿಯಲ್ಲಿ ಗುರುವಾರ ನಡೆದ ‘ಅಂಬೆ’ ನಾಟಕ ಪ್ರದರ್ಶನದಲ್ಲಿ ಸುವರ್ಣ ಕರ್ನಾಟಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

    ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಸೀತಾನದಿ ಸೌಖ್ಯಯೋಗ ಟ್ರಸ್ಟ್ ಅಧ್ಯಕ್ಷ ವಿಠ್ಠಲ ಶೆಟ್ಟಿ, ಅಂಬೆ ನಾಟಕ ಅದ್ಭುತವಾಗಿದೆ. ಕಲಾವಿದರ ಶ್ರೇಯಸ್ಸೇ ನಾಟಕದ ಯಶಸ್ಸಿಗೆ ಕಾರಣ. ಅತ್ಯದ್ಭುತ ಪ್ರದರ್ಶನಗೊಂಡ ಅಂಬೆ ನಾಟಕ ಶತದಿನದ ಪ್ರದರ್ಶನ ಕಾಣಲಿ ಎಂದು ಶುಭ ಹಾರೈಸಿದರು.

    ಕಲಾ ಪೋಷಕ, ಉದ್ಯಮಿ ಯೋಗೀಶ್ ಭಟ್ ಮಾತನಾಡಿ, ನಮ್ಮೂರ ನಮತುಳುವೆರ್ ಕಲಾ ಸಂಘಟನೆಯ ನಾಟಕ ಯಶಸ್ವಿಯಾಗಿ ಮೂಡಿಬಂದಿದೆ. ಸಾಧನೆಯ ಫಲವಾಗಿ ಪ್ರದರ್ಶನ ಯಶಸ್ವಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ರಂಗನಟ ನಿರ್ದೇಶಕ, ನಮ ತುಳುವೆರ್ ಕಲಾ ಸಂಘಟನೆಯ ಅಧ್ಯಕ್ಷ ಸುಕುಮಾರ್ ಮೋಹನ್ ಮಾತನಾಡಿ, ನವೆಂಬರ್ ಒಳಗೆ ಶತದಿನ ಪ್ರದರ್ಶನ ಕಾಣುವಂತಾಗಲು ಸಹಕಾರ ಕೋರಿದರು. ಸುಕುಮಾರ್ ಮೋಹನ್ ಸ್ವಾಗತಿಸಿದರು. ವಿಕಾಸ್ ಮೈಸೂರು ನಿರೂಪಿಸಿ ವಂದಿಸಿದರು.

    ಕಲಾವಿದರಿಗೆ ಸನ್ಮಾನ

    ಆಸ್ಟ್ರೇಲಿಯಾದಲ್ಲಿ ಲೆಕ್ಕಪರಿಶೋಧಕರಾಗಿ ಹಗೂ ಕನ್ನಡದ ಸೇವೆಯಲ್ಲಿ ನಿರತರಾಗಿರುವ ಹೆಬ್ರಿ ಹರೀಶ ಪೂಜಾರಿ ದಂಪತಿಗೆ ಸುವರ್ಣ ಕರ್ನಾಟಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಳಿಕ ನಮ ತುಳುವೆರ್ ಕಲಾ ಸಂಘಟನೆಯ ಎಲ್ಲಾ ಕಲಾವಿದರನ್ನು ಮತ್ತು ರಂಗ ನಿರ್ದೇಶಕ ಮೈಸೂರಿನ ವಿಕಾಸ್ ದಂಪತಿಯನ್ನು ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts