More

    ಗುತ್ತಿಗೆ ಏಜೆನ್ಸಿಯಿಂದ ಹಣ ದುರ್ಬಳಕೆ ಆರೋಪ; ಇಎಸ್‌ಐ, ಪಿಎಫ್ ಜಮೆಗೆ ಆಗ್ರಹಿಸಿ ಪ್ರತಿಭಟನೆ

    ಧಾರವಾಡ: ಸಮಾಜ ಕಲ್ಯಾಣ ಇಲಾಖೆ ಅಽÃನದ ವಸತಿ ನಿಲಯಗಳಲ್ಲಿ ಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿರುವವರ ಇಎಸ್‌ಐ, ಪಿಎಫ್ ಜಮಾ ಮಾಡಿಲ್ಲ. ಗುತ್ತಿಗೆದಾರನೊಂದಿಗೆ ಇಲಾಖೆಯ ಅಽಕಾರಿಗಳೂ ಶಾಮೀಲಾಗಿದ್ದಾರೆ ಎಂದು ಆರೋಪಿಸಿ ಹೊರಗುತ್ತಿಗೆ ನೌಕರರು ಜಿಲ್ಲಾಽಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
    ಮೆಟ್ರಿಕ್ ಪೂರ್ವ ವಸತಿ ನಿಲಯಗಳಲ್ಲಿ ಸುಮಾರು ೨೫೦ ಹೊರಗುತ್ತಿಗೆ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಹುಬ್ಬಳ್ಳಿಯ ಭಾರತ ಎಕ್ಸ್ ಸಂಸ್ಥೆ ಪೂರೈಸಿದೆ. ೨೦೨೨ರ ಸೆಪ್ಟೆಂಬರ್‌ನಿAದ ೨೦೨೩ರ ಮಾರ್ಚ್ವರೆಗಿನ ಸುಮಾರು ೩೦ ಲಕ್ಷ ರೂ. ಹಣವನ್ನು ಗುತ್ತಿಗೆದಾರ ಸಂಸ್ಥೆ ಲಪಟಾಯಿಸಿದೆ. ಈ ಕುರಿತು ಸಂಬAಧಪಟ್ಟ ಅಽಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಏಜೆನ್ಸಿಯೊಂದಿಗೆ ಕೆಲ ಅಽಕಾರಿಗಳು, ಸಿಬ್ಬಂದಿ ಶಾಮೀಲಾಗಿರುವ ಶಂಕೆ ಇದೆ. ಈ ಬಗ್ಗೆ ಕ್ರಮ ಕೈಗೊಂಡು ಗುತ್ತಿಗೆ ನೌಕರರ ಇಎಸ್‌ಐ, ಪಿಎಫ್ ಹಣವನ್ನು ಕೂಡಲೇ ಜಮೆ ಮಾಡಬೇಕು ಎಂದು ಒತ್ತಾಯಿಸಿದರು. ಈ ಕುರಿತು ಸಮಾಜ ಕಲ್ಯಾಣ ಇಲಾಖೆ ಅಪರ ಜಂಟಿ ನಿರ್ದೇಶಕ ಎಂ.ಎಸ್. ಅಲ್ಲಬಕಾಷ್ ಅವರಿಗೆ ಮನವಿ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts