More

    ಕೆಂಪು ಚಿನ್ನ’ ಬೆಳೆದು ಸಿರಿವಂತನಾದ

    ವಿಜಯಪುರ: ಒಂದು ಸಮಯದಲ್ಲಿ ‘ಟೊಮ್ಯಾಟೋ’ ಬೆಳೆದ ರೈತನಿಗೆ ಅಸಲೂ ಸಿಗುತ್ತಿಲ್ಲ ಎಂದು ಆತನ ಕಣ್ಣಲ್ಲಿ ನೀರು ಹಾಕಿಸಿತ್ತು. ಆದರೆ ಈಗ ಟೊಮ್ಯಾಟೋ ಬೆಲೆ ಗಗನಕ್ಕೇರಿದ್ದು, ಅದನ್ನು ‘ಕೆಂಪುಚಿನ್ನ’ಕ್ಕೆ ಹೋಲಿಸಲಾಗುತ್ತಿದೆ. ಬೆಳೆದ ರೈತನನ್ನು ಸಿರಿವಂತನನ್ನಾಗಿಸುತ್ತಿದೆ.
    ಕಳೆದ ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ, ಮಾರುಕಟ್ಟೆಗೆ ಟೊಮ್ಯಾಟೋ ಬರದೇ ಬೇಡಿಕೆ ಅಧಿಕವಾಗಿ ಬೆಲೆ ಗಗನಕ್ಕೆ ಏರಿತು. ಅದರ ಪರಿಣಾಮ ಟೊಮ್ಯಾಟೋ ಬೆಳೆದ ರೈತ ಹೊಲಕ್ಕೆ ಕಾವಲು ಕಾಯುವಂತಹ ಸ್ಥಿತಿ ಬಂದಿದೆ.

    ವಿಜಯಪುರ ತಾಲೂಕಿನ ಅಲಿಯಾಬಾದ್ 2ನೇ ತಾಂಡಾದ ಭೀಮು ಭಾವಸಿಂಗ್ ಲಮಾಣಿ ಎಂಬ ರೈತ ನಾಲ್ಕು ಎಕರೆ ಜಮೀನಿನಲ್ಲಿ ಟೊಮ್ಯಾಟೋ ಬೆಳೆದಿದ್ದು, ಇಳುವರಿಯೂ ಅಧಿಕವಾಗಿ ಬಂದಿದ್ದು, ಕಳೆದ ಒಂದೂವರೆ ತಿಂಗಳಿನಲ್ಲಿ ಬರೋಬರಿ 50 ಲಕ್ಷ ರೂ. ಗೂ ಅಧಿಕ ಲಾಭಗಳಿಸಿದ್ದಾರೆ.

    ನಿತ್ಯವೂ 100 ರಿಂದ 150 ಟ್ರೇ ಗೂ ಅಧಿಕ ಟೊಮ್ಯಾಟೋವನ್ನು ವಿಜಯಪುರದ ಎಪಿಎಂಸಿ ಮಾರುಕಟ್ಟೆಗೆ ತಂದು ಮಾರಾಟ ಮಾಡುವ ಮೂಲಕ ಲಕ್ಷ ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಒಂದು ಟ್ರೇನಲ್ಲಿ 25 ಕೆಜಿ ಟೊಮ್ಯಾಟೋ ಇರುತ್ತದೆ. ಅದಕ್ಕೆ ಆರಂಭದಲ್ಲಿ 800 ರೂ. ದಿಂದ ಒಂದು ಸಾವಿರದವರೆಗೆ ಬೆಲೆ ಸಿಕ್ಕಿತ್ತು. ಆದರೆ ಕಳೆದ ಜೂನ್, ಜುಲೈನಲ್ಲಿ ಒಂದು ಟೇಗೆ 2500 ರೂ. ದಿಂದ 3 ಸಾವಿರ ರೂ. ವರೆಗೆ ಮಾರಾಟವಾಗುತ್ತಿದೆ.

    ನಿತ್ಯ 25 ಆಳುಗಳಿಂದ ಟೊಮ್ಯಾಟೋವನ್ನು ಗಿಡದಿಂದ ಬಿಡಿಸಿ, ಟ್ರೇಗಳಿಗೆ ತುಂಬಿಸಿ ವಾರದಲ್ಲಿ ಆರು ದಿನವೂ ಬಿಡದಂತೆ ಮಾಲು ಕಳಿಸುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ತಿಂಗಳೊಳಗೆ ಕೋಟಿ ರೂ. ವರೆಗೆ ಲಾಭ ಮಾಡುವ ನಿರೀಕ್ಷೆ ಇದೆ ಎಂದು ಹೇಳುತ್ತಾರೆ ರೈತ ಭೀಮು ಲಮಾಣಿ. ಇವರ ಅದೃಷ್ಟವನ್ನು ಕಂಡು ಸ್ಥಳೀಯ ರೈತರು ತಾವೇಕೆ ಈ ಬಾರಿ ಟೊಮ್ಯಾಟೋ ಬೆಳೆ ಬೆಳೆಯಲಿಲ್ಲ ಎಂದು ಹಪಹಪಿಸುತ್ತಿದ್ದಾರೆ.

    ಪ್ರತಿ ಬಾರಿಯೂ ಒಂದಿಲ್ಲ ಒಂದು ಕಾರಣದಿಂದ ಅದೃಷ್ಟ ಕೈಕೊಡುತ್ತಿತ್ತು. ಈ ಬಾರಿ ಟೊಮ್ಯಾಟೋ ರೂಪದಲ್ಲಿ ಕೈ ಹಿಡಿದಿದೆ ಎಂದೇ ಹೇಳಬೇಕು. ಬೇಡಿಕೆ ಅಧಿಕವಾಗಿರುವುದರಿಂದ ಹಾಗೂ ದಾಸ್ತಾನು ಕಡಿಮೆ ಇರುವುದರಿಂದ ಧಾರಣೆ ಗಗನಕ್ಕೇರಿದೆ.
    ಭೀಮು ಲಮಾಣಿ, ಟೊಮೆಟೊ ಬೆಳೆದ ರೈತ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts