More

    54 ಪೈಸೆಯ ಷೇರು ಈಗ 116 ರೂಪಾಯಿ: ಈ ಫಾರ್ಮಾ ಸ್ಟಾಕ್​ನಲ್ಲಿ ಹೂಡಿಕೆ ಮಾಡಿದವರು ಈಗ ಕುಬೇರರು

    ಮುಂಬೈ: ಷೇರುಪೇಟೆಯ ಕಾರ್ಯಚಟುವಟಿಕೆಯಲ್ಲಿನ ಏರಿಳಿತದ ನಡುವೆ, ಮೈಕ್ರೋ ಕ್ಯಾಪ್ ಫಾರ್ಮಾ ಕಂಪನಿ ರೆಮಿಡಿಯಮ್ ಲೈಫ್ ಕೇರ್ ಲಿಮಿಟೆಡ್​ (Remedium Lifecare Ltd) ಷೇರುಗಳ ಬೆಲೆ ಉತ್ತಮ ಏರಿಕೆ ದಾಖಲಿಸುತ್ತಿದ್ದು, 116.55 ರೂ. ತಲುಪಿದೆ.

    ಈ ಕಂಪನಿಯ ಮಾರುಕಟ್ಟೆ ಮೌಲ್ಯ ಅಂದಾಜು 1140 ಕೋಟಿ ರೂ. ಆಗಿದೆ. ಈ ಕಂಪನಿಯ ಷೆರುಗಳ 52 ವಾರದ ಗರಿಷ್ಠ ಬೆಲೆ ರೂ.180 ಮತ್ತು ಕನಿಷ್ಠ ಬೆಲೆ ರೂ.40.86.

    ಕಳೆದ ಒಂದು ತಿಂಗಳಲ್ಲಿ ರೆಮಿಡಿಯಂ ಲೈಫ್ ಕೇರ್‌ನ ಷೇರುಗಳು ಹೂಡಿಕೆದಾರರಿಗೆ ಶೇಕಡಾ 19 ರಷ್ಟು ಲಾಭವನ್ನು ನೀಡಿವೆ. ಷೇರುಗಳ ಬೆಲೆ ರೂ. 95 ರಿಂದ ರೂ. 115 ರ ಮಟ್ಟವನ್ನು ತಲುಪಿದೆ.

    ಕಳೆದ 1 ವರ್ಷದಲ್ಲಿ ಈ ಷೇರುಗಳು ಹೂಡಿಕೆದಾರರಿಗೆ 180 ಪ್ರತಿಶತದಷ್ಟು ಲಾಭವನ್ನು ನೀಡಿವೆ. 5 ವರ್ಷಗಳ ಅವಧಿಯಲ್ಲಿ ಹೂಡಿಕೆದಾರರಿಗೆ ಮಲ್ಟಿಬ್ಯಾಗರ್ ಲಾಭ ನೀಡಿವೆ. ಏಪ್ರಿಲ್ 30, 2019 ರಂದು ಈ ಷೇರಿನ ಬೆಲೆ 54 ಪೈಸೆ ಇತ್ತು. ಅಲ್ಲಿಂದ ಇಲ್ಲಿಯವರೆಗೆ ಈ ಷೇರುಗಳ ಬೆಲೆ 21000 ಪ್ರತಿಶತದಷ್ಟು ಏರಿಕೆ ಕಂಡಿದೆ.

    ರೆಮಿಡಿಯಮ್ ಲೈಫ್ ಕೇರ್ ಲಿಮಿಟೆಡ್ ಕಂಪನಿಯು ಮುಂದುವರಿದ ಫಾರ್ಮಾ ಮಧ್ಯವರ್ತಿಗಳು ಮತ್ತು ಇತರ ಫಾರ್ಮಾ ಉತ್ಪನ್ನಗಳ ವ್ಯಾಪಾರದಲ್ಲಿ ತೊಡಗಿಸಿಕೊಂಡಿದೆ. ಕಳೆದ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಕಂಪನಿಯು ತನ್ನ ಮಾರಾಟದಲ್ಲಿ ಶೇಕಡಾ 939 ಮತ್ತು ನಿವ್ವಳ ಲಾಭದಲ್ಲಿ ಶೇಕಡಾ 4425 ಹೆಚ್ಚಳವನ್ನು ವರದಿ ಮಾಡಿದೆ. ಇತ್ತೀಚೆಗೆ ರೆಮಿಡಿಯಮ್ ಲೈಫ್ ಕೇರ್ ಲಿಮಿಟೆಡ್ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಿದ್ದು, ಹೈದರಾಬಾದ್ ಬಳಿ 1.30 ಲಕ್ಷ ಕೆಲಸದ ಸೌಲಭ್ಯದ ನೆಲೆಯನ್ನು ನಿರ್ಮಿಸಿದೆ.

    ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ರೆಮಿಡಿಯಮ್ ಲೈವ್ ಕೇರ್‌ನ ಷೇರುಗಳನ್ನು ವಿಭಜಿಸಲಾಗಿದೆ. ರೂ. 10 ಮುಖಬೆಲೆಯ ಷೇರುಗಳನ್ನು ರೂ. 5 ಮುಖಬೆಲೆಯ ಎರಡು ಷೇರುಗಳಾಗಿ ಪರಿವರ್ತಿಸಲಾಯಿತು. ಇದರ ನಂತರ, ಮತ್ತೊಮ್ಮೆ 23 ಫೆಬ್ರವರಿ 2024 ರಂದು ಷೇರು ವಿಭಜನೆ ಮಾಡಿ, ರೂ5 ರ ಮುಖಬೆಲೆಯ ಷೇರುಗಳನ್ನು ರೂ. 1 ರ ಮುಖಬೆಲೆಯ ಐದು ಷೇರುಗಳಾಗಿ ಪರಿವರ್ತಿಸಲಾಯಿತು. ಕಂಪನಿಯು ಜುಲೈ 28, 2023 ರಂದು 9:5 ಅನುಪಾತದಲ್ಲಿ ಬೋನಸ್ ಷೇರುಗಳನ್ನು ನೀಡಿದೆ.

    ಇಂದು ಮೊದಲ ಹಂತದ ಮತದಾನ: ಚುನಾವಣೆ ಕಾಲದಲ್ಲಿ ಷೇರು ಹೂಡಿಕೆದಾರರು ಏನು ಮಾಡಬೇಕು? ತಜ್ಞರು ಏನೆನ್ನುತ್ತಾರೆ?

    ಮುಖೇಶ್ ಅಂಬಾನಿ ಕಂಪನಿಯ ಈ ಷೇರು ಬೆಲೆ ರೂ. 22: ಹೂಡಿಕೆದಾರರು ಮುಗಿಬಿದ್ದು ಖರೀದಿ ಮಾಡುತ್ತಿರುವುದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts