More

    ಕುಡುಕರ ತಾಣವಾದ ಪಶುವೈದ್ಯ ಆಸ್ಪತ್ರೆ

    ಶನಿವಾರಸಂತೆ: ಸಮೀಪದ ಆಲೂರು ಸಿದ್ದಾಪುರ ಪಶುವೈದ್ಯ ಆಸ್ಪತ್ರೆ ಕಟ್ಟಡದ ಆವರಣ ಕುಡುಕರ ಆಶ್ರಯ ತಾಣವಾಗಿದೆ.

    ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ಕಚೇರಿ ಮತ್ತು ಪಶುವೈದ್ಯ ಆಸ್ಪತ್ರೆಯ ಒಂದೇ ಪ್ರವೇಶದ್ವಾರದ ಮುಂಭಾಗವೇ ಸಾರ್ವಜನಿಕರು ಓಡಾಡಬೇಕಾಗಿದೆ. ಆದರೆ, ರಾತ್ರಿ ಇಲ್ಲಿ ಸೇರುವ ಪುಂಡಪೋಕರಿಗಳ ಕುಡಿಯಲು ಹಾಗೂ ಜೂಜಾಟದ ತಾಣವಾಗಿದೆ.

    ಇದರಿಂದ ಮದ್ಯದ ಪೌಚ್‌ಗಳು, ನೀರಿನ ಬಾಟಲ್, ತಿಂಡಿ ತಿನಿಸುಗಳ ಪ್ಲಾಸ್ಟಿಕ್‌ಗಳು ಆಸ್ಪತ್ರೆಯ ಆವರಣದ ಎಲ್ಲೆಂದರಲ್ಲಿ ಬಿದ್ದಿರುತ್ತವೆ. ಬೆಳಗ್ಗೆ ಆಸ್ಪತ್ರೆಗೆ ಬರುವ ಸಿಬ್ಬಂದಿಗೆ ಗಲೀಜನ್ನು ಸ್ವಚ್ಛಗೊಳಿಸುವುದೇ ನಿತ್ಯದ ಕೆಲಸವಾಗಿದೆ.

    ಆದ್ದರಿಂದ ಗ್ರಾಪಂ ಕಚೇರಿಯ ಮುಂಭಾಗ ಸಿಸಿ ಕ್ಯಾಮರಾ ಅಳವಡಿಸಿದರೆ ಪುಂಡಪೋಕರಿಗಳನ್ನು ಪತ್ತೆ ಮಾಡಿ, ಪೊಲೀಸ್ ಠಾಣೆಗೆ ದೂರು ನೀಡಬಹುದು. ಜತೆಗೆ ಗ್ರಾಪಂ ಕಾರ್ಯಾಲಯ ಮತ್ತು ಪಶು ಆಸ್ಪತ್ರೆ ಮುಂಭಾಗ ತಡೆಗೋಡೆ, ಗೇಟ್ ನಿರ್ಮಿಸಿದರೆ ಕುಡುಕರ ಹಾವಳಿಯನ್ನು ತಪ್ಪಸಬಹುದು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    ಆಸ್ಪತ್ರೆಯ ಆವರಣ ನಿತ್ಯ ಕುಡುಕರ ತಾಣವಾಗಿದೆ. ಬೆಳಗ್ಗೆ ಆಸ್ಪತ್ರೆಗೆ ಬಂದರೆ ಮದ್ಯದ ಪೌಚ್‌ಗಳು, ನೀರಿನ ಬಾಟಲ್, ತಿಂಡಿ ತಿನಿಸುಗಳ ಪ್ಲಾಸ್ಟಿಕ್‌ಗಳು ಎಲ್ಲೆಂದರಲ್ಲಿ ಬಿದ್ದಿರುತ್ತವೆ. ಪೊಲೀಸರು ರಾತ್ರಿ ಇಲ್ಲಿ ಬೀಟ್ ಮೂಲಕ ಕುಡುಕರ ಹಾವಳಿಯನ್ನು ತಪ್ಪಿಸಬೇಕು.
    ಡಾ.ಶೈಲಜಾ, ಪಶು ವೈದ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts