More

    ಕರೊನಾ ಸೇನಾನಿಗಳಿಗೆ ನಿತ್ಯ ದಾಸೋಹ, ಪವಾಡ ಶ್ರೀ ಬಸವಣ್ಣ ದೇವರಮಠದಲ್ಲಿ ಕಾರ್ಕ್ರಮಕ್ಕೆ ಚಾಲನೆ ನೀಡಿದ ಶ್ರೀಗಳು

    ನೆಲಮಂಗಲ: ಕರೊನಾ ಸೇನಾನಿಗಳಿಗಾಗಿ ನಗರದ ಪವಾಡ ಶ್ರೀ ಬಸವಣ್ಣ ದೇವರಮಠದಲ್ಲಿ ಬುಧವಾರ ದಾಸೋಹ ವ್ಯವಸ್ಥೆ ಆರಂಭಿಸಿದ್ದು, ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ ಚಾಲನೆ ನೀಡಿದರು.

    ದಾಸೋಹ ಆರಂಭಕ್ಕೂ ಮುನ್ನ ನಗರಸಭೆಯಿಂದ ಔಷಧ ಸಿಂಪಡಿಸಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಮಾಹಿತಿ ತಿಳಿದ ಕೆಲ ಪೊಲೀಸ್ ಇಲಾಖೆ, ನಗರಸಭೆ ಅಧಿಕಾರಿ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಸ್ಥಳಕ್ಕಾಗಮಿಸಿ ಊಟ ಮಾಡಿದರು.

    ಕಳೆದ ವರ್ಷವೂ ಲಾಕ್‌ಡೌನ್ ವೇಳೆ, ರಾಜ್ಯದ ವಿವಿಧ ಜಿಲ್ಲೆಗಳಿಂದ ಉದ್ಯೋಗವನ್ನರಸಿ ಬಂದು ಸಂಕಷ್ಟಕ್ಕೆ ಸಿಲುಕಿದ್ದ ಬಡಕೂಲಿಕಾರ್ಮಿಕರ ನೆರವಿಗೆ ಮುಂದಾಗಿದ್ದ ಶ್ರೀಮಠ ಇಂದು ಜೀವದ ಹಂಗನ್ನು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಕರೊನಾ ಸೇನಾನಿಗಳಿಗಾಗಿ ಮಠದಲ್ಲಿ ದಾಸೋಹ ವ್ಯವಸ್ಥೆ ಆರಂಭಿಸಿರುವುದಾಗಿ ಶ್ರೀ ಸಿದ್ದಲಿಂಗಸ್ವಾಮೀಜಿ ತಿಳಿಸಿದರು.

    14 ದಿನಗಳ ಕಾಲ ಜನತಾ ಕರ್ಫ್ಯೂ ಘೋಷಣೆ ಹಿನ್ನಲೆ ಸಂಕಷ್ಠಕ್ಕೆ ಸಿಲುಕಬಹುದಾದ ಕೂಲಿಕಾರ್ಮಿಕರು ಹಾಗೂ ಕರೊನಾ ಸೇನಾನಿಗಳನ್ನು ಪ್ರಮುಖವಾಗಿಟ್ಟುಕೊಂಡು ಸ್ವಾಮೀಜಿ ಜತೆ ಚರ್ಚಿಸಿ ದಾಸೋಹ ವ್ಯವಸ್ಥೆ ಆರಂಭಿಸಲಾಗಿದೆ. ತಾಲೂಕು ಆಡಳಿತದ ಜತೆಗೆ ಕ್ಷೇತ್ರದ ಶಾಸಕರು ಸಹಕಾರ ನೀಡಿದ್ದಾರೆ. ನಿತ್ಯ ಶುಚಿ ಹಾಗೂ ರುಚಿಯಾದ ಬೆಳಗಿನ ಉಪಾಹಾರ (300 ಮಂದಿಗೆ) ಜತೆಗೆ ಮದ್ಯಾಹ್ನದ ಊಟ (600ಮಂದಿಗೆ) ದ ವ್ಯವಸ್ಥೆ ಮಾಡುವುದಾಗಿ ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಮಲ್ಲಯ್ಯ ಮಾಹಿತಿ ನೀಡಿದರು.

    ಕರೊನಾ ಸೇನಾನಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸುವ ಜತೆಗೆ ದೈಹಿಕ ಅಂತರ ಕಾಯ್ದುಕೊಂಡು ಬೆಳಗಿನ ಉಪಾಹಾರ ಹಾಗೂ ಮಧ್ಯಾಹ್ನದ ಊಟ ಸೇವಿಸಬೇಕು. ಸಮವಸ್ತ್ರವಿರದ ಸಿಬ್ಬಂದಿ ಇಲಾಖೆಯ ಗುರುತಿನ ಚೀಟಿ ಹೊಂದಿರಬೇಕೆಂಬುದು ಶ್ರೀಮಠದ ಮನವಿ ಮಾಡಿದೆ.

    ಸ್ವಯಂಸೇವಕರಾದ ಯಾಡಾಳು ಸತೀಶ್, ಗಣೇಶ್, ರೋಟರಿ ನಿರ್ದೇಶಕ ಶಿವಶಂಕರ್‌ಪ್ರಸಾದ್, ಬಸವ ಸಮುದಾಯ ಭವನ ವ್ಯವಸ್ಥಾಪಕ ಗಂಗಾಧರ್, ಬಾಣಸಿಗ ನಾಗರಾಜು ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts