More

    ಕಮಡೊಳ್ಳಿಗಿಲ್ಲ ಲಾಕ್​ಡೌನ್

    ಕಮಡೊಳ್ಳಿ: ದೇಶದೆಲ್ಲೆಡೆ ಲಾಕ್​ಡೌನ್ ಘೊಷಣೆ ಆಗಿ 144 ಸೆಕ್ಷನ್ ಜಾರಿಯಲ್ಲಿದೆ. ಆದರೆ, ಈ ಆದೇಶ ಕಮಡೊಳ್ಳಿ ಗ್ರಾಮಕ್ಕೆ ಅನ್ವಯಿಸá-ವುದಿಲ್ಲ ಎಂಬಂತಿದೆ.

    ಕಮಡೊಳ್ಳಿ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘದ ನ್ಯಾಯಬೆಲೆ ಅಂಗಡಿಯಲ್ಲಿ ಸೀಮೆ ಎಣ್ಣೆ ವಿತರಣೆ ವೇಳೆ ಕಂಡá-ಬಂದ ಜನಸಂದಣಿ ಇಂತಹ ಅನá-ಮಾನ ಮೂಡಲು ಕಾರಣವಾಗಿದೆ.

    ಗ್ರಾಮದಲ್ಲಿ 18 ಸಾವಿರ ಜನಸಂಖ್ಯೆಗೆ 500ಕ್ಕೂ ಅಧಿಕ ರೇಷನ್ ಕಾರ್ಡ್ ಇದ್ದರೂ ಒಂದೇ ನ್ಯಾಯಬೆಲೆ ಅಂಗಡಿ ಇದೆ. ನ್ಯಾಯಬೆಲೆ ಅಂಗಡಿದಾರರು ಸಾಮಾಜಿಕ ಅಂತರದ ಬಾಕ್ಸ್ ಹಾಕಿ ಜನರಿಗೆ ಅಂತರ ಕಾಯ್ದುಕೊಳ್ಳಲು ಸೂಚಿಸಿದ್ದರೂ ಇದಕ್ಕೆ ಜನರು ಕ್ಯಾರೇ ಎನ್ನುತ್ತಿಲ್ಲ.

    ರೇಷನ್ ಕಾರ್ಡ್ ಸರದಿಯ ಸೀಮೆ ಎಣ್ಣೆ ಪಡೆಯಲು ಒಬ್ಬರಿಗೊಬ್ಬರು ತಾಗುವಂತೆ ಅಂಟಿಕೊಂಡು ನಿಂತಿದ್ದು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರ ಮತ್ತು ಜಿಲ್ಲಾಡಳಿತ ಕೈಗೊಂಡ ಕರೊನಾ ಜಾಗೃತಿ ಕಾರ್ಯಕ್ಕೆ ಜನರು ಕಿಮ್ಮತ್ತು ನೀಡದೆ ಮೊದಲಿನ ವಾಸ್ತವದ ಸ್ಥಿತಿಯಂತೇ ಬದುಕುತ್ತಿರುವುದು ರೋಗ ಬರಮಾಡಿಕೊಳ್ಳುವ ಲಕ್ಷಣದಂತೆ ಗೋಚರಿಸುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿದರೆ ಒಳಿತು ಎಂಬುದು ಬಹುತೇಕರ ಅಭಿಪ್ರಾಯವಾಗಿದೆ.

    ಕರೊನಾ ವೈರಸ್ ಕುರಿತು ಜನರಲ್ಲಿ ಜಾಗೃತಿ ಇಲ್ಲದಿರá-ವುದರಿಂದ ಹೀಗೆ ಗುಂಪು-ಗುಂಪಾಗಿ ಸೇರಲು ಪ್ರಮá-ಖ ಕಾರಣವಾಗಿದೆ. ಸೀಮೆ ಎಣ್ಣೆ ವಿತರಣೆ ವೇಳೆ ಸಹಕಾರಿ ಸಂಘದ ಮುಂದೆ ಜನಜಂಗá-ಳಿಯಾಗದಂತೆ ತಡೆಯಲು ಇಂದಿನಿಂದಲೇ ಪೊಲೀಸ್ ಸಿಬ್ಬಂದಿ ನೇಮಿಸಲಾಗá-ವುದು. | ಬಸವರಾಜ ಮಳವಂಕಿ, ತಹಸೀಲ್ದಾರ್, ಕುಂದಗೋಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts