More

    ಪ್ಲಾಸ್ಟಿಕ್ ಬಳಕೆಗಿಲ್ಲ ಕಡಿವಾಣ

    ಹಟ್ಟಿಚಿನ್ನದಗಣಿ: ಪರಿಸರಕ್ಕೆ ಹಾನಿ ಮಾಡುವ ಪ್ಲಾಸ್ಟಿಕ್ ಮಾರಾಟ ಮತ್ತು ಬಳಕೆದಾರರ ವಿರುದ್ಧ ಕಾನೂನು ಕ್ರಮಕೈಗೊಳ್ಳುವ ವಿಚಾರದಲ್ಲಿ ಪಟ್ಟಣ ಪಂಚಾಯಿತಿ ಹಾಗೂ ಅಧಿಸೂಚಿತ ಪ್ರದೇಶ ಸಮಿತಿ ವ್ಯಾಪ್ತಿಯ ಆಡಳಿತ ಸಂಪೂರ್ಣ ವಿಫಲವಾಗಿವೆ. ಕ್ರಮದ ಬಗ್ಗೆ ಕಳೆದ 2ರಿಂದ 3 ವರ್ಷದಲ್ಲಿಹಲವು ಬಾರಿ ನೋಟಿಸ್ ಹೊರಡಿಸಿದ್ದರೂ ಕ್ರಮ ವಹಿಸಲು ಹಿಂದೇಟು ಹಾಕಲಾಗುತ್ತಿದೆ.

    ತಂಪು ಪಾನೀಯ, ಹೋಟೆಲ್, ಬೇಕರಿಗಳಲ್ಲಿ ತಿಂಡಿ-ತಿನಿಸುಗಳ ಮಾರಾಟಕ್ಕೆ ಪ್ಲಾಸ್ಟಿಕ್ ಬಳಸಲಾಗುತ್ತಿದೆ. ಅಂಗಡಿ-ಮುಂಗಟ್ಟುಗಳಲ್ಲಿ ಪ್ಲಾಸ್ಟಿಕ್ ಬಳಕೆ ಸಾಮಾನ್ಯವಾಗಿದೆ. ಪ್ಲಾಸ್ಟಿಕ್ ಉಪಯೋಗಿಸಿದ ನಂತರ ರಸ್ತೆ, ಗಟಾರಗಳಿಗೆ ಎಸೆಯುವುದರಿಂದ ತ್ಯಾಜ್ಯ ಸರಾಗವಾಗಿ ಹರಿಯದೆ ಸಮಸ್ಯೆಯಾಗುತ್ತಿದೆ. ಇದರಿಂದಾಗಿ ಚರಂಡಿಗಳು ಎಲ್ಲೆಂದರಲ್ಲಿ ತುಂಬಿ ಹರಿಯುತ್ತಿದ್ದು, ಕ್ರಿಮಿಕೀಟಗಳು ಉತ್ಪತ್ತಿಯಾಗುತ್ತಿವೆ.

    ಮಣ್ಣಿನಲ್ಲಿ ಸೇರಿಕೊಳ್ಳುತ್ತಿರುವ ಪ್ಲಾಸ್ಟಿಕ್ ಮಳೆ ನೀರು ನೆಲದಲ್ಲಿ ಇಂಗುವುದನ್ನು ತಡೆದು ಅಂತರ್ಜಲ ಮಟ್ಟ ಕುಸಿಯಲು ಕಾರಣವಾಗಿದೆ. ಇನ್ನು ಎಲ್ಲೆಂದರಲ್ಲಿ ತರಕಾರಿ ತಾಜ್ಯ-ತಿಂಡಿ ಪೊಟ್ಟಣಗಳನ್ನು ಎಸೆಯುತ್ತಿರುವುದರಿಂದ ಮೇವು-ನೀರು ಸಿಗದೆ ಒದ್ದಾಡುತ್ತಿರುವ ಜಾನುವಾರುಗಳು ಪ್ಲಾಸ್ಟಿಕ್ ತಿನ್ನುತ್ತಿವೆ.
    ಒಂದೆರಡು ಬಾರಿ ಪ್ಲಾಸ್ಟಿಕ್ ಬಳಸುವ ಒಂದೆರಡು ಅಂಗಡಿಗಳಿಗೆ ದಂಡ ಹಾಕಿದ್ದ ಪ.ಪಂ ನಂತರ ನಿಯಂತ್ರಿಸುವ ಗೋಜಿಗೆ ಹೋಗದಿರುವುದರಿಂದ ಬಳಕೆ ಅವ್ಯಾಹತವಾಗಿ ನಡೆದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts