More

    ಉತ್ಸಾಹ ಮತದಾನದವರೆಗೂ ಇರಲಿ-ಸಂಸದ ಜಿ.ಎಂ.ಸಿದ್ದೇಶ್ವರ

    ದಾವಣಗೆರೆ: ದಾವಣಗೆರೆಗೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದರಿಂದಾಗಿ ಜಿಲ್ಲೆಯ ಮತದಾರರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಇದು ವಿಧಾನಸಭೆ ಚುನಾವಣೆವರೆಗೂ ನಿರಂತರವಾಗಿರಲಿ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.
    ವೀರಮದಕರಿ ನಾಯಕ ವೃತ್ತದಲ್ಲಿ ದಾವಣಗೆರೆ ಸ್ಮಾರ್ಟ್‌ಸಿಟಿ ಲಿಮಿಡೆಟ್‌ನಿಂದ 4.30 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕಲ್ಯಾಣಿ ಹೊಂಡವನ್ನು ಭಾನುವಾರ ಲೋಕಾರ್ಪಣೆ ಮಾಡಿ ಮಾತನಾಡಿ, ಮತದಾನ ಮಾಡುವವರೆಗೂ ಇದೇ ಉತ್ಸಾಹ ಇರಬೇಕು ಎಂದರು.
    ಬಿಜೆಪಿ ಅವಧಿಯಲ್ಲಿ ನಗರದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿವೆ. ಪಾಲಿಕೆ ಹಾಗೂ ದೂಡಾ ವತಿಯಿಂದ ಇದುವರೆಗೆ ಡಾ,ಬಿ.ಆರ್.ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ, ಬಸವಣ್ಣ, ಶಿವಾಜಿ ಪ್ರತಿಮೆಗಳನ್ನು ನಿರ್ಮಿಸಲಾಗಿದೆ. ಇನ್ನೂ ಅಗತ್ಯವಿರುವ ಪ್ರತಿಮೆ ಅಗತ್ಯವಿದ್ದಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.
    ಹರಿಹರೇಶ್ವರ ದೇವಸ್ಥಾನ, ನೀರ್ಥಡಿ ರಂಗಸ್ವಾಮಿ ದೇವಸ್ಥಾನ, ಮಾಯಕೊಂಡದಲ್ಲಿ ಹಿರೇ ಮದಕರಿನಾಯಕರ ಸಮಾಧಿ ಹಾಗೂ ಹೊದಿಗೆರೆಯಲ್ಲಿ ಷಹಜಿ ರಾಜೇ ಬೋಂಸ್ಲೆ ಅವರ ಸಮಾಧಿ ಸ್ಥಳ ಇತ್ಯಾದಿ ಅಭಿವೃದ್ಧಿ ಪಡಿಸಬೇಕಿದೆ. ಹೀಗೆ ಮಾಡುವ ಮೂಲಕ ದಾವಣಗೆರೆ ಜಿಲ್ಲೆಯನ್ನು ಐತಿಹಾಸಿಕವಾಗಿ ಗುರುತಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
    ಇದಕ್ಕೂ ಮುನ್ನ ದೇವರಾಜ ಅರಸು ಬಡಾವಣೆಯಲ್ಲಿ 2.47 ಕೋಟಿ ರೂ. ವೆಚ್ಚದಲ್ಲಿ ನವೀಕೃತ ಅಂತಾರಾಷ್ಟ್ರೀಯ ಈಜುಕೊಳವನ್ನು ಹಾಗೂ ಜಿಲ್ಲಾ ಕ್ರೀಡಾಂಗಣದಲ್ಲಿ 67 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಳಾದ ಒಳಾಂಗಣ ಕಬಡ್ಡಿ ಅಂಕಣವನ್ನು ಸಂಸದರು ಚಾಲನೆಗೊಳಿಸಿದರು.
    ಈ ಸಂದರ್ಭದಲ್ಲಿ ಮೇಯರ್ ಬಿ.ಎಚ್.ವಿನಾಯಕ್, ದೂಡಾ ಅಧ್ಯಕ್ಷ ಎ.ವೈ. ಪ್ರಕಾಶ್, ಪಾಲಿಕೆ ಸದಸ್ಯರಾದ ರಾಕೇಶ್ ಜಾಧವ್, ಬಿ.ಜಿ.ಅಜಯಕುಮಾರ್. ಕೆ.ಪ್ರಸನ್ನಕುಮಾರ್, ಗಾಯತ್ರಿ ಖಂಡೋಜಿರಾವ್, ಎಲ್.ಡಿ.ಗೋಣೆಪ್ಪ, ಮುಖಂಡರಾದ ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ದೇವರಮನಿ ಶಿವಕುಮಾರ್, ಸ್ಮಾರ್ಟ್‌ಸಿಟಿ ಸದಸ್ಯ ಬಾಬು, ದಿಶಾ ಸಮಿತಿ ಸದಸ್ಯೆ ಭಾಗ್ಯಾ, ಪಾಲಿಕೆ ಆಯುಕ್ತೆ ರೇಣುಕಾ, ಸ್ಮಾರ್ಟ್‌ಸಿಟಿ ಎಂಡಿ ವೀರೇಶ್‌ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts