More

    ಆಲಿಕಲ್ಲು ಮಳೆಗೆ ನೆಲಕಚ್ಚಿದ ಮಾವು

    ವಿಜಯಪುರ: ನಿನ್ನೆ ಸಂಜೆ ಹಾಗೂ ರಾತ್ರಿ ಸುರಿದ ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ ಹಲವು ಬೆಳೆಗಳು ಹಾನಿಗೊಳಗಾಗಿವೆ. ಬಬಲೇಶ್ವರ ತಾಲೂಕಿನ ಅಡವಿ ಸಂಗಾಪುರ ಹಾಗೂ ಸಾರವಾಡ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಎಫೆಕ್ಟ್ ಜೋರಾಗಿದೆ. ಅಡವಿ ಸಂಗಾಪುರ ಗ್ರಾಮದ ರೈತ ರಾಜೂ ಬೂದಿಹಾಳ ಅವರ ಎರಡು ಎಕರೆ ತೋಟದಲ್ಲಿದ್ದ 200 ಮಾವಿನ ಗಿಡಗಳಲ್ಲಿನ ಫಸಲು ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಆಲಿಕಲ್ಲಿನ ಹೊಡೆತಕ್ಕೆ ಮಾವಿನ ಕಾಯಿಗಳೆಲ್ಲ ಉದುರಿಬಿದ್ದಿವೆ. ಇನ್ನು ಭಾರೀ ಪ್ರಮಾಣದಲ್ಲಿ ಬೀಸಿದ ಬಿರುಗಾಳಿಗೆ 300ಕ್ಕೂ ಅಧಿಕ ನುಗ್ಗೆ ಗಿಡಗಳು, ಪಪ್ಪಾಯಿ ಗಿಡಗಳು ಮುರಿದು ಬಿದ್ದಿವೆ. ಕೈಗೆ ಬಂದಿದ್ದ ಮಾವು ಹಾಗೂ ನುಗ್ಗೆಯ ಕಾಯಿಗಳನ್ನು ನೋಡಿದ್ರೆ ಮನಸ್ಸು ಮಮ್ಮಲ ಮರಗುತ್ತದೆ. ಕಳೆದ ಆರು ವರ್ಷಗಳಿಂದ ತೋಟ ಮಾಡಿಕೊಂಡು ಮಾವು ಹಾಗೂ ನುಗ್ಗೆ ಬೆಳೆಸಿದ್ದ ರೈತ ರಾಜೂ ಬೂದಿಹಾಳ ಅವರ ಬೆಳೆಗಳು ಸಂಪೂರ್ಣ ನಾಶವಾಗಿವೆ. ಹೀಗಾಗಿ ದಿಕ್ಕು ತೋಚದಂತಾಗಿದೆ ಎಂದು ರೈತರು ಗೋಳಾಡುತ್ತಿದ್ದಾರೆ. ಪ್ರತಿ ವರ್ಷ ಮಾವು ಬೆಳೆದು 2ರಿಂದ 3 ಲಕ್ಷ ಆದಾಯ ಹಾಗೂ ನುಗ್ಗೆಯ ಗಿಡಗಳಿಂದ 1ರಿಂದ 2ಲಕ್ಷ ಆದಾಯ ಮಾಡುತ್ತಿದ್ದ ರೈತ ರಾಜೂವಿನ ತೋಟವೇ ನಾಶವಾಗಿದೆ. ಅಡವಿ ಸಂಗಾಪುರದ ಸುತ್ತಮುತ್ತಲೂ ಹೆಚ್ಚಿನ ಪ್ರಮಾಣದಲ್ಲಿ ಆಲಿಕಲ್ಲು ಸುರಿದಿದ್ದರಿಂದ ಹಾಗೂ ರಭಸವಾಗಿ ಬಿರುಗಾಳಿ ಬೀಸಿದ್ದರಿಂದ ರೈತರ ತೋಟಗಳೆಲ್ಲವೂ ಹಾನಿಗೊಳಗಾಗಿವೆ. ಇತ್ತ ಕೆಲವು ದ್ರಾಕ್ಷಿ ತೋಟಗಳಲ್ಲಿ ದ್ರಾಕ್ಷಿ ಸಮೇತ ಹಾನಿಯಾಗಿದ್ರೆ, ಕೆಲವು ಕಡೆ ಕಟಾವು ಮಾಡಿ ಒಣದ್ರಾಕ್ಷಿ ಮಾಡಲು ಹಾಕಿದ್ದ ಶೆಡ್ ಗಳೇ ಹಾರಿಹೋಗಿದ್ದರಿಂದ ದ್ರಾಕ್ಷಿ ಬೆಳೆಗಾರರಿಗೂ ಹಾನಿಯಾಗಿದೆ. ಬಬಲೇಶ್ವರ ತಾಲೂಕಿನ ವಿವಿಧ ಭಾಗದಲ್ಲಿ ಆಲಿಕಲ್ಲು ಮಳೆ ಹಾಗೂ ಬಿರುಗಾಳಿಯಿಂದ ವಿವಿಧ ಬೆಳೆಗಳು ನೆಲಕಚ್ಚಿವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts