More

    ಪಪ್ಪಾಯಿ ಎಲೆಯ ಜ್ಯೂಸ್​… ಇದರ​ ಆರೋಗ್ಯಕರ ಲಾಭಗಳ ಬಗ್ಗೆ ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ!

    ಪಪ್ಪಾಯಿ ಅಥವಾ ಪರಂಗಿಯು ಪ್ರಪಂಚದಲ್ಲಿ ವ್ಯಾಪಕವಾಗಿ ಬೆಳೆಯುವ ಬೆಳೆಗಳಲ್ಲಿ ಒಂದಾಗಿದೆ. ಇದರ ಹಣ್ಣುಗಳು, ಬೀಜಗಳು ಮತ್ತು ಎಲೆಗಳನ್ನು ವಿವಿಧ ಪಾಕಶಾಲೆಯ ಮತ್ತು ಜಾನಪದ ಔಷಧ ಪದ್ಧತಿಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಪಪ್ಪಾಯಿ ಹಣ್ಣು ಕೇವಲ ರುಚಿಗೆ ಮಾತ್ರವಲ್ಲ ಅದರ ಔಷಧೀಯ ಗುಣಗಳಿಂದಲೂ ಎಲ್ಲರ ಮೊದಲ ಆಯ್ಕೆಯಾಗಿದೆ. ಪಪ್ಪಾಯಿ ಹಣ್ಣು ಮಾತ್ರವಲ್ಲ ಅದರ ಎಲೆಗಳು ಕೂಡ ವಿಶೇಷವಾದ ಗುಣಗಳನ್ನು ಹೊಂದಿದೆ. ಇದು ಟೆಸ್ಟ್​ ಟ್ಯೂಬ್ ಮತ್ತು ಪ್ರಾಣಿಗಳ ಅಧ್ಯಯನಗಳಲ್ಲಿ ವ್ಯಾಪಕವಾದ ಔಷಧೀಯ ಸಾಮರ್ಥ್ಯವನ್ನು ಪ್ರದರ್ಶಿಸಿದೆ.

    ಪಪ್ಪಾಯಿ ಮರದ ಎಲೆಗಳು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಎಲೆಯ ರಸವನ್ನು ಸೇವಿಸುವುದರಿಂದ ಯಾವುದೇ ಆರೋಗ್ಯ ಸಮಸ್ಯೆಗಳು ನಮಗೆ ಬಾಧಿಸುವುದಿಲ್ಲ ಎನ್ನುತ್ತಾರೆ ತಜ್ಞರು. ಹೀಗಾಗಿ ಪಪ್ಪಾಯಿ ಎಲೆಗಳಿಂದಾಗುವ ಆರೋಗ್ಯಕರ ಲಾಭಗಳೇನು ಎಂಬುದನ್ನು ನಾವೀಗ ತಿಳಿಯೋಣ.

    * ಪಪ್ಪಾಯಿ ಎಲೆಗಳ ರಸವನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
    * ಜ್ವರದಿಂದ ನಮ್ಮ ಕಾಪಾಡುತ್ತದೆ ಮತ್ತು ಜ್ವರ ಬರದಂತೆ ನೋಡಿಕೊಳ್ಳುತ್ತದೆ.
    * ಡೆಂಘೆ ಜ್ವರದಿಂದ ಬಳಲುತ್ತಿರುವವರ ಪಪ್ಪಾಯಿ ಎಲೆಗಳ ರಸವನ್ನು ತಪ್ಪದೇ ಸೇವಿಸಬೇಕು ಎನ್ನುತ್ತಾರೆ ತಜ್ಞರು.
    * ಗ್ಯಾಸ್, ಉಬ್ಬುವಿಕೆ ಮತ್ತು ಇತರೆ ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿರುವವರು ಪಪ್ಪಾಯಿ ಎಲೆ ಜ್ಯೂಸ್ ಕುಡಿಯುವುದರಿಂದ ಪ್ರಯೋಜನ ಪಡೆಯಬಹುದು.
    * ಪಪ್ಪಾಯಿ ಎಲೆಗಳ ಜ್ಯೂಸ್​ನಲ್ಲಿ ವಿಟಮಿನ್​ ಎ, ಇ, ಸಿ, ಕೆ ಮತ್ತು ಬಿ ಇದೆ.
    * ಪಪ್ಪಾಯಿ ಎಲೆಗಳ ರಸ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣಕ್ಕೆ ತರಬಹುದು.
    * ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರು ಈ ಪಪ್ಪಾಯಿ ಎಲೆಯ ರಸವನ್ನು ಸೇವಿಸುವುದರಿಂದ ಸಮಸ್ಯೆ ಕಡಿಮೆಯಾಗುತ್ತದೆ.
    * ಕೀಲು ನೋವಿನಿಂದ ಬಳಲುತ್ತಿರುವವರು ಪಪ್ಪಾಯಿ ಎಲೆಗಳ ರಸ ಕುಡಿಯುವುದರಿಂದ ನೋವಿನ ಮುಕ್ತರಾಗಬಹುದು.

    ಅಲರ್ಜಿ ಇರುವವರು ಸೇವಿಸಬೇಡಿ
    ಕೆಲವರಿಗೆ ಕೆಲವೊಂದು ಆಹಾರಗಳು ಆಗಿಬರುವುದಿಲ್ಲ. ಅದೇ ರೀತಿ ಪಪ್ಪಾಯಿಗೆ ಅಲರ್ಜಿಯನ್ನು ಹೊಂದಿದ್ದರೆ, ಯಾವುದೇ ಕಾರಣಕ್ಕೂ ಅಂಥವರು ಪಪ್ಪಾಯಿ ಎಲೆಗಳನ್ನು ಸೇವಿಸಬಾರದು. ಇದಿಷ್ಟೇ ಅಲ್ಲದೆ, ಗರ್ಭಿಣಿಯಾಗಿದ್ದರೆ ಅಥವಾ ಸ್ತನ್ಯಪಾನ ಮಾಡುತ್ತಿದ್ದರೆ ಪಪ್ಪಾಯಿ ಎಲೆ ಜ್ಯೂಸ್​ ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ, ಅವರ ಸಲಹೆಯನ್ನು ಪಡೆದುಕೊಳ್ಳಬೇಕು.

    ಅಡ್ಡಪರಿಣಾಮಗಳು
    ಪಪ್ಪಾಯಿ ಎಲೆಯ ರಸವನ್ನು ಮಿತವಾಗಿ ಸೇವಿಸಿದಾಗ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಆದಾಗ್ಯೂ, ಇದು ಕೆಲವು ಅಡ್ಡ ಪರಿಣಾಮಗಳನ್ನು ಸಹ ಬೀರಬಹುದು. ಅವುಗಳೆಂದರೆ, ಚರ್ಮದ ದದ್ದುಗಳು, ಹೊಟ್ಟೆ ಕಿರಿಕಿರಿ, ವಾಕರಿಕೆ, ವಾಂತಿ, ಉಸಿರಾಟದ ತೊಂದರೆ, ಮೂಗು ಕಟ್ಟುಕೊಳ್ಳುವುದು ಮುಂತಾದ ಸಮಸ್ಯೆಗಳು ಉಂಟಾಗುತ್ತವೆ. ಹೀಗಾಗಿ ಮಿತವಾಗಿ ಬಳಸಬೇಕು.

    ಎಷ್ಟು ಸೇವನೆ ಮಾಡಬೇಕು?
    ಪಪ್ಪಾಯಿ ಎಲೆಯ ರಸವು ತುಂಬಾ ಕಹಿ ರುಚಿಯನ್ನು ಹೊಂದಿರುತ್ತದೆ. ರಸ ಕುಡಿದ ಬಳಿಕ ಕಹಿಯಿಂದ ಸುಧಾರಿಸಿಕೊಳ್ಳಲು ಸ್ವಲ್ಪ ಬೆಲ್ಲ ಅಥವಾ ಸಕ್ಕರೆಯನ್ನು ನೀಡಬಹುದು. ವಯಸ್ಕರಿಗೆ ಬೆಳಗಿನ ಉಪಾಹಾರದ ಮೊದಲು 30 ಮಿಲಿ ಪಪ್ಪಾಯಿ ರಸ, ಮಧ್ಯಾಹ್ನದ ಊಟದ ಮೊದಲು 30 ಮಿಲಿ ಮತ್ತು ರಾತ್ರಿಯ ಊಟದ ಮೊದಲು 30 ಮಿಲಿ ತೆಗೆದುಕೊಳ್ಳಬಹುದು. ಅದಕ್ಕಿಂತ ಹೆಚ್ಚಿಗೆ ತೆಗೆದುಕೊಳ್ಳುವಂತಿಲ್ಲ. (ಏಜೆನ್ಸೀಸ್​)

    ನಯವಾದ ತ್ವಚೆ, ಹೊಳೆಯುವ ಚರ್ಮಕ್ಕೆ ಪಪ್ಪಾಯಿ ಉತ್ತಮ ಆಯ್ಕೆ….

    ಪಪ್ಪಾಯಿ: ನಿಮ್ಮ ತ್ವಚೆಯ ಬೆಸ್ಟ್ ಫ್ರೆಂಡ್, ನೀವು ತಿಳಿದಿರಲೇ ಬೇಕಾದ ಪ್ರಯೋಜನಗಳು ಹೀಗಿವೆ..

    ಪಪ್ಪಾಯ ನೀಡುತ್ತಿದೆ ಕೈತುಂಬ ಆದಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts