More

    ಪಪ್ಪಾಯ ನೀಡುತ್ತಿದೆ ಕೈತುಂಬ ಆದಾಯ

    ಕುಷ್ಟಗಿ: ಗ್ರಾಪಂ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ತಾಲೂಕಿನ ಗುಮಗೇರಾ ಗ್ರಾಮದ ಸಂಗನಗೌಡ, ಸುಮ್ಮನೆ ಕೂಡದೆ ತೋಟಗಾರಿಕೆ ಬೆಳೆ ಬೆಳೆದು ಯಶಸ್ವಿಯಾಗಿ ಕೃಷಿ ಲಾಭದಾಯಕ ಉದ್ಯಮ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

    ಗ್ರಾಮಕ್ಕೆ ಹೊಂದಿಕೊಂಡಿರುವ ನಾಲ್ಕು ಎಕರೆ ಜಮೀನಿನಲ್ಲಿ ದಾಳಿಂಬೆ ಹಾಗೂ ಪಪ್ಪಾಯ ಬೆಳೆದಿದ್ದಾರೆ. ಪಪ್ಪಾಯ ಕೈಗೆ ಬಂದಿದ್ದು, ಕೈತುಂಬ ಆದಾಯ ನೀಡುತ್ತಿದೆ. ಪಪ್ಪಾಯ ಇಳುವರಿ ನೀಡುವುದನ್ನು ನಿಲ್ಲಿಸುತ್ತಿದ್ದಂತೆಯೇ ದಾಳಿಂಬೆ ಕೈಹಿಡಿಯಲಿದೆ ಎನ್ನುತ್ತಾರೆ ರೈತ ಸಂಗನಗೌಡ.

    ನಾಲ್ಕು ಎಕರೆ ಜಮೀನಿನಲ್ಲಿ 1600 ದಾಳಿಂಬೆ ಹಾಗೂ ಮೂರು ಸಾವಿರ ಪಪ್ಪಾಯ ಸಸಿಗಳ ನಾಟಿ ಮಾಡಿದ್ದಾರೆ. ಅಹ್ಮದಾಬಾದ್‌ನಿಂದ ಅಂಗಾಶ ಕೃಷಿ ಆಧಾರಿತ ಸಸಿಗಳನ್ನು ಖರೀದಿಸಿ ನಾಟಿ ಮಾಡಿದ್ದಾರೆ. ಮುಂಬೈ ಮೂಲದವರು ಬಂದು ಖರೀದಿಸುತ್ತಿರುವುದರಿಂದ ಮಾರುಕಟ್ಟೆ ಸಮಸ್ಯೆ ಇಲ್ಲವಾಗಿದೆ. ಕಳೆದ ವಾರ ಮೊದಲ ಇಳುವರಿ ಮಾರಾಟ ಮಾಡಿದ್ದಾರೆ. ಟನ್ ಪಪ್ಪಾಯಗೆ 9 ಸಾವಿರ ರೂ.ಯಂತೆ 3 ಟನ್ ಹಾಗೂ 13500 ರೂ.ಗೆ ಟನ್‌ನಂತೆ ಐದೂವರೆ ಟನ್ ಮಾರಾಟ ಮಾಡಿದ್ದಾರೆ. ಸದ್ಯ 50 ಟನ್ ಮಾರಾಟಕ್ಕೆ ಸಿದ್ಧವಾಗಿದೆ. ವಾರಕ್ಕೊಮ್ಮೆ ಇನ್ನೂ ನಾಲ್ಕೈದು ತಿಂಗಳವರೆಗೆ ಇಳುವರಿ ಸಿಗಲಿದೆ. ಪಪ್ಪಾಯ ನಂತರ ದಾಳಿಂಬೆ ಇಳುವರಿ ನೀಡಲು ಆರಂಭವಾಗಲಿದ್ದು, ಉತ್ತಮ ಆದಾಯ ಕೈಸೇರಲಿದೆ ಎಂದು ರೈತ ಸಂಗನಗೌಡ ಹೇಳುತ್ತಿದ್ದಾರೆ. ಹೆಚ್ಚಿನ ಮಾಹಿತಿಗೆ ಸಂಗನಗೌಡ(9535958444)ರನ್ನು ಸಂಪರ್ಕಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts