More

    ಚೊಚ್ಚಲ ಗ್ರಾಂಡ್ ಸ್ಲಾಂ ಕಿರೀಟಕ್ಕಾಗಿ ಥೀಮ್-ಜ್ವೆರೇವ್ ಕಾದಾಟ

    ನ್ಯೂಯಾರ್ಕ್: ಕರೊನಾ ವೈರಸ್ ಹಾವಳಿಯ ನಡುವೆ ಪುರುಷರ ಟೆನಿಸ್‌ನಲ್ಲಿ ಹೊಸ ಗ್ರಾಂಡ್ ಸ್ಲಾಂ ಚಾಂಪಿಯನ್‌ನ ಉದಯಕ್ಕೆ ವೇದಿಕೆ ಸಜ್ಜಾಗಿದೆ. ವರ್ಷದ ಸತತ 2ನೇ ಗ್ರಾಂಡ್ ಸ್ಲಾಂ ಫೈನಲ್‌ಗೇರಿರುವ ಆಸ್ಟ್ರಿಯಾ ತಾರೆ ಡೊಮಿನಿಕ್ ಥೀಮ್ ಮತ್ತು ಚೊಚ್ಚಲ ಗ್ರಾಂಡ್ ಸ್ಲಾಂ ಫೈನಲ್ ಪ್ರವೇಶ ಕಂಡಿರುವ ಗ್ರೀಸ್ ಯುವ ಆಟಗಾರ ಅಲೆಕ್ಸಾಂಡರ್ ಜ್ವೆರೇವ್ ನಡುವೆ ಭಾನುವಾರ ಯುಎಸ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಹೋರಾಟ ನಡೆಯಲಿದೆ.

    2ನೇ ಶ್ರೇಯಾಂಕಿತ ಡೊಮಿನಿಕ್ ಥೀಮ್ ಶುಕ್ರವಾರ ಫ್ಲಷಿಂಗ್ ಮೆಡೋಸ್‌ನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ 3ನೇ ಶ್ರೇಯಾಂಕಿತ ರಷ್ಯಾ ಆಟಗಾರ ಡೇನಿಲ್ ಮೆಡ್ವೆಡೇವ್ ವಿರುದ್ಧ 6-2, 7-6 (7), 7-6 (5) ನೇರಸೆಟ್‌ಗಳಿಂದ ಗೆಲುವು ದಾಖಲಿಸಿದರು. ಟೂರ್ನಿಯುದ್ದಕ್ಕೂ ಒಂದೂ ಸೆಟ್ ಸೋಲದೆ ಮುನ್ನಡೆದಿದ್ದ ಮೆಡ್ವೆಡೇವ್ 2 ಮತ್ತು 3ನೇ ಸೆಟ್‌ನಲ್ಲಿ ಸೆಟ್ ಪಾಯಿಂಟ್ ಗಳಿಸುವ ಅವಕಾಶ ಹೊಂದಿದ್ದರೂ, ಅವಕಾಶ ಕೈಚೆಲ್ಲಿದರು.

    ದಿನದ ಮೊದಲ ಸೆಮಿಫೈನಲ್ ಪಂದ್ಯ ಇದಕ್ಕಿಂತ ರೋಚಕವಾಗಿತ್ತು. 5ನೇ ಶ್ರೇಯಾಂಕಿತ ಜ್ವೆರೇವ್ 3-6, 2-6, 6-3, 6-4, 6-3ರಿಂದ ಸ್ಪೇನ್‌ನ ಕ್ಯಾರೆನೊ ಬುಸ್ಟಾ ವಿರುದ್ಧ ಹೋರಾಟಯುತ ಗೆಲುವು ದಾಖಲಿಸಿದರು. 23 ವರ್ಷದ ಜ್ವೆರೇವ್, ನೊವಾಕ್ ಜೋಕೊವಿಕ್ ಬಳಿಕ ಗ್ರಾಂಡ್ ಸ್ಲಾಂ ಫೈನಲ್‌ಗೇರಿದ ಅತ್ಯಂತ ಕಿರಿಯ ಆಟಗಾರ. ಜೋಕೊವಿಕ್ 2010ರ ಯುಎಸ್ ಓಪನ್‌ನಲ್ಲಿ 23ನೇ ವಯಸ್ಸಿನಲ್ಲೇ ಈ ಸಾಧನೆ ಮಾಡಿದ್ದರು.

    ಇದನ್ನೂ ಓದಿ: ಐಪಿಎಲ್‌ಗಾಗಿ ದುಬೈಗೆ ತೆರಳಿದ ಕಿಂಗ್ಸ್ ಇಲೆವೆನ್ ಒಡತಿ ಪ್ರೀತಿ ಝಿಂಟಾ

    ಜ್ವೆರೇವ್ ಮೊದಲ ಬಾರಿ ಗ್ರಾಂಡ್ ಸ್ಲಾಂ ಫೈನಲ್‌ಗೇರಿದ್ದಾರೆ. ವರ್ಷಾರಂಭದ ಆಸ್ಟ್ರೇಲಿಯನ್ ಓಪನ್ ಸೆಮಿಫೈನಲ್‌ಗೇರಿದ್ದು ಅವರ ಈ ಹಿಂದಿನ ಅತ್ಯುತ್ತಮ ನಿರ್ವಹಣೆಯಾಗಿದೆ.

    ಡೊಮಿನಿಕ್ ಥೀಮ್ ಗ್ರಾಂಡ್ ಸ್ಲಾಂನಲ್ಲಿ 4ನೇ ಬಾರಿ ಫೈನಲ್‌ಗೇರಿದ್ದಾರೆ. ಈ ಹಿಂದಿನ 3 ಫೈನಲ್‌ಗಳಲ್ಲಿ (2018, 2019ರ ಫ್ರೆಂಚ್ ಓಪನ್, 2020ರ ಆಸ್ಟ್ರೇಲಿಯನ್ ಓಪನ್) ಅವರು ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.

    ಕಳೆದ 16 ವರ್ಷಗಳಲ್ಲಿ ಮೊದಲ ಬಾರಿಗೆ ಫೆಡರರ್, ನಡಾಲ್ ಅಥವಾ ಜೋಕೊವಿಕ್ ಅವರಿಲ್ಲದ ಸೆಮಿೈನಲ್ ಕಾದಾಟವನ್ನು ಗ್ರಾಂಡ್ ಸ್ಲಾಂ ಟೂರ್ನಿ ಕಂಡಿದೆ.

    ಜ್ವೊನರೇವಾ-ಸೆಗ್‌ಮಂಡ್‌ಗೆ ಡಬಲ್ಸ್ ಗರಿ

    ಚೊಚ್ಚಲ ಗ್ರಾಂಡ್ ಸ್ಲಾಂ ಕಿರೀಟಕ್ಕಾಗಿ ಥೀಮ್-ಜ್ವೆರೇವ್ ಕಾದಾಟ
    ರಷ್ಯಾದ ವೆರಾ ಜ್ವೊನರೇವಾ ಮತ್ತು ಜರ್ಮನಿಯ ಲೌರಾ ಸೆಗ್‌ಮಂಡ್ ಜೋಡಿ ಮಹಿಳಾ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದೆ. ಅವರು ಫೈನಲ್ ಪಂದ್ಯದಲ್ಲಿ 3ನೇ ಶ್ರೇಯಾಂಕಿತ ಅಮೆರಿಕದ ನಿಕೋಲ್ ಮೆಲಿಚರ್ ಮತ್ತು ಚೀನಾದ ಕ್ಸಿ ಯಾನ್ ಜೋಡಿಗೆ 6-4, 6-4 ನೇರಸೆಟ್‌ಗಳಿಂದ ಸೋಲುಣಿಸಿದರು. ಸೆಗ್‌ಮಂಡ್‌ಗೆ ಇದು ಚೊಚ್ಚಲ ಗ್ರಾಂಡ್ ಸ್ಲಾಂ ಗೆಲುವಾಗಿದ್ದರೆ, ಜ್ವೊನರೇವಾಗೆ 3ನೇ ಮತ್ತು ತಾಯ್ತನದ ಬಳಿಕ ಮೊದಲ ಗ್ರಾಂಡ್‌ಸ್ಲಾಂ ಪ್ರಶಸ್ತಿಯಾಗಿದೆ.

    ಕೆವಿನ್ ಪೀಟರ್ಸೆನ್ ಪ್ರಕಾರ ಈ ತಂಡವೇ ಐಪಿಎಲ್-2020 ಗೆಲ್ಲಲಿದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts