More

    ಜಿಪಂ ಸಿಇಒ ರಾಹುಲ್ ಶಿಂಧೆ ಹೇಳಿಕೆ – ಮತದಾನ ಮಾಡಿ ನಾಳೆಯ ನಾಡು ಕಟ್ಟಿ

    ಗೊಳಸಂಗಿ: ಮುಂಬರುವ ಚುನಾವಣೆಯಲ್ಲಿ ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಿ, ಅರ್ಹ ವ್ಯಕ್ತಿಯನ್ನು ವಿಧಾನಸಭೆಗೆ ಕಳುಹಿಸುವ ಮೂಲಕ ನಾಳೆಯ ಸುಂದರ ನಾಡನ್ನು ಕಟ್ಟಿ ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ಹೇಳಿದರು.

    ಸಮೀಪದ ವಂದಾಲ ಗ್ರಾಮದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಾಲುವೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.

    ಮತದಾನವೆಂಬುದು ಪ್ರಜಾಪ್ರಭುತ್ವದ ಮಹತ್ತರ ಹಬ್ಬವಾಗಿದೆ. ಇಲ್ಲಿ ಬಡವ-ಶ್ರೀಮಂತ, ಜಾತಿ-ನೀತಿಯ ಬೇಧಭಾವಕ್ಕೆ ಜಾಗವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವರೂ ಸಮಾನತೆಯಿಂದ ಬದುಕಲು ಉತ್ತಮ ಜನಪ್ರತಿನಿಧಿಗಳ ಆಯ್ಕೆ ಅನಿವಾರ್ಯವಾಗಿದೆ. ಜನಸಾಮಾನ್ಯ ಕೂಲಿ ಕಾರ್ಮಿಕರೂ ತಮ್ಮ ಮತವನ್ನು ಅರ್ಹ ವ್ಯಕ್ತಿಗೆ ಚಲಾಯಿಸುವ ಮೂಲಕ ಸಂವಿಧಾನದ ಆಶಯವನ್ನು ಎತ್ತಿ ಹಿಡಿಯಬೇಕು. ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆಯಡಿ ಹಲವಾರು ಸೌಲಭ್ಯಗಳಿದ್ದು ಪ್ರತಿಯೊಬ್ಬರೂ ಆ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಬದುಕಿನಲ್ಲಿ ಬೆಳಕು ಕಾಣಬೇಕು ಎಂದರು.

    ಉದ್ಯೋಗ ಖಾತ್ರಿ ಕೆಲಸದ ಸ್ಥಳದಲ್ಲಿ ರಂಗೋಲಿ ಮೂಲಕ ಮತದಾನಕ್ಕಿಂತ ಮಿಗಿಲಾದ ದಾನವಿಲ್ಲ, ಖಂಡಿತವಾಗಿ ಮತದಾನ ಮಾಡುವೆ, ಕೂಲಿ ಕೆಲಸಕ್ಕೂ ಸೈ, ಮತದಾನಕ್ಕೂ ಜೈ ಬರೆಯಿಸಿ ಸ್ವೀಪ್ ಚಟುವಟಿಕೆಯ ಜಾಗೃತಿ ಚಿತ್ರಗಳನ್ನು ಬಿಡಿಸಿ ಜನ ಜಾಗೃತಿ ಮೂಡಿಸಲಾಯಿತು. ನರೇಗಾ ಕೂಲಿ ಕಾರ್ಮಿಕರಿಗೆ ಮತದಾನದ ಪ್ರತಿಜ್ಞಾನಿಧಿಯನ್ನು ಬೋಧಿಸಲಾಯಿತು. ಇದೇ ವೇಳೆ ಸಿಇಒ ರಾಹುಲ್ ಶಿಂಧೆ ಅವರನ್ನು ಕೂಲಿ ಕಾರ್ಮಿಕರು ಸನ್ಮಾನಿಸಿದರು.

    ತಾಪಂ ಇಒ ವಿ.ಎಸ್. ಹಿರೇಮಠ, ಸಹಾಯಕ ನಿರ್ದೇಶಕ ಎಸ್.ಜೆ. ಉದಯಕುಮಾರ, ಪಿಡಿಒ ಮಲ್ಲಿಕಾರ್ಜುನ ಹಾವರಗಿ, ಜಿ.ಬಿ. ಕಲ್ಯಾಣಿ, ತಾಂತ್ರಿಕ ಸಂಯೋಜಕ ಶಿವಾನಂದ ಹಂಚಿನಾಳ, ಐಇಸಿ ಸಂಯೋಜಕ ದಸ್ತಗೀರ ಗುಡಿಹಾಳ, ದಿಗಂಬರೇಶ ಪಾಟೀಲ, ಶೇಖರ ದಡ್ಡಿ, ಲಕ್ಕಪ್ಪ ಹಿರೇಕುರಬರ, ಮಲ್ಲಿಕಾರ್ಜುನ ತಳೇವಾಡ, ಶಿವಕುಮಾರ ಇತರರಿದ್ದರು.

    ನಂತರ ಹುಣಶಾಳ ಪಿಸಿ ಗ್ರಾಮಕ್ಕೆ ಭೇಟಿ ನೀಡಿದ ಸಿಇಒ ರಾಹುಲ್ ಶಿಂಧೆ ಅವರು ಜಲಜೀವನ್ ಮಿಷನ್ ಯೋಜನೆ ಕಾಮಗಾರಿ, ಸಿಸಿ ರಸ್ತೆ ಕಾಮಗಾರಿ ಮತ್ತು ಎನ್‌ಎಲ್‌ಆರ್‌ಎಂ ಕಾಮಗಾರಿ ವೀಕ್ಷಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts