More

    ಬನಶಂಕರಮ್ಮನ ಬಂಗಾರ ಕದ್ದ ಕಳ್ಳರ ಬಂಧನ

    ಗೊಳಸಂಗಿ: ಸ್ಥಳೀಯ ಬನಶಂಕರಿ ದೇವಸ್ಥಾನದ ದೇವಿಯ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ರಾಜಸ್ಥಾನ ಮೂಲದ ಇಬ್ಬರು ಕಳ್ಳರನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.

    ರಾಜಸ್ಥಾನದ ಬಾಲ್ಹೋಥ್ರಾ ಜಿಲ್ಲೆ ಸಿವಾನಾ ತಾಲೂಕಿನ ಮಿಥೋಡಾ ಗ್ರಾಮದ ಮನೋಹರಸಿಂಗ್ ಸವಾಯ್‌ಸಿಂಗ್ (32), ಬಾಡಮೆರ ಜಿಲ್ಲೆ ಪಸಪದ್ರಾ ತಾಲೂಕಿನ ಕಾಲ್ಮೋ ಕಿ ಧಾನಿ ಗ್ರಾಮದ ಮಹೇಂದ್ರಕುಮಾರ ಹರರಾಮ್ (21) ಬಂಧಿತ ಆರೋಪಿಗಳು.

    ಇನ್ನೂ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಬಂಧಿತ ಆರೋಪಿಗಳಿಂದ ನಿಡಗುಂದಿ ಸಿಪಿಐ ಶರಣಗೌಡ ಗೌಡರ, ಕೂಡಗಿ ಎನ್‌ಟಿಪಿಸಿ ಪಿಎಸ್‌ಐ ಯತೀಶ ಕೆ.ಎನ್. ಅವರು 35 ಗ್ರಾಂ ಬಂಗಾರದ ಆಭರಣ ಹಾಗೂ ಕಳ್ಳತನಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ ಸೋನಾವಣೆ, ಹೆಚ್ಚುವರಿ ಅಧೀಕ್ಷಕರಾದ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ, ಉಪಾಧೀಕ್ಷಕ ಬಲ್ಲಪ್ಪ ನಂದಗಾಂವಿ ಮಾರ್ಗದರ್ಶನದಲ್ಲಿ ಸಿಪಿಐ ಶರಣಗೌಡ ಗೌಡರ, ಕಾನೂನು ಸುವ್ಯವಸ್ಥೆ ವಿಭಾಗದ ಪಿಎಸ್‌ಐ ಯತೀಶ ಕೆ.ಎನ್., ಅಪರಾಧ ವಿಭಾಗದ ಪಿಎಸ್‌ಐಗಳಾದ ಡಿ.ಕೆ.ಯಳ್ಳಿಗುತ್ತಿ, ಶಿವರಾಜ ಧರಿಗೋಣ, ಮಹೇಶ ದೊಡಮನಿ, ಬಿ.ಸಿ.ಪಾಟೀಲ, ಸುಭಾಸ ಆಲಮಟ್ಟಿ, ಸೋಮು ಲಮಾಣಿ, ಎಸ್.ಎಂ.ಮಠಪತಿ, ಎಸ್.ವೈ.ದೇಸಾಯಿ, ಆರ್.ಎಸ್.ಉಪ್ಪಲದಿನ್ನಿ, ಸಿ.ಎಸ್.ತೋಳಮಟ್ಟಿ ಇತರರು ಕಾರ್ಯಾಚರಣೆ ನಡೆಸಿ ಆರೋಪಿತರನ್ನು ಬಂಧಿಸಿದ್ದಾರೆ.

    ಗೊಳಸಂಗಿ ಬನಶಂಕರಿ ದೇವಸ್ಥಾನದಲ್ಲಿ ಕಳ್ಳತನವಾಗಿದ್ದ ಸುದ್ದಿಯನ್ನು ವಿಜಯವಾಣಿಯಲ್ಲಿ ೆ.20 ರಂದು ‘ಬನಶಂಕರಿ ದೇವಿ ಆಭರಣ ಕಳ್ಳತನ’ ಶೀರ್ಷಿಕೆಯಡಿ ವರದಿಯನ್ನು ಪ್ರಕಟಿಸಿದ್ದು ಗಮನಾರ್ಹ.

    ಬೇರೆಡೆ ಹಣ ಕಳವು
    ಗೊಳಸಂಗಿ ಬನಶಂಕರಿ ದೇವಸ್ಥಾನ ಕಳ್ಳತನಕ್ಕೂ ಮೊದಲು ಫೆ.18 ರಂದು ರಾಯಚೂರು ಜಿಲ್ಲೆಯ ಸಿಂಧನೂರಿನ ದುರ್ಗಮ್ಮ ದೇವಸ್ಥಾನದೊಳಗಿನ ಹುಂಡಿಯಲ್ಲಿದ್ದ ಅಂದಾಜು 12-13 ಸಾವಿರ ರೂ. ಗಳನ್ನು ಇದೇ ಆರೋಪಿತರು ಕಳ್ಳತನ ಮಾಡಿರುವುದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts