More

    ಆಟೋಟಗಳು ದೇಶದ ಸಾಂಸ್ಕೃತಿಕದ ಪ್ರತೀಕ

    ಗೊಳಸಂಗಿ: ಭಾರತ ಹಳ್ಳಿಗರ ನಾಡು. ಗ್ರಾಮೀಣ ಭಾರತದ ಆಟೋಟಗಳು ದೇಶದ ಸಾಂಸ್ಕೃತಿಕ ಸಂಪ್ರದಾಯವನ್ನು ಮೆರೆಯುವ ಪ್ರತೀಕವಾಗಿದೆ ಎಂದು ಪ್ರಗತಿಪರ ರೈತ ಗೋಪಾಲ ಪವಾರ ಹೇಳಿದರು.

    ಗ್ರಾಮದ ಪರಪ್ಪ ಮುತ್ಯಾ ಅವರ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಎತ್ತು-ಕುದುರೆ ಇಜ್ಜೋಡಿ ಗಾಡಿಯ ಎರಡು ನಿಮಿಷಗಳ ಓಟದ ಸ್ಪರ್ಧಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ನೆಹರು ಯುವಕ ಸಂಘದ ಅಧ್ಯಕ್ಷ ಅಮರೇಶಗೌಡ ಪಾಟೀಲ ಮಾತನಾಡಿ, ಕುದುರೆ, ಎತ್ತುಗಳು ಒಂದು ಕಾಲದಲ್ಲಿ ರೈತರ ಒಡನಾಡಿಯಾಗಿದ್ದವು. ಆದರೆ ರೈತರ ಕೃಷಿ ಚಟುವಟಿಕೆಗೆ ಆಧುನಿಕ ಸ್ಪರ್ಶ ಆಗುತ್ತಿದ್ದಂತೆಯೇ ಜಾನುವಾರುಗಳು ಕ್ರಮೇಣವಾಗಿ ಅವರಿಂದ ದೂರಾಗುತ್ತಿರುವುದು ವಿಪರ್ಯಾಸಕರ ಸಂಗತಿಯಾಗಿದೆ ಎಂದರು.

    ರೈತ ಮುಖಂಡ ಅರ್ಜುನ ನಲವಡೆ ಚಾಲನೆ ನೀಡಿದರು. ಸಂಗಪ್ಪ ಕೋಲಾರ, ಸುಭಾಷ ಜಾಧವ, ಸಂತು ನಲವಡೆ, ಸುರೇಶ ಮಂಕಣಿ, ಇಮಾಮಸಾಬ ಟಕ್ಕಳಕಿ, ಗೌಸಪೀರ ಜಾಗೀರದಾರ, ಲಾಲಸಾಬ ಪೈಲ್ವಾನ್, ಸಖಾರಾಂ ಸಾಳುಂಕೆ, ಹುಸೇನಸಾಬ ಕೂಡಗಿ, ಅಣ್ಣಾರಾವ್ ಜಾಧವ ಇತರರು ಇದ್ದರು.

    ವಿಜೇತರಿಗೆ ಬಹುಮಾನ

    ಎತ್ತು-ಕುದುರೆ ಇಜ್ಜೋಡಿ ಗಾಡಿ ಎರಡು ನಿಮಿಷದ ಓಟದ ಸ್ಪರ್ಧೆಯಲ್ಲಿ ವಿಜಯಪುರ-ಬಾಗಲಕೋಟೆ ಜಿಲ್ಲೆಯಾದ್ಯಂತ 27 ಜೋಡಿ ಎತ್ತು-ಕುದುರೆ ಇಜ್ಜೋಡಿ ಭಾಗಿಯಾಗಿದ್ದವು. ಇವರಲ್ಲಿ ಮಸೂತಿಯ ಮುದಕಪ್ಪ ಹಳ್ಳಿ, ಮುತ್ತಪ್ಪ ಯರಂತೇಲಿ, ತೆಲಗಿಯ ಮುತ್ತುರಾಜ ಪಾಟೀಲ, ಮುದ್ದೇಬಿಹಾಳದ ಸಾಹೇಬಲಾಲ ದೇಸಾಯಿ, ಮಲಘಾಣದ ಶಿವಾನಂದ ಹಿರಕಣವರ, ಅಭಿಷೇಕ ಮಲಘಾಣ ಇವರ ಎತ್ತು, ಕುದುರೆಗೆ ನಗದು ರೂಪದ ಬಹುಮಾನ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts