More

    ಉಪವಾಸವಾದರೂ ಸತ್ತೇವು, ಉದ್ಯೋಗಕ್ಕೆ ಧಿಕ್ಕಾರ ಎಂದ ಜೊಮಾಟೊ ಸಿಬ್ಬಂದಿ!

    ಕೋಲ್ಕತಾ: ಕರೊನಾ ವೈರಸ್‌ನ ಈ ದಿನಗಳಲ್ಲಿ ಉದ್ಯೋಗಕ್ಕಾಗಿ ಪರದಾಟ ಎಲ್ಲೆಡೆ ಶುರುವಾಗಿದೆ. ಎಷ್ಟೋ ಕಡೆಗಳಲ್ಲಿ ಕಂಪನಿಗಳು ಕೆಲಸದಿಂದ ತನ್ನ ಸಿಬ್ಬಂದಿಯನ್ನು ತೆಗೆದುಹಾಕುತ್ತಿದೆ.
    ಇಂಥ ಕಠಿಣ ಪರಿಸ್ಥಿತಿಯಲ್ಲಿ ಕೋಲ್ಕತಾದ ಜೊಮ್ಯಾಟೊ ಸಂಸ್ಥೆಯ ಕೆಲವು ಯುವಕರು ಕೆಲಸವನ್ನೇ ತೊರೆದಿದ್ದಾರೆ! ಉಪವಾಸದಿಂದ ಸತ್ತರೂ ಚಿಂತೆಯಿಲ್ಲ, ಈ ಕೆಲಸ ಮಾತ್ರ ತಮಗೆ ಬೇಡ ಎಂದು ಕಂಪನಿ ನೀಡಿರುವ ಟೀ-ಷರ್ಟ್‌ ಕೂಡ ಸುಟ್ಟು ಹಾಕಿದ್ದಾರೆ.

    ಇದಕ್ಕೆ ಕಾರಣ, ದೇಶಭಕ್ತಿ! ಹೌದು. ಚೀನಾ ವಸ್ತುಗಳ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಜೊಮ್ಯಾಟೋಗೆ ಅತಿ ಹೆಚ್ಚಿನ ಬಂಡವಾಳ ಹೂಡಿರುವ ಚೀನಾ ಕಂಪನಿ ವಿರುದ್ಧ ಈ ಯುವಕರು ಇಂಥದ್ದೊಂದು ಪ್ರತಿಭಟನೆಗೆ ಇಳಿದಿದ್ದಾರೆ.

    ಕಳೆದ ವಾರ ಲಡಾಖ್‌ನಲ್ಲಿ 20 ಭಾರತೀಯ ಯೋಧರ ಹತ್ಯೆಯನ್ನು ವಿರೋಧಿಸಿ ಜೊಮ್ಯಾಟೊ ಆಹಾರ ವಿತರಣಾ ವೇದಿಕೆ ನೌಕರರ ಗುಂಪು ತಮ್ಮ ಅಧಿಕೃತ ಟೀ ಷರ್ಟ್‌ಗಳನ್ನು ಹರಿದು ಸುಟ್ಟುಹಾಕಿದೆ. ಮಾತ್ರವಲ್ಲದೇ ಕೆಲಸಕ್ಕೂ ರಾಜೀನಾಮೆ ನೀಡಿದ್ದಾರೆ!

    ಇದನ್ನೂ ಓದಿ: ಚೀನಾ ವಸ್ತುವಲ್ಲ… ಇಲ್ಲಿ ಚೀನಿಯರಿಗೇ ಬಹಿಷ್ಕಾರ… ನೋ ಎಂಟ್ರಿ ಬೋರ್ಡ್‌!

    ನೀವು ದೇಶಭಕ್ತರೇ ಆಗಿದ್ದಲ್ಲಿ, ದಯವಿಟ್ಟು ಜೊಮ್ಯಾಟೊದಿಂದ ಆನ್‌ಲೈನ್‌ ಮೂಲಕ ಆರ್ಡರ್‌ ಮಾಡುವುದನ್ನು ನಿಲ್ಲಿಸಿ. ನಿಮಗೆ ಬುದ್ಧಿ ಹೇಳುವ ಮುನ್ನ ನಾವು ಈ ಕೃತ್ಯವನ್ನು ಮಾಡಿ ತೋರಿಸುವ ಸಲುವಾಗಿಯೇ ಕೆಲಸವನ್ನು ತ್ಯಜಿಸಿದ್ದೇವೆ. ಈ ಸಮಯದಲ್ಲಿ ಉದ್ಯೋಗ ದೊರಕುವುದು ಕಷ್ಟ ಎನ್ನುವುದು ನಮಗೂ ಗೊತ್ತು. ಆದರೆ ಚೀನಾದಂಥ ನೀಚ ದೇಶದಿಂದ ಬಂದಿರುವ ಆದಾಯವನ್ನು ಅವಲಂಬಿಸಬಾರದು ಎನ್ನುವ ಕಾರಣಕ್ಕೇ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ದಯವಿಟ್ಟು ಎಲ್ಲರೂ ಇದಕ್ಕೆ ಸಹಕರಿಸಿ ನಿಮ್ಮ ಕೈಲಾದಷ್ಟು ದೇಶಭಕ್ತಿ ಮೆರೆಯಿರಿ ಎಂದಿದ್ದಾರೆ.

    ಕಳೆದ ಮೇ ತಿಂಗಳಿನಲ್ಲಿ ಜೊಮ್ಯಾಟೊ ತನ್ನ 520 ಸಿಬ್ಬಂದಿಯನ್ನು ವಜಾಗೊಳಿಸಿತ್ತು. ಆದರೆ ಈಗ ಉದ್ಯೋಗದಲ್ಲಿ ಇರುವ ಅನೇಕ ಮಂದಿ ಚೀನಾಕ್ಕೆ ಬುದ್ಧಿ ಕಲಿಸುವ ಸಲುವಾಗಿ ಉದ್ಯೋಗ ತ್ಯಜಿಸಿ ದೇಶಭಕ್ತಿ ಮೆರೆದಿದ್ದಾರೆ. (ಏಜೆನ್ಸೀಸ್‌)

    ಉದ್ಯೋಗ ಸೃಷ್ಟಿಗೆ ಇಸ್ರೋದಿಂದ ಮಹತ್ವದ ಘೋಷಣೆ: ಖಾಸಗಿಯವರಿಗೂ ತೆರೆದ ಬಾಗಿಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts