More

    ಉದ್ಯೋಗ ಸೃಷ್ಟಿಗೆ ಇಸ್ರೋದಿಂದ ಮಹತ್ವದ ಘೋಷಣೆ: ಖಾಸಗಿಯವರಿಗೂ ತೆರೆದ ಬಾಗಿಲು

    ಬೆಂಗಳೂರು: ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಅವಕಾಶದ ಬಾಗಿಲನ್ನು ಭಾರತದಲ್ಲಿಯೂ ತೆರೆಯಲಾಗಿದ್ದು, ಈ ಕುರಿತು ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಶೋಧನಾ ಸಂಸ್ಥೆ (ಇಸ್ರೊ) ಮಾಹಿತಿ ನೀಡಿದೆ.

    ರಾಕೆಟ್‌ ನಿರ್ಮಾಣ, ಉಪಗ್ರಹ ನಿರ್ಮಾಣ ಮತ್ತು ಉಡಾವಣೆಗಳಂತಹ ಕಾರ್ಯಗಳನ್ನೂ ಖಾಸಗಿಯವರೂ ಇನ್ನು ಮುಂದೆ ಕೈಗೊಳ್ಳಬಹುದಾಗಿದ್ದು, ಇದಕ್ಕೆ ಅಗತ್ಯ ನೆರವು, ತಂತ್ರಜ್ಞಾನ ವರ್ಗಾವಣೆ ಸೇರಿದಂತೆ ಎಲ್ಲಾ ನೆರವುಗಳನ್ನೂ ಇಸ್ರೊ ಸಹಕಾರ ನೀಡಲಿದೆ. ಖಾಸಗಿಯವರು ಇಲ್ಲಿಯವರೆಗೆ ಇಸ್ರೊಗೆ ಬಿಡಿ ಭಾಗಗಳನ್ನು ತಯಾರಿಸುವುದಷ್ಟಕ್ಕೇ ಸೀಮಿತವಾಗಿದ್ದರು. ಇನ್ನು ಮುಂದೆ ಬಾಹ್ಯಾಕಾಶ ಸಂಸ್ಥೆಗೆ ಸಮಾನವಾಗಿ ಬೆಳೆಯುವುದಕ್ಕೆ ಅವಕಾಶ ನೀಡುವ ಮಹತ್ವದ ಸುಧಾರಣಾ ಕ್ರಮ ಇದಾಗಿದೆ. ಇದರಿಂದ ದೇಶದಲ್ಲಿ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ದಿಯ ಹೊಸ ಯುಗವೇ ಸೃಷ್ಟಿಯಾಗಲಿದೆ ಎಂದು ಇಸ್ರೊ ಅಧ್ಯಕ್ಷ ಡಾ.ಕೆ.ಶಿವನ್ ತಿಳಿಸಿದ್ದಾರೆ.

    ಇಸ್ರೋದ ಮೂಲಭೂತ ಸೌಕರ್ಯಗಳನ್ನು ಖಾಸಗಿಯವರೂ ಬಳಕೆ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಖಾಸಗಿ ಉದ್ಯಮಗಳು ದೇಶದಲ್ಲಿ ಸ್ವತಂತ್ರವಾಗಿ ಬಾಹ್ಯಾಕಾಶ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡುವ ಮಹತ್ವದ ಸುಧಾರಣಾ ನೀತಿ ಇದಾಗಿದೆ ಎಂದು ಅವರು ಹೇಳಿದರು.

    ಇದನ್ನೂ ಓದಿ: ಕ್ಸ್​ಫರ್ಡ್​ನ ChAdOx1 nCoV-19 ಚುಚ್ಚುಮದ್ದು 10,260 ಜನರ ಮೇಲೆ ಪ್ರಯೋಗ

    ಭಾರತವು, ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ವಿಶ್ವ ಶಕ್ತಿಯಾಗಿ ಮಿಂಚಲು ಮತ್ತು ಅತ್ಯಂತ ಕಡಿಮೆ ವೆಚ್ಚದಲ್ಲಿ ಈ ಚಟುವಟಿಕೆಗಳನ್ನು ನಡೆಸುವುದರಿಂದ ಬಾಹ್ಯಾಕಾಶ ವಿಜ್ಞಾನ ಮೂಲದ ಆದಾಯ ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲು ಸಾಧ್ಯವಾಗಲಿದೆ. ಸುಧಾರಣಾ ಕ್ರಮವಾಗಿ ಹೊಸ ನ್ಯಾವಿಗೇಷನ್‌ ನೀತಿ ಜಾರಿ ಮಾಡಲಾಗುವುದು. ದೂರಸಂವೇದಿ ನೀತಿ ಮತ್ತು ಉಪಗ್ರಹ ನೀತಿಯನ್ನೂ ಪರಿಷ್ಕರಿಸಲಾಗುವುದು. ಖಾಸಗಿ ಕಂಪನಿಗಳು ಬೇಡಿಕೆ ಪೂರೈಕೆ ಮಾದರಿಗೆ ಸೀಮಿತವಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂದು ಶಿವನ್ ಹೇಳಿದರು.

    ರಾಕೆಟ್‌ ನಿರ್ಮಾಣ, ರಾಕೆಟ್‌ ಉಡ್ಡಯನ, ಉಪಗ್ರಹ ಮತ್ತು ಅದರ ಪೇಲೋಡ್‌ ನಿರ್ಮಾಣದಿಂದ ಮೊದಲ್ಗೊಂಡು ಹಲವು ಚಟುವಟಿಕೆಗಳು ಮತ್ತು ಸೇವೆಗಳನ್ನು ಖಾಸಗಿ ವಲಯ ನೀಡಬಹುದು. ಸಂಶೋಧನೆ ಮತ್ತು ಅಭಿವೃದ್ಧಿಯಲ್ಲೂ ತೊಡಗಿಕೊಳ್ಳಬಹುದು. ಇದರಿಂದ ದೇಶದಲ್ಲಿ ಉದ್ಯಮ ಬೆಳೆಯುವುದರ ಜತೆಗೆ ಉದ್ಯೋಗವೂ ಸೃಷ್ಟಿಯಾಗಲಿದೆ . ಖಾಸಗಿ ಕ್ಷೇತ್ರದ ದೊಡ್ಡ, ಸಣ್ಣ ಮಟ್ಟದ ಉದ್ಯಮಗಳು ಮತ್ತು ಸಾರ್ಟ್‌ಅಪ್‌ಗಳು ಭಾಗವಹಿಸಬಹುದು. ಇವರ ಚಟುವಟಿಕೆಗಳ ಗುಣಮಟ್ಟ, ಸುರಕ್ಷತೆ ಮತ್ತು ಭದ್ರತೆಯನ್ನು ಇಸ್ರೊ ನೋಡಿಕೊಳ್ಳಲಿದೆ ಎಂದು ಶಿವನ್ ಮಾಹಿತಿ ನೀಡಿದರು.

    ಪಿಜ್ಜಾ ಅಂಗಡಿ ಫ್ರಿಜ್‌ನಲ್ಲಿ 36 ಕೆ.ಜಿ ಸತ್ತ ಉಡ, ಜಿರಳೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts