More

    ಮೆಟಾ, ಟ್ವಿಟರ್, ಅಮೆಜಾನ್ ಬಳಿಕ ಜೊಮ್ಯಾಟೊದಲ್ಲೂ ಉದ್ಯೋಗ ಕಡಿತ..

    ನವದೆಹಲಿ: ಕಾರ್ಪೋರೇಟ್ ಸಂಸ್ಥೆಗಳಲ್ಲಿನ ಜಾಬ್​ಕಟ್​ ಟ್ರೆಂಡ್​ ಮತ್ತಷ್ಟು ಮುಂದುವರಿದಿದ್ದು, ಮೆಟಾ, ಅಮೆಜಾನ್, ಟ್ವಿಟರ್​ ಬಳಿಕ ಇದೀಗ ಜೊಮ್ಯಾಟೊದಲ್ಲೂ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ.

    ಜೊಮ್ಯಾಟೊ ಕಂಪನಿಯ ಉನ್ನತ ಹುದ್ದೆಗಳಲ್ಲಿನ ಮೂವರು ಇತ್ತೀಚೆಗೆ ಉದ್ಯೋಗ ತೊರೆದ ಬೆನ್ನಿಗೇ ಈ ಉದ್ಯೋಗಕಡಿತ ಉಂಟಾಗಿದೆ. ಸಂಸ್ಥೆಯ ವಿವಿಧ ವಿಭಾಗಗಳೂ ಸೇರಿದಂತೆ ಒಟ್ಟು ಶೇ. 3 ಉದ್ಯೋಗಿಗಳನ್ನು ತೆಗೆದುಹಾಕಲಿರುವುದಾಗಿ ಜೊಮ್ಯಾಟೊ ಹೇಳಿದೆ.

    ಫುಡ್ ಡೆಲಿವರಿ ಆ್ಯಪ್ ಆಗಿರುವ ಜೊಮ್ಯಾಟೊ ಕಂಪನಿಯ ನಿವ್ವಳ ಆದಾಯದಲ್ಲಿ 250.8 ಕೋಟಿ ರೂ. ನಷ್ಟ ಆಗಿರುವುದು ನ. 10ರಂದು ವರದಿಯಾಗಿತ್ತು. ಕಳೆದ ಒಂದು ವರ್ಷದ ಅವಧಿಯಲ್ಲಿ ಕಂಪನಿಯ ನಷ್ಟ 434.9 ಕೋಟಿ ರೂ. ಆಗಿದೆ. ಅದಾಗ್ಯೂ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಆದಾಯ 1,661.3 ಕೋಟಿ ರೂ.ಗೆ ಹೆಚ್ಚಳಗೊಂಡಿದೆ. ಅದಕ್ಕೂ ಹಿಂದಿನ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಆದಾಯ 1,024.2 ಕೋಟಿ ರೂ. ಆಗಿತ್ತು ಎಂದು ಮೂಲಗಳು ತಿಳಿಸಿವೆ.

    ‘ಡಾ.ಬ್ರೋ’ಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಕನ್ನಡಿಗರ ಆಗ್ರಹ; ಏನಂತಾರೆ ‘ನಮಸ್ಕಾರ ದೇವರು’?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts