More

    ಯುವರಾಜ್ ಕ್ಷಮೆ ಕೇಳಬೇಕು, ಅಭಿಮಾನಿಗಳಿಂದ ಅಭಿಯಾನ!

    ನವದೆಹಲಿ: ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಕ್ಷಮೆಯಾಚಿಸಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಂದ ಅಭಿಯಾನವೊಂದು ಶುರುವಾಗಿದೆ. ರೋಹಿತ್ ಶರ್ಮ ಜತೆಗಿನ ಇನ್‌ಸ್ಟಾಗ್ರಾಂ ಲೈವ್ ಮಾತುಕತೆಯ ವೇಳೆ ಸ್ಪಿನ್ನರ್ ಯಜುವೇಂದ್ರ ಚಾಹಲ್‌ರ ಕಾಲೆಳೆಯಲು ಯುವರಾಜ್ ಸಿಂಗ್ ಮಾಡಿದ ತಮಾಷೆಯೇ ಇಷ್ಟಕ್ಕೆಲ್ಲ ಕಾರಣವಾಗಿದೆ. ಈ ವೇಳೆ ಯುವರಾಜ್ ಜಾತಿ ನಿಂದನೆಯ ಮಾತು ಆಡಿದ್ದಾರೆ ಎಂಬ ಆರೋಪದಿಂದ ಟ್ವಿಟರ್‌ನಲ್ಲಿ ಅಭಿಮಾನಿಗಳು ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ.

    ಇದನ್ನೂ ಓದಿ: ಮೊಹಮದ್ ಶಮಿ ಕಾರ್ಯಕ್ಕೆ ಬಿಸಿಸಿಐ ಮೆಚ್ಚುಗೆ

    ಚಾಹಲ್‌ರ ಟಿಕ್‌ಟಾಕ್ ವಿಡಿಯೋಗಳ ಬಗ್ಗೆ ತಮಾಷೆ ಮಾಡುವ ವೇಳೆ ಯುವರಾಜ್, ಚಾಹಲ್‌ರನ್ನು ಒಬ್ಬ ‘ಭಂಗಿ’ ಎಂದು ಹೇಳಿದ್ದಾರೆ. ಇದರ ಜತೆಜತೆಯಲ್ಲೇ ಯುವಿ-ರೋಹಿತ್ ಜೋರಾಗಿ ನಕ್ಕಿದ್ದಾರೆ. ಇದಕ್ಕಾಗಿ ಸಮುದಾಯವೊಂದರ ಜನರು, ಯುವರಾಜ್ ವಿರುದ್ಧ ಆಕ್ರೋಶಗೊಂಡಿದ್ದಾರೆ.

    ಯುವಿ-ರೋಹಿತ್ ಮಾತುಕತೆ 2 ತಿಂಗಳ ಹಿಂದೆಯೇ ನಡೆದಿದ್ದರೂ, ಅದರ ಸಣ್ಣ ವಿಡಿಯೋ ತುಣುಕು ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಬೆನ್ನಲ್ಲೇ ಅಭಿಮಾನಿಗಳು, ‘ಯುವರಾಜ್ ಸಿಂಗ್ ಮಾಫಿ ಮಾಂಗೋ’ ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಅಭಿಯಾನ ಆರಂಭಿಸಿದ್ದಾರೆ. ಇದು ಸುಮಾರು 26 ಸಾವಿರಕ್ಕೂ ಅಧಿಕ ಟ್ವೀಟ್‌ಗಳಲ್ಲಿ ಬಳಕೆಯಾಗಿದೆ.

    ಇದನ್ನೂ ಓದಿ: ಮದುವೆಗೂ ಮುಂಚೆ ಅಪ್ಪನಾದ ಕ್ರಿಕೆಟಿಗರು..

    38 ವರ್ಷದ ಯುವರಾಜ್ ಈ ಮುನ್ನ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರ ಫೌಂಡೇಷನ್‌ಗೆ ನೆರವಾಗುವಂತೆ ಮನವಿ ಮಾಡಿದ ಕಾರಣದಿಂದಲೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು.

    ಮಹಾಭಾರತದ ಭೀಮಾ, ಏಷ್ಯಾಡ್ ಚಾಂಪಿಯನ್ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts