More

    ಮಹಾಭಾರತದ ಭೀಮಾ, ಏಷ್ಯಾಡ್ ಚಾಂಪಿಯನ್ !

    ನವದೆಹಲಿ: ಕರೊನಾ ವೈರಸ್ ಲಾಕ್‌ಡೌನ್ ವೇಳೆ ಮನೆಯಲ್ಲೇ ಲಾಕ್‌ಆಗಿದ್ದ ಮಂದಿಗೆ ಮನರಂಜನೆ ನೀಡುವ ಸಲುವಾಗಿ ದೂರದರ್ಶನದಲ್ಲಿ 1988ರಲ್ಲಿ ಪ್ರಸಾರಗೊಂಡಿದ್ದ ‘ಮಹಾಭಾರತ’ ಧಾರಾವಾಹಿನಿಯನ್ನು ಮರು ಪ್ರಸಾರ ಮಾಡಲಾಗಿತ್ತು. ಇದು ಕೋಟ್ಯಂತರ ವೀಕ್ಷಕರನ್ನು ತಲುಪಿ ಧಾರಾವಾಹಿನಿಯ ಹಿಂದಿನ ಗತವೈಭವನ್ನು ನೆನಪುಮಾಡಿಕೊಟ್ಟಿತ್ತು. ಮಹಾಭಾರತದಲ್ಲಿ ಭೀಮನ ಪಾತ್ರಧಾರಿ ಪ್ರವೀಣ್ ಕುಮಾರ್ ಸೊಬ್ತಿ, ಓರ್ವ ಕ್ರೀಡಾಪಟು ಎಂಬುದು ಎಷ್ಟೋ ಮಂದಿಗೆ ಗೊತ್ತಿರದ ವಿಷಯ. 60ರ ದಶಕದಲ್ಲೇ 4 ಬಾರಿ ಏಷ್ಯಾಡ್ ಪದಕ ಗೆದ್ದಿದ್ದ ವೀರ. ಜತೆಗೆ ಎರಡು ಬಾರಿ ಒಲಿಂಪಿಯನ್ ಆಗಿಯೂ ಗಮನಸೆಳೆದಿದ್ದಾರೆ.

    ಇದನ್ನೂ ಓದಿ: ಬೆತ್ತಲೆಯಾಗಿರುವ ಫೋಟೋವನ್ನು ಪೋಸ್ಟ್​ ಮಾಡಿ, ಟ್ರೋಲ್​ ಆದ ಕ್ರಿಕೆಟರ್​ ಮೊಹಮ್ಮದ್​ ಶಮಿ ಪತ್ನಿ…

    ಮಹಾಭಾರತದ ಭೀಮಾ, ಏಷ್ಯಾಡ್ ಚಾಂಪಿಯನ್ !ಪಂಜಾಬ್ ಮೂಲದ ಪ್ರವೀಣ್ ಕುಮಾರ್ ಸೊಬ್ತಿ ಭೀಮ ಪಾತ್ರದಲ್ಲಿ ಕೋಟ್ಯಂತರ ಜನರ ಗಮನಸೆಳೆದಿದ್ದರು. ಅವರೊಬ್ಬ ಸ್ಟಾರ್ ಕ್ರೀಡಾಪಟು ಎಂಬುದನ್ನು ಮರೆಯುವಂತಿಲ್ಲ. ಹ್ಯಾಮರ್ ಹಾಗೂ ಡಿಸ್ಕಸ್ ಥ್ರೋ ವಿಭಾಗದಲ್ಲಿ 2 ಸ್ವರ್ಣ, ತಲಾ ಒಂದು ಬೆಳ್ಳಿ ಹಾಗೂ ಕಂಚು ಜಯಿಸಿದ್ದರು. ಜತೆಗೆ 2 ಬಾರಿ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ (1968ರ ಮೆಕ್ಸಿಕೊ ಹಾಗೂ 1972 ಮುನಿಚ್) ಭಾರತ ಪ್ರತಿನಿಧಿಸಿದ್ದರು 6.6 ಅಡಿ ಎತ್ತರದ ದೈತ್ಯ ಪ್ರವೀಣ್. ಕ್ರೀಡಾ ಕ್ಷೇತ್ರಕ್ಕೆ ನಿವೃತ್ತಿ ಹೇಳಿದ ಬಳಿಕ ಸಿನಿಮಾ ಕ್ಷೇತ್ರದಲ್ಲಿ ತಮ್ಮ ಪ್ರವೀಣ್ ತೊಡಗಿಸಿಕೊಂಡರು. 73 ವರ್ಷದ ಪ್ರವೀಣ್, ಇದುವರೆಗೂ 1987ರಲ್ಲಿ ತೆರೆಕಂಡ ಶಾಹೇನ್‌ಷಾ ಚಿತ್ರ ಸೇರಿದಂತೆ 50 ಸಿನಿಮಾಗಳಲ್ಲಿ ನಟಿಸಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಇದ್ದಷ್ಟು ದಿನ ಸ್ಟಾರ್ ಅಥ್ಲೀಟ್ ಆಗಿ ಮೆರೆದ ಪ್ರವೀಣ್ ಕುಮಾರ್ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸದಿರುವ ದುಃಖ ಇನ್ನು ಇದೆಯಂತೆ. ಮಹಾಭಾರತದ ಭೀಮಾ, ಏಷ್ಯಾಡ್ ಚಾಂಪಿಯನ್ !ಆ ಕಾಲದಲ್ಲಿ ಕ್ರೀಡಾಕ್ಷೇತ್ರದಿಂಧ ನಾವು ಹೆಸರನ್ನಷ್ಟೇ ಗಳಿಸಿದೇವು,ಆದರೆ ಹಣ ಗಳಿಸಲಿಲ್ಲ ಎನ್ನುತ್ತಾರೆ. ಹಲವು ರಾಷ್ಟ್ರೀಯ ಮಟ್ಟದ ಕೂಟಗಳಲ್ಲಿ ಪದಕ ಜಯಿಸಿದ್ದ ಪ್ರವೀಣ್, 1966ರ ಕಿಂಗ್ಸ್‌ಸ್ಟನ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಒಂದು ಪದಕ ಜಯಿಸಿದ್ದರು. ಬಳಿಕ 1966, 1970ರ ಏಷ್ಯಾಡ್‌ನಲ್ಲಿ ತಲಾ ಒಂದು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರು. 1974ರ ತೆಹ್ರಾನ್ ಏಷ್ಯಾಡ್‌ನ್ ಡಿಸ್ಕಸ್ ಥ್ರೋ ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದರು. ಕ್ರೀಡಾ ಕ್ಷೇತ್ರದಿಂದ ನಿವೃತ್ತಿ ಹೊಂದಿದ ಬಳಿಕ ಸಿನಿಮಾವೇ ಅವರ ವೃತ್ತಿಯಾಯಿತು.ಮಹಾಭಾರತದ ಭೀಮಾ, ಏಷ್ಯಾಡ್ ಚಾಂಪಿಯನ್ !

    ಪಾಂಡ್ಯ ಭಾವಿ ಪತ್ನಿಗೆ ಸೀಮಂತ ಶಾಸ್ತ್ರ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts