More

    ಆರು ತಿಂಗಳ ನಂತರ ಚಿತ್ರೀಕರಣಕ್ಕೆ ವಾಪಸ್ಸಾದ ‘ಯುವರತ್ನ’

    ಬೆಂಗಳೂರು: ಎರಡು ಹಾಡುಗಳ ಚಿತ್ರೀಕರಣ ಮುಗಿದು ಬಿಟ್ಟಿದ್ದರೆ, ‘ಯುವರತ್ನ’ ಚಿತ್ರದ ಚಿತ್ರೀಕರಣವೇ ಮುಗಿದು ಹೋಗಿರುತಿತ್ತು. ಎರಡು ಹಾಡುಗಳ ಚಿತ್ರೀಕರಣಕ್ಕೆ ಫಾರಿನ್​ಗೆ ಹೋಗಬೇಕು ಎಂದು ಚಿತ್ರತಂಡದವರು ಪ್ಲಾನ್​ ಮಾಡಿಕೊಂಡಿದ್ದರು. ಅಷ್ಟರಲ್ಲಿ ಕರೊನಾ ಬಂತಲ್ಲ, ಚಿತ್ರತಂಡದವರ ಪ್ಲಾನ್​ಗಳೆಲ್ಲಾ ತಲೆ ಕೆಳಗಾದವು.

    ಇದನ್ನೂ ಓದಿ: ‘ಕೆಜಿಎಫ್​’ ಸಲುವಾಗಿ ಯಶ್ ವರ್ಕೌಟ್​ ಶೈಲಿ ಬದಲು

    ಅದಾಗಿ ಆರು ತಿಂಗಳುಗಳೇ ಆಗಿವೆ. ಇದೀಗ ಚಿತ್ರತಂಡ ಮತ್ತೆ ಇವತ್ತಿನಿಂದ ಚಿತ್ರೀಕರಣ ಶುರು ಮಾಡಿದೆ. ದಕ್ಷಿಣ ಭಾರತದ ಖ್ಯಾತ ನೃತ್ಯ ನಿರ್ದೇಶಕರಾದ ಜಾನಿ ಮಾಸ್ಟರ್​ ಅವರ ಸಾರಥ್ಯದಲ್ಲಿ ಪುನೀತ್​ ಅವರ ಇಂಟ್ರೋಡಕ್ಷನ್​ ಹಾಡನ್ನು ಚಿತ್ರೀಕರಣ ಮಾಡಲಿದೆ. ಅದಕ್ಕಾಗಿ ಕಂಠೀರವ ಸ್ಟುಡಿಯೋದಲ್ಲಿ ವಿಶೇಷ ಸೆಟ್​ವೊಂದನ್ನು ಹಾಕಲಾಗಿದ್ದು, ಆ ಸೆಟ್​​ನಲ್ಲಿ ಚಿತ್ರೀಕರಣ ನಡೆಯಲಿದೆ.

    ಅದಕ್ಕೂ ಮುನ್ನ, ಇತ್ತೀಚೆಗೆ ಆ ಹಾಡಿನ ಡ್ಯಾನ್ಸ್​ ರಿಹರ್ಸಲ್​ ನಡೆದಿದೆ. ಈ ರಿಹರ್ಸಲ್​ನಲ್ಲಿ ಪುನೀತ್​ ಮತ್ತು ಡ್ಯಾನ್ಸರ್​ಗಳು ಭಾಗವಹಿಸಿದ್ದು, ಜಾನಿ ಮಾಸ್ಟರ್​ ಅವರ ಸಾರಥ್ಯದಲ್ಲಿ ಪ್ರಾಕ್ಟೀಸ್​ ಮಾಡಿದ್ದಾರೆ. ಚಿತ್ರೀಕರಣ ಸಂದರ್ಭದಲ್ಲಿ ಸುಲಭವಾಗಲೀ ಎನ್ನುವ ಕಾರಣಕ್ಕೆ ತರಬೇತಿ ಸೆಶನ್​ ನಡೆದಿದ್ದು, ಇದೀಗ ಆ ಹಾಡಿನ ಮೇಕಿಂಗ್​ ವಿಡಿಯೋವೊಂದನ್ನು ಚಿತ್ರತಂಡದವರು ಯೂಟ್ಯೂಬ್​ನ ಹೊಂಬಾಳೆ ಫಿಲಂಸ್​ನ ಚಾನಲ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: ಡ್ರಗ್ಸ್​ ಕೇಸ್​: ಕೊನೆಗೂ ವಿಚಾರಣೆಗೆ ಬಂದ ಅನುಶ್ರೀ

    ಅಂದಹಾಗೆ, ‘ಯುವರತ್ನ’ ಚಿತ್ರದಲ್ಲಿ ಪುನೀತ್​ ಜತೆಗೆ ಸಯೇಷಾ ಸೆಹಗಲ್​, ದಿಗಂತ್, ಸೋನು ಗೌಡ, ಧನಂಜಯ್​ ಮುಂತಾದವರು ನಟಿಸಿದ್ದುದ್ದಾರೆ. ಚಿತ್ರಕ್ಕೆ ಕಥೆ-ಚಿತ್ರಕಥೆ ಜತೆಗೆ ಸಂಭಾಷಣೆ ರಚಿಸಿ ನಿರ್ದೇಶನ ಮಾಡುತ್ತಿರುವುದು ಸಂತೋಷ್​ ಆನಂದರಾಮ್​. ಈ ಹಿಂದೆ ಪುನೀತ್​ ಅಭಿನಯದಲ್ಲಿ ‘ರಾಜ್​ಕುಮಾರ’ ಮತ್ತು ‘ನಿನ್ನಿಂದಲೇ’ ಚಿತ್ರಗಳನ್ನು ನಿರ್ಮಿಸಿದ್ದ ಹೊಂಬಾಳೆ ಫಿಲಂಸ್​ನ ವಿಜಯ್​ ಕುಮಾರ್ ಕಿರಗಂದೂರು ಈ ಚಿತ್ರವನ್ನು ಸಹ ನಿರ್ಮಿಸುತ್ತಿದ್ದಾರೆ.

    ಮಣ್ಣಲ್ಲಿ ಮಣ್ಣಾದ ಗಾನ ಗಾರುಡಿಗ ಎಸ್​.ಪಿ. ಬಾಲಸುಬ್ರಹ್ಮಣ್ಯಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts