More

    “ನನ್ನ ಪಕ್ಕದಲ್ಲಿಯೇ ಜಿಗಿದರು, ಬದುಕುತ್ತೇವೆಯೋ ಇಲ್ಲವೋ ಎಂದು ಯೋಚಿಸುತ್ತಿದ್ದೆವು” ಬಿಎಸ್‌ಪಿ ಸಂಸದ ಮಲೂಕ್ ನಗರ್ ಹೇಳುವಂತೆ…

    ನವದೆಹಲಿ: ದೇಶದ ಸಂಸತ್ತಿನ ಭದ್ರತೆಯಲ್ಲಿ ಬುಧವಾರ ದೊಡ್ಡ ಪ್ರಮಾದವೊಂದು ನಡೆದಿದೆ. ಇಬ್ಬರು ಯುವಕರು ಸಂದರ್ಶಕರ ಗ್ಯಾಲರಿಯಿಂದ ಜಿಗಿದಿದ್ದಾರೆ. ಈ ಇಬ್ಬರೂ ಬಿಎಸ್‌ಪಿ ಸಂಸದ ಮಲೂಕ್ ನಗರ್ ಬಳಿಯೇ ಜಿಗಿದಿದ್ದಾರೆ ಎಂದು ಹೇಳಲಾಗುತ್ತಿದೆ. ಇವರಿಬ್ಬರನ್ನೂ ಕೂಡಲೇ ಮಲೂಕ್ ನಗರ್ ಮತ್ತು ಇತರ ಸಂಸದರು ಹಿಡಿದರು. ಮಲೂಕ್ ನಗರ್ ಬಿಜ್ನೋರ್​​​ನ ಬಿಎಸ್‌ಪಿ ಸಂಸದರು. ಇವರು ಹೇಳುವ ಪ್ರಕಾರ, “ಲೋಕಸಭೆಯಲ್ಲಿ ಹೊಗೆ ಬಂಡಿ ತೆರೆದಂತೆ ಹೊಗೆಯಾಡುತ್ತಿತ್ತು. ಈ ಘಟನೆಯ ನಂತರ ಎಲ್ಲಾ ಸಂಸದರು ಭಯಭೀತರಾಗಿದ್ದರು. ಬಳಿಕ ಸಂಸದರು ಅವರನ್ನು ಹಿಡಿದರು. ಕೆಲವು ಸಂಸದರು ಅವರನ್ನು ಥಳಿಸಲು ಆರಂಭಿಸಿದರು. ಜೀವ ಉಳಿಸಿಕೊಳ್ಳೋದು ಹೇಗೆ ಅನ್ನೋದು ನನ್ನ ಮನಸಿನಲ್ಲಿತ್ತು. ಮುಂದೆ ಸಾವು ಕಾಣಿಸುತ್ತಿತ್ತು. ಅವರ ಉದ್ದೇಶ ಕೆಟ್ಟದಾಗಿದೆ ಎಂಬ ಮೊದಲ ಆಲೋಚನೆ ನನಗೆ ಬಂದಿತು. ನಾವು ಬದುಕುತ್ತೇವೆಯೋ ಇಲ್ಲವೋ?, ಯಾವುದೇ ಆಯುಧಗಳು ಇಲ್ಲದಿರಬಹುದು. ಆದರೆ ಅವರು ಏನನ್ನಾದರೂ ಮಾಡುವ ಮೊದಲು, ಎಲ್ಲಾ ಸಂಸದರು ಅವರ ಮೇಲೆ ಎರಗಿದರು.

    ನಮಗೆ ಭಯವಾಯಿತು, ಆದರೆ ಅವರು ಏನಾದರೂ ಮಾಡಬಹುದೆಂಬ ಭಯದಿಂದ ನಾವೆಲ್ಲರೂ ಅವರ ಮೇಲೆ ಎರಗಿದೆವು. ಕೆಲವು ಸಂಸದರು ಅವರನ್ನು ಥಳಿಸಿದ್ದಾರೆ. ತುಂಬಾ ಕೆಟ್ಟ ವಾಸನೆ ಇತ್ತು. ಇನ್ನು 4ರಿಂದ 5 ನಿಮಿಷಗಳಲ್ಲಿ ಸಂಸತ್ ಕಲಾಪ ಮುಗಿಯುವುದರಲ್ಲಿತ್ತು” ಎಂದು ಬಿಎಸ್‌ಪಿ ಸಂಸದರು ತಿಳಿಸಿದ್ದಾರೆ.

    “ಊಟದ ವಿರಾಮ ಆಗಬೇಕಿತ್ತು. ಇದ್ದಕ್ಕಿದ್ದ ಹಾಗೆ ನನ್ನ ಸೀಟಿನ ಬಳಿ ಬಡಿಯುವ ಸದ್ದು ಕೇಳಿಸಿತು. ಯಾರಾದರೂ ಬಿದ್ದಿದ್ದಾರೆಯೇ ಎಂದು ನೋಡಿದೆವು. ಅಷ್ಟರೊಳಗೆ ಮತ್ತೊಬ್ಬ ಯುವಕ ಹಿಂದಿನಿಂದ ಜಿಗಿದ. ಈ ಯುವಕರು ತಮ್ಮ ಬೂಟಿನೊಳಗಿನಿಂದ ಒಂದು ರೀತಿಯ ಅನಿಲ ತೆಗೆದುಕೊಂಡು ದಾಳಿ ಮಾಡಲು ಪ್ರಯತ್ನಿಸಿದರು. ಆದರೆ ನಾವೆಲ್ಲರೂ ಅವರನ್ನು ಹಿಡಿದೆವು. ನನ್ನ ಜೊತೆ ಇನ್ನೂ ನಾಲ್ಕೈದು ಜನ ಸಂಸದರು ಬಂದಿದ್ದು, ಅವರನ್ನು ಥಳಿಸಿದೆವು. ಇದ್ದಕ್ಕಿದ್ದಂತೆ ಯುವಕ ತನ್ನ ಶೂನಿಂದ ತೆಗೆದಾಗ ಹಳದಿ ಹೊಗೆ ಬರಲಾರಂಭಿಸಿದ್ದು, ದುರ್ವಾಸನೆ ಬೀರುತ್ತಿತ್ತು” ಎಂದು ತಿಳಿಸಿದ್ದಾರೆ.

    ಸರ್ವಾಧಿಕಾರ ನಡೆಯುವುದಿಲ್ಲ
    ಮಲೂಕ್ ನಗರ್ ಪ್ರಕಾರ, ತುಂಬಾ ಹೊಗೆ ಹರಡಿತು, ಉಸಿರಾಡಲು ಕಷ್ಟವಾಯಿತು. ಯುವಕರು ಯಾವುದೇ ಘೋಷಣೆಗಳನ್ನು ಎತ್ತಲಿಲ್ಲ ಅಥವಾ ಕರಪತ್ರಗಳನ್ನು ತಂದಿರಲಿಲ್ಲ. ಸರ್ವಾಧಿಕಾರ ಕೆಲಸ ಸಲ್ಲ ಎಂಬುದಷ್ಟೇ ಕೇಳಿ ಬರುತ್ತಿತ್ತು. ಅವರು ಇದೇ ರೀತಿ ಹೇಳುತ್ತಿದ್ದರು. ಆ ಸಮಯದಲ್ಲಿ ಏನೂ ಕೇಳಿಸಲಿಲ್ಲ ಎಂದು ಹೇಳಿದ್ದಾರೆ.

    Loksabha: ಭಾರೀ ಭದ್ರತಾ ವೈಫಲ್ಯ; ಸದನದಲ್ಲಿ ಹರಡಿದ ಹಳದಿ ಅನಿಲ…ಪ್ರೇಕ್ಷಕರ ಗ್ಯಾಲರಿಯಿಂದ ಜಿಗಿದ ದಾಳಿಕೋರರು, ಫೋಟೋಗಳಲ್ಲಿ ನೋಡಿ..

    ಬಿಗಿ ಭದ್ರತೆಯ ನಡುವೆಯೂ ಲೋಕಸಭೆಯಲ್ಲಿ ಭಾರಿ ಭದ್ರತಾ ಲೋಪ; ಸದನದಿಂದ ಹೊರಗೆ ಓಡಿಹೋದ ಸಂಸದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts