More

    ಗಮನಿಸಿ: ಈ ಕೆಲಸ ಮಾಡದಿದ್ದರೇ ಮುಂದಿನ ತಿಂಗಳು ನಿಮ್ಮ PAN ಕಾರ್ಡ್​ ಸ್ಥಗಿತಗೊಳ್ಳಲಿದೆ

    ಬೆಂಗಳೂರು: PAN (Permanent Account Number) ಕಾರ್ಡ್​ ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. ಬ್ಯಾಂಕಿಂಗ್ ಹಾಗೂ ಹಣಕಾಸಿನ ವ್ಯವಹಾರಗಳಿಗಂತೂ ಪ್ಯಾನ್​ ಕಾರ್ಡ್​ ಬೇಕೆ ಬೇಕು. ಪ್ಯಾನ್​ ಕಾರ್ಡ್​ಗೆ ಆಧಾರ್ ಕಾರ್ಡ್​ ಲಿಂಕ್ ಮಾಡಲೇಬೇಕು ಎಂಬ ನಿಯಮವನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ.

    ಇದೇ ಮಾರ್ಚ್​ 31 ರ ಒಳಗಾಗಿ ನೀವು ನಿಮ್ಮ ಪ್ಯಾನ್​ ಕಾರ್ಡ್​ಗೆ ಆಧಾರ್​ ನಂಬರ್​ನ್ನು ಲಿಂಕ್​ ಮಾಡದಿದ್ದರೇ, ನಿಮ್ಮ ಪ್ಯಾನ್​ ಕಾರ್ಡ್​ ಇದ್ದೂ ಇಲ್ಲದಂತಾಗುತ್ತದೆ. ಅಂದರೆ ಅದನ್ನು ತೆರಿಗೆ ಇಲಾಖೆ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಈಗಾಗಲೇ ಸರ್ಕಾರ ಹಲವು ಬಾರಿ ಪ್ಯಾನ್​ ಕಾರ್ಡ್​ಗೆ ಆಧಾರ್​ ಲಿಂಕ್ ಮಾಡುವ ಗಡುವನ್ನು ನೀಡಿ ವಿಸ್ತರಿಸುತ್ತಾ ಬಂದಿದೆ. ಮಾರ್ಚ್ 31 ಕೊನೆ ಎಂದು ಹೇಳಿದೆ. ಅಷ್ಟರ ಒಳಗಾಗಿ ಲಿಂಕಿಂಗ್ ಪ್ರಕ್ರಿಯೆಯನ್ನು ಮಾಡಿಕೊಳ್ಳಬೇಕಾಗಿದೆ.

    ಇದನ್ನೂ ಓದಿ: ಇಂಥವರನ್ನ ನಂಬಿದ್ರೆ ಲೈಫ್​ ಬರ್ಬಾದ್​: ಬಂಧಿತ ಮೂವರು ಸಹೋದರರ ಕರಾಳ ಮುಖವಿದು..!

    ಪ್ಯಾನ್​ ಕಾರ್ಡ್​ಗೆ ಆಧಾರ್ ಲಿಂಕ್ ಮಾಡುವುದು ಬಹಳ ಸುಲಭ: https://www.incometaxindiaefiling.gov.in/home ವೆಬ್​ಸೈಟಿಗೆ ಹೋಗಿ Link Aadhaar ಮೇಲೆ ಕ್ಲಿಕ್ ಮಾಡಿದರೇ ಅಲ್ಲಿನ ಕೆಲವು ಸುಲಭವಾದ ಪ್ರಕ್ರಿಯೆಗಳನ್ನು ಮುಗಿಸಿದರೆ ನಿಮ್ಮ ಪ್ಯಾನ್​ ಕಾರ್ಡ್​ ಆಧಾರ್​ಗೆ ಲಿಂಕ್ ಆಗುತ್ತದೆ. ಅಲ್ಲದೇ ಎಸ್​ಎಂಎಸ್ ಮೂಲಕವೂ ಪ್ಯಾನ್​ ಕಾರ್ಡ್​​ನ್ನು ಲಿಂಕ್ ಮಾಡಬಹುದು. ಈ ಪಾರ್ಮಾಟ್​​ನಲ್ಲಿ UIDPAN (12-digit Aadhaar number) (10-digit PAN) and send it to 567678 or 56161. ತೆರಿಗೆ ಇಲಾಖೆ ಕಚೇರಿಗೆ ಹೋಗಿಯೂ ನೀವು ಸಂಬಂಧಿಸಿದ ಅರ್ಜಿ ತುಂಬಿ ಕೊಡುವ ಮೂಲಕವೂ ಪ್ಯಾನ್​ಗೆ ಆಧಾರ್ ಲಿಂಕ್ ಮಾಡಬಹುದು.

    ರಾತ್ರೋರಾತ್ರಿ ಸಿನಿಮಾ ಹಾಲ್​ಗೆ ನುಗ್ಗಿ ಸ್ನ್ಯಾಕ್ಸ್​​ ಕದ್ದು ತಿಂದು, ಸೆಕ್ಸ್​ ಮಾಡಿ ಸಿಸಿಟಿವಿಯಲ್ಲಿ ಸಿಕ್ಕಿಬಿದ್ದ ದಂಪತಿ!

    ಧೂಮಪಾನಿಗಳೇ ರೈಲು ಪ್ರಯಾಣದಲ್ಲಿ ಇನ್ಮುಂದೆ ಬಹಳ ಎಚ್ಚರದಿಂದ ಇರಿ: ಯಾಕೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts