More

    ಅರ್ಜಿ ಸಲ್ಲಿಕೆಗೆ ಸರ್ವರ್, ಕರೆಂಟ್ ಪ್ರಾಬ್ಲಂ!

    ಭದ್ರಾವತಿ: ರಾಜ್ಯ ಸರ್ಕಾರ ಗೃಹಲಕ್ಷಿ÷್ಮÃ ಯೋಜನೆ ಜಾರಿಗೊಳಿಸಿ ವಾರ ಕಳೆದಿದೆ. ಮಹಿಳೆಯರು ಅದರ ಲಾಭ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವ ಸರಳ ಸೂತ್ರಗಳನ್ನೂ ಜಾರಿಗೊಳಿಸಿದೆ. ಆದರೂ ಸಾಕಷ್ಟು ಮಹಿಳೆಯರು ಹೆಸರು ನೊಂದಾಯಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ.

    ಗೃಹಲಕ್ಷಿ÷್ಮÃಯೋಜನೆಗೆ ಅರ್ಜಿ ಸಲ್ಲಿಸಲು ಮನೆಯೊಡತಿಯ ಪಡಿತರ ಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಮಾತ್ರ ಬೇಕು. ಆದರೆ ಈ ದಾಖಲೆಗಳು ಕಾನೂನಾತ್ಮಕವಾಗಿ ಸರಿಯಾಗಿರಬೇಕು. ಬಹುತೇಕ ಮಹಿಳೆಯರ ದಾಖಲೆಗಳು ಸರಿ ಇಲ್ಲದಿರುವುದು ಮನೆಯೊಡತಿ ಮನೆ ಬಿಟ್ಟು ಕಚೇರಿ ಅಲೆಯುವಂತಾಗಿದೆ.
    ಕೆಲವರದು ಆಧಾರ್ ಸಮಸ್ಯೆಯಾದರೆ ಮತ್ತೆ ಕೆಲವರದು ಬ್ಯಾಂಕ್‌ಗೆ ಲಿಂಕ್ ಆಗಿರುವುದಿಲ್ಲ. ಅಷ್ಟೇ ಅಲ್ಲದೆ ಕೆಲ ಪಡಿತರ ಚೀಟಿಗಳು ಲ್ಯಾಪ್ಸ್ ಆಗಿರುವುದು ಸಾಮಾನ್ಯವಾಗಿದೆ. ಇಷ್ಟೆಲ್ಲ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ತಾಲೂಕು ಕಚೇರಿಗೆ ತೆರಳುವ ಮಹಿಳೆಯರಿಗೆ ಅಲ್ಲಿ ಸರ್ವರ್, ಕರೆಂಟ್ ಪ್ರಾಬ್ಲಂ ಎದುರಾಗುತ್ತಿದೆ.
    ಬುಧವಾರ ತಾಲೂಕು ಕಚೇರಿಯಲ್ಲಿ ಮಧ್ಯಾಹ್ನದವರೆಗೂ ಕರೆಂಟ್ ಸಮಸ್ಯೆ ಎದುರಾಗಿದ್ದು ಮಧ್ಯಾಹ್ನದ ಮೇಲೆ ಸರ್ವರ್ ಪ್ರಾಬ್ಲಂ ಕಾಣಿಸಿಕೊಂಡಿದೆ. ಇದರಿಂದಾಗಿ ೩೦೦ಕ್ಕೂ ಹೆಚ್ಚು ಜನರು ಕ್ಯೂನಲ್ಲಿ ನಿಂತು ಹರಸಾಹಸ ಪಡುವಂತಾಗಿದೆ. ಸುರಿಯುತ್ತಿರುವ ಮಳೆಯಲ್ಲಿ ನಾಗರಿಕರು ಸಾಲುಗಟ್ಟಿ ನಿಲ್ಲುವುದು ಮತ್ತೊಂದು ಸಮಸ್ಯೆ. ತಾಲೂಕು ಕಚೇರಿಯ ಅಽಕಾರಿಗಳು ತಮ್ಮ ಕಚೇರಿಯಲ್ಲಿ ಕರೆಂಟ್, ಸರ್ವರ್ ಸಮಸ್ಯೆಗಳು ಬಾರದಂತೆ ನೋಡಿಕೊಳ್ಳಬೇಕೆಂದು ಸರದಿ ಸಾಲಿನಲ್ಲಿ ನಿಂತ ಹಲವರು ಮನವಿ ಮಾಡಿದ್ದಾರೆ. ಇದರ ನಡುವೆಯೂ ತಾಲೂಕಿನಲ್ಲಿ 18 ಸಾವಿರ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ.
    ಒಟ್ಟಾರೆ ರಾಜ್ಯ ಸರ್ಕಾರದ ಉಚಿತ ಯೋಜನೆಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ ಫುಲ್ ಆದಂತೆ ಇದೀಗ ನಗರ ಪ್ರದೇಶದ ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು, ಕರ್ನಾಟಕ ಒನ್, ಸೇರಿ ಸರ್ಕಾರದ ಯೋಜನೆಗಳನ್ನು ಒದಗಿಸುವ ಸೈಬರ್ ಸೆಂಟರ್‌ಗಳು ಹೌಸ್‌ಫುಲ್ ಆಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts