More

    ದಂಡಂ ದಶಗುಣಂ… ವ್ಹೀಲಿಂಗ್ ಮಾಡಿ ವಿಡಿಯೋ ಅಪ್​ಲೋಡ್​ ಮಾಡಿದ ಯುವಕನಿಗೆ ಕಾದಿತ್ತು ಶಾಕ್​

    ಶಿವಮೊಗ್ಗ: ಈ ಸೋಶಿಯಲ್​ ಮೀಡಿಯಾ ಜಮಾನದಲ್ಲಿ ಫೇಮಸ್​ ಆಗಲೆಂದೇ ಸಾಕಷ್ಟು ಮಂದಿ ನಾನಾ ಸರ್ಕಸ್​ ಮಾಡುತ್ತಿರುತ್ತಾರೆ. ಕೆಲವರು ಏನೇನೋ ಮಾಡಲು ಹೋಗಿ ಕಾನೂನಿನ ನಿಯಮಗಳನ್ನು ಮುರಿದು ಜೈಲು ಅತಿಥಿಯಾದ ಉದಾಹರಣೆಗಳಿವೆ. ಇತ್ತೀಚಿನ ದಿನಗಳಲ್ಲಿ ಬೈಕ್​ ವ್ಹೀಲಿಂಗ್​ ಮಾಡುವ ವ್ಯಾಮೋಹ ಅತಿಯಾಗುತ್ತಿದೆ. ಅಪಾಯಕಾರಿ ಎಂದು ಗೊತ್ತಿದ್ದರೂ ಲೈಕ್ಸ್​ಗಾಗಿ ದುಸ್ಸಾಹಸಕ್ಕೆ ಕೈ ಹಾಕುತ್ತಿದ್ದಾರೆ. ಇಂಥವರ ಮೇಲೆ ಪೊಲೀಸ್​ ಇಲಾಖೆ ಹದ್ದಿನ ಕಣ್ಣಿಟ್ಟಿದೆ ಎಂಬುದನ್ನು ಮರೆಯುವಂತಿಲ್ಲ.

    ಹೌದು, ಇತ್ತೀಚಿನ ದಿನಗಳಲ್ಲಿ ಬೈಕ್ ವ್ಹೀಲಿಂಗ್ ವ್ಯಾಮೋಹ ಶಿವಮೊಗ್ಗ ನಗರದಾದ್ಯಂತ ಹೆಚ್ಚುತ್ತಿದೆ. ರಾಷ್ಟ್ರೀಯ ಹೆದ್ದಾರಿ ಒಳಗೊಂಡಂತೆ ಬೈಪಾಸ್ ರಸ್ತೆ, ಸಾಗರ ರಸ್ತೆ ಸೇರಿ ಹಲವೆಡೆ ಬೈಕ್​ಗಳ ವ್ಹೀಲಿಂಗ್ ನಡಸಲಾಗುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳು ವೈರಲ್ ಅಗುತ್ತಿವೆ. ಅದರ ಬೆನ್ನಲ್ಲೇ ಕಾರ್ಯಾಚರಣೆ ನಡೆಸಿರುವ ಪಶ್ಚಿಮ ಸಂಚಾರ ಠಾಣೆ ಪೊಲೀಸರು, ಬೈಕ್ ವ್ಹೀಲೀಂಗ್ ಮಾಡುತ್ತಿದ್ದ ಸವಾರನಿಗೆ ಶಾಕ್ ನೀಡಿದ್ದಾರೆ.

    ನಗರದ ರಸ್ತೆಯಲ್ಲಿ ಕೆಟಿಎಂ ಬೈಕ್‌ ವ್ಹೀಲಿಂಗ್‌ ಮಾಡಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ್ದ. ಚಾಲಕನಿಗೆ ನ್ಯಾಯಾಲಯವು ಬರೋಬ್ಬರಿ 10 ಸಾವಿರ ರೂ. ದಂಡ ವಿಧಿಸಿದೆ.

    ಬೈಕ್ ಸವಾರನನ್ನು ಪತ್ತೆ ಮಾಡಿದ್ದ ಪಶ್ಚಿಮ ಸಂಚಾರ ಠಾಣೆ ಪಿಎಸ್‌ಐ ತಿರುಮಲೇಶ್‌ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನೆಡಸಿದ ನ್ಯಾಯಾಲಯ ಆರೋಪಿಗೆ 10 ಸಾವಿರ ರೂ. ದಂಡ ವಿಧಿಸಿದೆ. ವ್ಹೀಲಿಂಗ್‌ ದೃಶ್ಯ ಮತ್ತು ಆ ಬಳಿಕ ಪೊಲೀಸರು ದಂಡದ ರಸೀದಿ ನೀಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಬೇರೆಯವರಿಗೆ ಎಚ್ಚರಿಕೆ ಗಂಟೆಯಾಗಿದೆ.

    ಮೈಸೂರು-ಬೆಂಗಳೂರು ಎಕ್ಸ್​ಪ್ರೆಸ್​ವೇನಲ್ಲಿ ವ್ಹೀಲಿಂಗ್: ನಾಲ್ವರ ಬಂಧನ, 2 ಬೈಕ್​ ವಶಕ್ಕೆ​

    VIDEO| ಅಜಯ್​ ದೇವಗನ್​ ಅನುಸರಿಸಲು ಹೋಗಿ ಜೈಲು ಪಾಲಾದ ಯುವಕ: ವಾಹನಗಳೂ ಸೀಜ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts