ಸಿನಿಮಾ

ಮದುವೆ ಮನೆಯಲ್ಲಿ ರಸಂ ಪಾತ್ರೆಗೆ ಬಿದ್ದ 21 ವರ್ಷದ ಯುವಕನ ದಾರುಣ ಅಂತ್ಯ…

ತಮಿಳುನಾಡು: ನೆರೆಯ ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ ಆಕಸ್ಮಿಕವಾಗಿ ಒಲೆಯ ಮೇಲಿದ್ದ ಬಿಸಿ ರಸಂನ ಕಡಾಯಿಗೆ ಬಿದ್ದು 21 ವರ್ಷದ ಯುವಕ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಕಾಲೇಜು ಜೀವನದೊಂದಿಗೆ ಅರೆಕಾಲಿಕ ಕೆಲಸ ಮಾಡುತ್ತಿದ್ದ ಯುವಕ

ಸಂತ್ರಸ್ತ ಕಾಲೇಜು ವಿದ್ಯಾರ್ಥಿಯಾಗಿದ್ದು, ಕೇಟರಿಂಗ್​ ಸಂಸ್ಥೆಯಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದ. ಕಳೆದ ವಾರ ಮದುವೆ ಸಮಾರಂಭವೊಂದರಲ್ಲಿ ಅತಿಥಿಗಳಿಗೆ ಊಟ ಬಡಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅತಿಥಿಗಳಿಗೆ ಬಡಿಸಲು ರಸಂ ಅನ್ನು ಬಿಸಿ ಮಾಡುತ್ತಿದ್ದಾಗ ಕುದಿಯುತ್ತಿದ್ದ ಕಡಾಯಿಗೆ ಯುವಕ ಬಿದ್ದಿದ್ದಾನೆ. ತೀವ್ರ ಸುಟ್ಟಗಾಯಗಳಾಗಿರುವ ಸಂತ್ರಸ್ತನನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಏಪ್ರಿಲ್ 30ರಂದು ಆತ ಮೃತಪಟ್ಟಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)

Latest Posts

ಲೈಫ್‌ಸ್ಟೈಲ್