More

    ಮಧ್ಯಪ್ರದೇಶ ಬಿಕ್ಕಟ್ಟಿಗೆ ಒಂದು ಟ್ವಿಸ್ಟ್ ಕಾದಿದೆ ನೋಡಿ ಎಂದ ಕಾಂಗ್ರೆಸ್ ನಾಯಕ!

    ನವದೆಹಲಿ: ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು.ಹೀಗಾಗಿ ಬಂಡಾಯದ ಬಾವುಟ ಹಾರಿಸಿ ಮಧ್ಯಪ್ರದೇಶ ಸರ್ಕಾರದ ಪತನಕ್ಕೆ 22 ಶಾಸಕರ ಬಂಡಾಯ ಕಾರಣವಾಗಬಹುದು ಎಂದುಕೊಳ್ಳಬೇಡಿ.ಅಲ್ಲಿನ ರಾಜಕೀಯ ಬಿಕ್ಕಟ್ಟಿಗೆ ಒಂದು ಟ್ವಿಸ್ಟ್ ಕಾದಿದೆ ನೋಡಿ ಎಂದು ಕಾಂಗ್ರೆಸ್​ನ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಹೇಳಿದ್ದಾರೆ.

    ಇಷ್ಟಕ್ಕೂ ಅವರು ನವದೆಹಲಿಯಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ, ಮಧ್ಯಪ್ರದೇಶದ 22 ಬಂಡಾಯ ಶಾಸಕರ ಪೈಕಿ 13 ಶಾಸಕರು ಪಕ್ಷ ಬಿಡುವುದಿಲ್ಲ ಎಂದು ಆಶ್ವಾಸನೆ ನೀಡಿದ್ದಾರೆ. ಮಧ್ಯಪ್ರದೇಶದಲ್ಲಿನ ಬೆಳವಣಿಗೆ ನೋಡುತ್ತ ನಾವೇನೂ ಸುಮ್ಮನೆ ಕುಳಿತಿಲ್ಲ. ನಾವು ನಿದ್ದೆಯೂ ಹೋಗಿಲ್ಲ.ಹೀಗಾಗಿ ಅವಿಶ್ವಾಸ ಗೊತ್ತುವಳಿಯಲ್ಲಿ ನಾವು ಗೆಲ್ಲುತ್ತೇವೆ. ಸಿಂಧಿಯಾ ಅವರಿಗೆ ನಾವು ಉಪಮುಖ್ಯಮಂತ್ರಿ ಹುದ್ದೆಯನ್ನು ನೀಡುವುದಾಗಿ ಹೇಳಿದ್ದೆವು.ಆದರೆ, ಅದಕ್ಕವರು ಒಪ್ಪಲಿಲ್ಲ.ಅವರು ರಾಜ್ಯಸಭೆಗೆ ಹೋಗಲು ಬಯಸಿದ್ದರೆ ಕಾಂಗ್ರೆಸ್ ಪಕ್ಷವೇ ಅವರನ್ನು ಕಳುಹಿಸುತ್ತಿತ್ತು. ಆದರೆ, ಅತಿಯಾದ ಮಹತ್ವಾಕಾಂಕ್ಷಿ ನಾಯಕನಿಗೆ ಕ್ಯಾಬಿನೆಟ್ ಪೋಸ್ಟ್ ಕೊಡಬೇಕು ಎಂದರೆ ಅದು ಮೋದಿ ಮತ್ತು ಷಾ ಅವರಿಂದ ಮಾತ್ರ ಸಾಧ್ಯ ಎಂದು ಟಾಂಗ್ ನೀಡಿದರು.

    ಮಧ್ಯಪ್ರದೇಶ ವಿಧಾನಸಭೆಯ ಒಟ್ಟು ಸದಸ್ಯ ಬಲ 230.ಈ ಪೈಕಿ ಎರಡು ಸ್ಥಾನ ಇಬ್ಬರ ನಿಧನ(ಬಿಜೆಪಿ, ಕಾಂಗ್ರೆಸ್ ಶಾಸಕರು)ದ ಕಾರಣಕ್ಕೆ ಖಾಲಿ ಇದೆ.ಇನ್ನುಳಿದ 228 ಸ್ಥಾನಗಳ ಪೈಕಿ ಕಾಂಗ್ರೆಸ್​ ಬಲ 114 (22 ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ), ಬಿಜೆಪಿಗೆ 107, ಬಿಎಸ್​ಪಿ 2, ಸಮಾಜವಾದಿ ಪಕ್ಷ 1, ಪಕ್ಷೇತರ ಶಾಸಕರು ನಾಲ್ವರು ಇದ್ದಾರೆ. ದಿಗ್ವಿಜಯ ಸಿಂಗ್ ಅವರ ಮಾತು, ಮಹಾರಾಷ್ಟ್ರದ ರಾಜಕೀಯ ಹೈಡ್ರಾಮಾವನ್ನು ಒಮ್ಮೆ ನೆನಪಿಸಲೂ ಸಾಕು. ಅಜಿತ್ ಪವಾರ್​ ಅವರ ರಾಜಕೀಯ ನಡೆ ಕಣ್ಣ ಮುಂದೆ ಹಾದು ಹೋಗಬಹುದು.ಮಹಾರಾಷ್ಟ್ರ ವಿಕಾಸ್ ಅಘಾಡಿಯ ನೆನಪು ಮಾಡಿದರೂ, ಮೇಲಿನ ಸಂಖ್ಯಾಬಲ ನೋಡಿದರೆ ಅಂತಹ ಚಮತ್ಕಾರ ಮಧ್ಯಪ್ರವೇಶದಲ್ಲಿ ನಡೆಯದು ಎಂಬುದು ಸರ್ವವೇದ್ಯ. ಮತ್ತೇನು ಟ್ವಿಸ್ಟ್​ ಕೊಡುತ್ತಾರೋ ನೋಡಬೇಕಷ್ಟೆ! (ಏಜೆನ್ಸೀಸ್​)

    ಮಧ್ಯಪ್ರದೇಶದಲ್ಲಿ ಅಧಿಕಾರ ‘ಕೈ’ ಜಾರುತ್ತಿದ್ದರೂ ಕಳೆದಿಲ್ಲ ಭರವಸೆ; ಸಿಎಂ ಕಮಲ್​ನಾಥ್​ ಪುತ್ರ ನಕುಲ್​ ಮಾತುಗಳ ಅರ್ಥ ಏನಿರಬಹುದು..?

    ಮಿಷನ್ ಮಧ್ಯಪ್ರದೇಶ ಆಯಿತು… ಬಿಜೆಪಿ ಅಜೆಂಡಾದಲ್ಲಿ ಮುಂದಿನದು ರಾಜಸ್ಥಾನ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts