More

    “17 ತಿಂಗಳ ಲೆಕ್ಕ ಕೇಳುತ್ತಿದ್ದೀರಿ, 70 ವರ್ಷಗಳ ಲೆಕ್ಕ ತಂದಿದ್ದೀರಾ ?!”

    ನವದೆಹಲಿ: ಕೇಂದ್ರ ಸರ್ಕಾರ ಪ್ರಸ್ತಾವನೆ ಮಾಡಿರುವ ಜಮ್ಮು ಅಂಡ್ ಕಾಶ್ಮೀರ್ ರೀಆರ್ಗನೈಜೇಷನ್ (ಅಮೆಂಡ್​ಮೆಂಟ್) ಬಿಲ್​ನಲ್ಲಿ ಅದಕ್ಕೆ ರಾಜ್ಯದ ಸ್ಥಾನ ನೀಡಲಾಗುವುದಿಲ್ಲ ಎಂದು ಎಲ್ಲೂ ಬರೆದಿಲ್ಲ. ಜಮ್ಮು-ಕಾಶ್ಮೀರಕ್ಕೆ ಸೂಕ್ತ ಸಮಯದಲ್ಲಿ ರಾಜ್ಯದ ಸ್ಥಾನ ಮತ್ತೆ ಸಿಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದ್ದಾರೆ.

    ಲೋಕಸಭೆಯಲ್ಲಿ ಶನಿವಾರ ಮಾತನಾಡುತ್ತಿದ್ದ ಗೃಹ ಸಚಿವ ಅಮಿತ್ ಷಾ, ಹಲವು ಸಂಸದರು ಸರ್ಕಾರ ಈ ಬಿಲ್ ಅನ್ನು ತರುತ್ತಿರುವುದರ ಅರ್ಥ ಜಮ್ಮುಕಾಶ್ಮೀರಕ್ಕೆ ರಾಜ್ಯದ ಪಟ್ಟ ಸಿಗುವುದಿಲ್ಲ ಅಂತ ಎಂದು ಹೇಳುತ್ತಿದ್ದಾರೆ. ಈ ಬಿಲ್​ನ ಉದ್ದೇಶಗಳನ್ನು ನಾನು ಸ್ಪಷ್ಟಪಡಿಸಿದ್ದೇನೆ. ಇದರಲ್ಲಿ ಎಲ್ಲೂ ಹಾಗೆ ಬರೆದಿಲ್ಲ. ಎಲ್ಲಿಂದ ಈ ರೀತಿ ಅಭಿಪ್ರಾಯಕ್ಕೆ ಬಂದಿದ್ದೀರಿ ಎಂದು ಪ್ರಶ್ನಿಸಿದರು.

    ಇದನ್ನೂ ಓದಿ: ರೈತರ ವಿಷಯದಲ್ಲಿ ಮೋದಿ ವಿರುದ್ಧ ಹೇಳಿಕೆ ನೀಡಿದ್ದ ಕೆನಡಾ ಪ್ರಧಾನಿ ಮಾಡಿಕೊಂಡರೊಂದು ಕಳಕಳಿಯ ಮನವಿ…

    ಕಾಂಗ್ರೆಸ್​ ಮೇಲೆ ತಿರುಗಿಬಿದ್ದ ಷಾ, ಹಾಲಿ ಸರ್ಕಾರವನ್ನು ಜಮ್ಮು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನವನ್ನು ರದ್ದುಗೊಳಿಸಿದಾಗಿನಿಂದ ಏನು ಮಾಡಿದ್ದೀರಾ ಎಂದು ಕೇಳಲಾಗುತ್ತಿದೆ; ಆದರೆ ಹಿಂದಿನ ಸರ್ಕಾರ 70 ವರ್ಷಗಳ ಕಾಲ ಏನು ಮಾಡಿತ್ತು ಎಂಬುದಕ್ಕೆ ಲೆಕ್ಕ ಕೊಟ್ಟಿದೆಯಾ ಎಂದು ಕೇಳಿದರು. “ಆರ್ಟಿಕಲ್ 370 ಅನ್ನು ರದ್ದುಪಡಿಸಿ 17 ತಿಂಗಳು ಮಾತ್ರ ಕಳೆದಿವೆ. ಅದಕ್ಕೆ ಲೆಕ್ಕ ಕೇಳುತ್ತಿದ್ದೀರಿ. ನೀವು 70 ವರ್ಷಗಳು ಏನು ಮಾಡಿದ್ದೀರಿ ಎನ್ನುವುದಕ್ಕೆ ಲೆಕ್ಕ ತಂದಿದ್ದೀರಾ? ನೀವು ಸರಿಯಾಗಿ ಕೆಲಸ ಮಾಡಿದ್ದರೆ, ನಮ್ಮನ್ನು ಕೇಳುವ ಅಗತ್ಯವೇ ಬರುತ್ತಿರಲಿಲ್ಲ” ಎಂದು ಷಾ ಟೀಕಿಸಿದರು.

    “ನನಗೇನೂ ಅಭ್ಯಂತರವಿಲ್ಲ, ನಾನು ಎಲ್ಲದಕ್ಕೂ ವಿವರಣೆ ಕೊಡುತ್ತೇನೆ. ಆದರೆ ತಲೆತಲಾಂತರದಿಂದ ಆಳಲು ಅವಕಾಶ ನೀಡಲಾಗಿದ್ದವರು ಈ ರೀತಿ ವಿವರಣೆ ಕೇಳಲು ಯೋಗ್ಯತೆ ಹೊಂದಿದ್ದಾರಾ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು“ ಎಂದು ಷಾ ವ್ಯಂಗ್ಯವಾಡಿದರು.

    ಇದನ್ನೂ ಓದಿ: ಪಕ್ಷ ಬಲವರ್ಧನೆಗೆ ಕಾರ್ಯಕರ್ತರು ಶ್ರಮಿಸಿ

    2019ರ ಆಗಸ್ಟ್ 5 ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ ಆರ್ಟಿಕಲ್ 370 ರ ಅಡಿ ಇದ್ದ ವಿಶೇಷ ಸ್ಥಾನವನ್ನು ರದ್ದುಗೊಳಿಸಿ, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಕೇಂದ್ರ ಸರ್ಕಾರ ವಿಂಗಡಿಸಿತ್ತು. ಬಿಜೆಪಿ ಸರ್ಕಾರದ ಈ ಕ್ರಮವು ವಿರೋಧ ಪಕ್ಷಗಳ ಮತ್ತು ಹಲವು ಚಳುವಳಿಕಾರರ ಟೀಕೆಗೆ ಕಾರಣವಾಗಿತ್ತು.(ಏಜೆನ್ಸೀಸ್)

    ರೇಪ್ ಮಾಡಿದ ಎಂದಳು, ಆದರೆ ಕೈಯಲ್ಲಿ ಅವನ ಹೆಸರ ಟಾಟೂ ಇತ್ತು !

    “ಎಲ್ಲೆಂದರಲ್ಲಿ ಯಾವಾಗ ಬೇಕಿದ್ದರೂ ಪ್ರತಿಭಟನೆ ಮಾಡಲು ಸಾಧ್ಯವಿಲ್ಲ” : ಸುಪ್ರೀಂ ಕೋರ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts