More

    ರೈತರ ವಿಷಯದಲ್ಲಿ ಮೋದಿ ವಿರುದ್ಧ ಹೇಳಿಕೆ ನೀಡಿದ್ದ ಕೆನಡಾ ಪ್ರಧಾನಿ ಮಾಡಿಕೊಂಡರೊಂದು ಕಳಕಳಿಯ ಮನವಿ…

    ನವದೆಹಲಿ: ರೈತರ ದಾರಿ ತಪ್ಪಿಸಲು ಹಲವಾರು ಷಡ್ಯಂತ್ರಗಳು ನಡೆಯುತ್ತಿರುವುದಕ್ಕೆ ಇತ್ತ ಪ್ರಧಾನಿ ನರೇಂದ್ರ ಮೋದಿಯವರು ಬೇಸರ ವ್ಯಕ್ತಪಡಿಸಿ, ಮಾತುಕತೆಗೆ ಮುಂದಾಗಿರುವ ಮಧ್ಯೆಯೇ, ತಲೆಬುಡ ಗೊತ್ತಿಲ್ಲದೇ ಭಾರತದ ನಡುವೆ ಮೂಗು ತೂರಿಸಿ ರೈತರು ಮಾಡುತ್ತಿದ್ದುದೇ ಸರಿ ಎಂದು ಹೇಳಿಕೆ ನೀಡಿ ಹಲವಾರು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ, ಇದೀಗ ಮೋದಿಯವರ ಬಳಿ ಮನವಿಯೊಂದನ್ನು ಇಟ್ಟಿದ್ದಾರೆ.

    ನಮ್ಮ ದೇಶಕ್ಕೂ ಲಸಿಕೆ ಬೇಕಿದೆ. ಲಸಿಕೆ ನೀಡಿ ಜೀವ ಉಳಿಸಿ ಎಂದು ಟ್ರುಡೋ ಅವರು ಭಾರತಕ್ಕೆ ಮನವಿ ಮಾಡಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ ಕೋವಿಡ್‌ ಲಸಿಕೆ ನೀಡಬೇಕೆಂದು ಕೋರಿಕೊಂಡಿದ್ದಾರೆ.

    ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಅಷ್ಟೇ ನಗುಮೊಗದಿಂದ ಉತ್ತರಿಸಿದ್ದು, ನೀವು ಭಾರತದ ಲಸಿಕೆಯ ಮೇಲೆ ವಿಶ್ವಾಸವಿಟ್ಟು, ಅದನ್ನು ಕೇಳುತ್ತಿರುವುದಕ್ಕೆ ಧನ್ಯವಾದ ಎಂದಿದ್ದಾರೆ. ಜತೆಗೆ ನನ್ನ ಸ್ನೇಹಿತ ಜಸ್ಟಿನ್ ಟ್ರುಡೊ ಅವರಿಂದ ಕರೆ ಸ್ವೀಕರಿಸಲು ಸಂತೋಷವಾಗಿದೆ. ಕೆನಡಾ ಕೇಳಿದಷ್ಟು ಕೋವಿಡ್ ಲಸಿಕೆಗಳನ್ನು ಪೂರೈಸಲು ಭಾರತ ಪ್ರಯತ್ನ ಮಾಡಲಿದೆ ಎಂದು ಭರವಸೆ ನೀಡಿದ್ದೇನೆ. ಹವಾಮಾನ ಬದಲಾವಣೆ ಮತ್ತು ಜಾಗತಿಕ ಆರ್ಥಿಕ ಚೇತರಿಕೆಯಂತಹ ಇತರ ಪ್ರಮುಖ ವಿಷಯಗಳ ಬಗ್ಗೆ ಸಹಯೋಗವನ್ನು ಮುಂದುವರಿಸಲು ನಾವು ಒಪ್ಪಿದ್ದೇವೆ ಎಂದು ಟ್ವೀಟ್‌ ಮಾಡಿದ್ದಾರೆ.

    ಫೈಝರ್‌ ಸೇರಿದಂತೆ ಹಲವು ಲಸಿಕೆ ತಯಾರಿಕಾ ಕಂಪೆನಿಗಳ ಜತೆ ಮಾತುಕತೆ ನಡೆಸಿತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಲಸಿಕೆ ಕೆನಡಾಕ್ಕೆ ಇನ್ನೂ ಸಿಕ್ಕಿಲ್ಲ. ಆದರೆ ಪ್ರಧಾನಿ ಜಸ್ಟಿನ್​ ಭಾರತವನ್ನು ಸಂಪರ್ಕ ಮಾಡಿರಲಿಲ್ಲ. ಕೆನಡಾದ ವಿರೋಧ ಪಕ್ಷದ ಸದಸ್ಯೆ ಮಿಚೆಲ್ ರೆಂಪೆಲ್ ಗಾರ್ನರ್ ಅವರು ಕೋವಿಡ್‌ ಲಸಿಕೆ ನೀಡುವಂತೆ ಭಾರತದ ಪ್ರಧಾನಿಗೆ ಮನವಿ ಸಲ್ಲಿಸಲಾಗಿದೆಯೇ ಎಂದು ಪ್ರಶ್ನಿಸಿದ್ದರು. ಈ ಬಗ್ಗೆ ಸರ್ಕಾರ ಯಾವುದೇ ಉತ್ತರ ನೀಡಿರಲಿಲ್ಲ. ಇದರಿಂದಾಗಿ ಪ್ರಧಾನಿ ಜಸ್ಟಿನ್​ ಭಾರಿ ವಿರೋಧ ಎದುರಿಸಬೇಕಾಗಿ ಬಂದಿತ್ತು.

    ಕಳೆದ ಡಿಸೆಂಬರ್​ನಲ್ಲಷ್ಟೇ ರೈತರ ಪ್ರತಿಭಟನೆಯಲ್ಲಿ ಮೂಗು ತೂರಿಸಿದ್ದ ಜಸ್ಟಿನ್​, ಕೆನಡಾ ರೈತರ ಪರವಾಗಿ ಇದೆ ಎಂದು ಹೇಳಿಕೆ ನೀಡಿದ್ದರು. ಭಾರತದಲ್ಲಿ ಆಗುತ್ತಿರುವ ವಿದ್ಯಮಾನಗಳ ಅರಿವು ಇಲ್ಲದೇ ತಮ್ಮ ಬೆಂಬಲ ಸೂಚಿಸಿದ್ದರು. ಇದರಿಂದ ಅವರು ಭಾರಿ ಟೀಕೆಗೆ ಗುರಿಯಾಗಿದ್ದರು. ಆದ್ದರಿಂದ ಭಾರತಕ್ಕೆ ಮನವಿ ಮಾಡಿಕೊಳ್ಳುವ ಸ್ಥಿತಿ ಅವರದ್ದಾಗಿರಲಿಲ್ಲ. ಅಷ್ಟೇ ಅಲ್ಲದೇ, ಈ ಬೆಳವಣಿಗೆಯಿಂದ ಭಾರತ ಮತ್ತು ಕೆನಡಾದ ಸಂಬಂಧಗಳು ಹಾಳಾಗಬಹುದು ಎಂಬ ವಿಶ್ಲೇಷಣೆ ಕೇಳಿ ಬಂದಿದ್ದವು.

    ಆದರೆ ಕೆನಡಾ ಪ್ರತಿಪಕ್ಷಗಳ ಟೀಕೆಯಿಂದ ನೊಂದು ಬೆಂದು ಹೋಗಿ ಕೊನೆಗೂ ಅವರು ಪ್ರಧಾನಿ ಮೋದಿಯವರಿಗೆ ಲಸಿಕೆಗಾಗಿ ಮನವಿ ಸಲ್ಲಿಸಿದ್ದಾರೆ. ಅದಕ್ಕೆ ಮೋದಿಯವರು ಯಾವುದೇ ಕೊಂಕು ಮಾತನಾಡದೇ ಅವರ ಮನವಿಯನ್ನು ಪುರಸ್ಕರಿಸಿದ್ದಾರೆ.

    ಮುದ್ದು ಕಂದನ ಜೀವ ಉಳಿಸಲು ₹6 ಕೋಟಿ ಜಿಎಸ್​ಟಿ ಮನ್ನಾ ಮಾಡಿದ ಪ್ರಧಾನಿ ಮೋದಿ

    ಕಾರಿನ ಹ್ಯಾಂಡ್​ಬ್ರೇಕ್​ ಹಾಕದೇ ಮೂತ್ರವಿಸರ್ಜನೆಗೆ ಹೋದ ಚಾಲಕ- ನಾಲ್ವರ ದುರ್ಮರಣ

    ಮೆಟ್ರೋ ರೈಲಿನಲ್ಲಿ ರವಾನೆಯಾಯ್ತು ಜೀವಂತ ಹೃದಯ- ಇದನ್ನು ಸಾಗಿಸಿದ್ದೇ ರೋಚಕ

    ರೈತರ ಹೆಸರಿನಲ್ಲಿ ಗಣರಾಜ್ಯೋತ್ಸವದಂದು ಹಿಂಸಾಚಾರ: ಸಿಕ್ಕಿಬಿದ್ದ ಸಿಂಗ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts