More

    ಹಿಂದು ದೇಗುಲದಲ್ಲಿ ಏಸುಕ್ರಿಸ್ತನ ಫೋಟೋ ಇಟ್ಟು ಅರ್ಚಕನಿಂದ ಪೂಜೆ!

    ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಹಿಂದು ದೇವಾಲಯದಲ್ಲಿ ಏಸುಕ್ರಿಸ್ತನ ಫೋಟೋ ಇಟ್ಟು ಪೂಜೆ ಮಾಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅರ್ಚಕರ ವಿರುದ್ಧ ಭಕ್ತರು ಆಕ್ರೋಶ ಹೊರಹಾಕಿದ್ದಾರೆ.

    ಇಲ್ಲಿನ ವಿರಾಂಜನೇಯ ದೇವಸ್ಥಾನದಲ್ಲಿ ಆ.5ರಂದು ಜ್ಯೋತಿಷಿ ರಾಘವನ್ ಗುರೂಜಿ ಅವರಿಂದ ಮಹಾ ಎಡವಟ್ಟು ಸಂಭವಿಸಿದೆ. ಅಂದು ವೀರಾಂಜನೇಯ‌ ದೇವಾಯಕ್ಕೆ ಜಿಲ್ಲಾ ಎಸ್ಪಿ ದಿವ್ಯಾ ಸಾರಾ ಥಾಮಸ್ ಭೇಟಿ ನೀಡಿದ್ದ ಸಂದರ್ಭದಲ್ಲಿ ಆಂಜನೇಯ ಸ್ವಾಮಿ ಪಾದದ ಬಳಿ ಏಸುಕ್ರಿಸ್ತನ ಫೋಟೋ ಇಟ್ಟು ರಾಘವನ್ ಗುರೂಜಿ ಪೂಜೆ ಮಾಡಿಕೊಟ್ಟಿದ್ದರು. ದೇವಾಲಯದಲ್ಲಿ ಏಸುಕ್ರಿಸ್ತನ ಫೋಟೋ ಇಟ್ಟಿದ್ದಕ್ಕೆ ಆಂಜನೇಯನ ಭಕ್ತರು ಗರಂ ಆಗಿದ್ದಾರೆ.

    ಇದನ್ನೂ ಓದಿರಿ ಜುಟ್ಟನಹಳ್ಳಿ ಮಾರಮ್ಮನ ಹುಂಡಿ ಹಣ ಕದ್ದ ಪೂಜಾರಿಯನ್ನು ಅಟ್ಟಾಡಿಸಿದ ಬಸವ, ದೇವರ ಹಣ ವಾಪಸ್​!

    ಎಡವಟ್ಟಿನ ಬಗ್ಗೆ ಕ್ಷಮಾಪಣೆ ಕೋರಿರುವ ರಾಘವನ್ ಗುರೂಜೀ, ಆಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮ ಇದ್ದ ಆ.5ರಂದು ಆರ್​ಎಸ್​ಎಸ್, ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ವತಿಯಿಂದ ದೇವಾಸ್ಥಾನದಲ್ಲಿ ಪೂಜೆ ಇಟ್ಟುಕೊಳ್ಳಲಾಗಿತ್ತು. ಅದೇ ದಿನ ಎಸ್ಪಿ ಕೂಡ ಇಲ್ಲಿಗೆ ಬಂದಿದ್ದರು. ಆ ವೇಳೆ ಏಸುವಿನ‌ ಫೋಟೋ‌ ಇಟ್ಟು ಪೂಜೆ ಮಾಡಿ ಕೊಟ್ಟಿದ್ದೇನೆ. ಇದರಲ್ಲಿ ಯಾವುದೇ ಕೆಟ್ಟ‌ ಉದ್ದೇಶವಿಲ್ಲ. ಹಿಂದು ಸಂಪ್ರದಾಯವನ್ನು ಅವಹೇಳನ ಮಾಡುವ ಉದ್ದೇಶವಿಲ್ಲ. ಇದರಿಂದ ಯಾರಿಗಾದರೂ ಬೇಜಾರು ಆಗಿದ್ದರೆ ದಯವಿಟ್ಟು ಕ್ಷಮಿಸಬೇಕು ಎಂದು ಮನವಿ ಮಾಡಿದ್ದಾರೆ.

    ಏಸುಕ್ರಿಸ್ತನ ಫೋಟೋ ಇಟ್ಟು ಅರ್ಚಕನಿಂದ ಪೂಜೆ | Yesu Krista Photos in Anjaneya Temple#YesuKristaPhotos #AnjaneyaTemple #Kollegal

    Posted by Dighvijay News – ದಿಗ್ವಿಜಯ ನ್ಯೂಸ್ on Monday, August 10, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts