More

    ಮಲ್ಲಾಪುರ ಆಂಜನೇಯ ರಥೋತ್ಸವ ಅದ್ದೂರಿ

    ಅರಕೇರಾ: ಮಲ್ಲಾಪುರದಲ್ಲಿ ಶ್ರೀ ಆಂಜನೇಯ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು.

    ಇದನ್ನೂ ಓದಿ: ಸುತ್ತೂರು ಶ್ರೀಗಳಿಂದ ಗವಿಸಿದ್ಧೇಶ್ವರ ರಥೋತ್ಸವಕ್ಕೆ ಚಾಲನೆ

    ಭಾನುವಾರ ಭಕ್ತರು ಜ್ಯೋತಿ ಹೊರುವ ಮೂಲಕ ಭಕ್ತಿ ಮೆರೆದರು. ಅಂದು ಸಂಜೆ ಊಟಿ ಬಸವೇಶ್ವರ ಸನ್ನಿಧಿಯ ಗಂಗಾಸ್ಥಳಕ್ಕೆ ತೆರಳಿ ಉದಕ ತಂದು ರಥ ಅಲಂಕರಿಸಲಾಯಿತು. ರಾತ್ರಿ ಆಂಜನೇಯ ರಥೋತ್ಸವ ಪಾದದಕಟ್ಟೆಯವರೆಗೆ ವಿಜೃಂಭಣೆಯಿಂದ ನೇರವೇರಿತು.

    ಭಕ್ತಿ ಮೆರೆದ ಭಕ್ತರು

    ಸೋಮವಾರ ಹಾಲಗಂಬ ಉತ್ಸವ ಏರ್ಪಡಿಸಲಾಗಿತ್ತು. 75 ಅಡಿ ಎತ್ತರದ ಹಾಲುಗಂಬಕ್ಕೆ ಜಾಜು ಲೇಪನ ಮಾಡಿ ಕಂಬದ ಮೇಲೆ ಪೂಜಾರಿ ಕುಳಿತು ಸ್ಪರ್ಧಿಗಳಿಗೆ ಮೇಲಿನಿಂದ ನೀರು, ಮಜ್ಜಿಗೆ ಬಿಟ್ಟರು. ಸ್ಪರ್ಧಿಗಳು ಕಂಬ ಏರಲು ಪೈಪೋಟಿ ತೋರಿಸಿದ್ದು, ಜನರಿಗೆ ಮನರಂಜನೆ ಒದಗಿಸಿತು. ಶಿವರಾಜ ಗಾಲಿ ಪ್ರಥಮವಾಗಿ ಕಂಬ ಏರುವ ಮೂಲಕ ಜಯ ಸಾಧಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts