More

    ಲೈಂಗಿಕ ಕಿರುಕುಳ ಆರೋಪ; ಉಪಕಾರ ಮಾಡಿದರೆ ನನ್ನ ಮೇಲೆಯೇ ಆರೋಪ ಮಾಡಿದ್ದಾರೆ ಎಂದ ಬಿಎಸ್​ವೈ

    ಬೆಂಗಳೂರು: ಅಪ್ರಾಪ್ತ ವಯಸ್ಕ ಬಾಲಕಿ ಮೇಲೆ ಲೈಂಗಿಕ ದೌರ್ಜನ ಎಸಗಿದ ಆರೋಪದ ಮೇಲೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಹಿರಿಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಉಪಕಾರ ಮಾಡಿದರೆ ಈಗ ನನ್ನ ಮೇಲೆಯೇ ಹೀಗೆ ಆರೋಪ ಮಾಡಿದ್ದಾರೆ ಎಂದು ಬೇಸರಿಸಿದ್ದಾರೆ.

    ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಕೆಲ ದಿನಗಳ ಹಿಂದೆ ನಮ್ಮ ಮನೆಗೆ ಸಹಾಯ ಕೇಳಿಕೊಂಡು ಓರ್ವ ಮಹಿಳೆ ಬಂದಿದ್ದಳು. ಏನೋ ಸಮಸ್ಯೆಯಿದೆ ಎಂದು ಆಕೆ ಅಳುತ್ತಿದ್ದಳು, ಆಗ ಆಕೆಯ ಸಮಸ್ಯೆಯನ್ನು ಆಲಿಸಿ, ಪೊಲೀಸ್‌ ಆಯುಕ್ತರಿಗೆ ಖುದ್ದು ಕರೆ ಮಾಡಿ ಸಮಸ್ಯೆಯನ್ನು ತಿಳಿಸಿ, ಮಹಿಳೆಗೆ ಸಹಾಯ ಮಾಡುವಂತೆ ಸೂಚಿಸಿದ್ದೆ

    ಇದನ್ನೂ ಓದಿ: WPL2024; ಸುದೀರ್ಘ ಕಾಯುವಿಕೆಗೆ ಅಂತ್ಯ ಹಾಡಲಿದ್ದಾರಾ ಆರ್​ಸಿಬಿ ವನಿತೆಯರು?

    ಆದರೆ, ಬಳಿಕ ಮಹಿಳೆ ನನ್ನ ವಿರುದ್ಧವೇ ಮಾತನಾಡಲು ಶುರು ಮಾಡಿದಳು. ಈ ವಿಷಯದ ಬಗ್ಗೆಯೂ ಪೊಲೀಸ್‌ ಆಯುಕ್ತರಿಗೆ ತಿಳಿಸಿದ್ದೆ. ಆದರೆ, ಗುರುವಾರ ಪೊಲೀಸರು ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನೋಡೋಣ ಮುಂದೆನಾಗುತ್ತೆ ಅಂತಾ. ಇದರ ಹಿಂದೆ ರಾಜಕೀಯ ಉದ್ದೇಶ ಇದೆ ಎಂದು ನಾನು ಈಗಲೇ ಹೇಳುವುದಿಲ್ಲ. ಕಾನೂನು ರೀತಿ ಇದನ್ನು ಎದುರಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಹೇಳಿದರು.

    ಪ್ರಕರಣದ ಹಿನ್ನೆಲೆ?

    ಅಪ್ರಾಪ್ತೆಯ ಮೇಲೆ ಈ ಹಿಂದೆ ಆಗಿದ್ದ ಅತ್ಯಾಚಾರದ ಬಗ್ಗೆ ಸಹಾಯಯಾಚಿಸಲು ತೆರಳಿದ್ದಾಗ ಘಟನೆ ನಡೆದಿದೆ. 9 ನಿಮಿಷಗಳ ಕಾಲ ಮೊದಲು ಮಾತನಾಡಿದ್ದ ಮಾಜಿ ಸಿಎಂ ಯಡಿಯೂರಪ್ಪ. ಅನಂತರ ಅಪ್ರಾಪ್ತೆಯನ್ನು ರೂಂ ಒಳಗೆ ಕರೆದು ಹೋಗಿ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ. ಅಪ್ರಾಪ್ತೆಯ ಖಾಸಗಿ ಭಾಗ ಮುಟ್ಟಿರುವ ಬಗ್ಗೆ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ರೂಂನಿಂದ ಹೊರ ಬಂದು ಯಡಿಯೂರಪ್ಪ ಅವರು ಕ್ಷಮೆಯಾಚಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಈ ವಿಚಾರವನ್ನ ಯಾರಿಗೂ ಹೇಳಬಾರದೆಂದು ಹೆದರಿಸಿ ನಮ್ಮನ್ನ ತಡೆದಿದ್ದಾರೆಂದು ದೂರಿನಲ್ಲಿ ಆರೋಪಿಸಲಾಗಿದೆ.

    ಇನ್ನು ದೂರುದಾರ ಮಹಿಳೆ ಕಳೆದ 2015 ರಿಂದಲೂ ಈವರೆಗೂ 53 ಕೇಸ್ ದಾಖಲಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ದವು ದೂರು ನೀಡಿದ್ದಾರೆ. ರಾಜಕಾರಣಿಗಳ ವಿರುದ್ದ ಕೂಡ ಈ ಹಿಂದೆ ಮಹಿಳೆ ದೂರು ನೀಡಿದ್ದಾರೆ. ಗಂಡನ ಹಾಗು ಮಗನ ವಿರುದ್ದ , ರೌಡಿಶೀಟರ್ ಗಳ ಮೇಲೆ ದೂರು ದಾಖಲಿಸಿದ್ದಾರೆ. 2015 ರಲ್ಲಿ ಮಗಳ ವಿರುದ್ದ ಲೈಂಗಿಕ ದೌರ್ಜನ್ಯ ಎಸಗಿರುವ ಕುರಿತು ಗಂಡನ ಸಂಬಂಧಿಯೊಬ್ಬನ ವಿರುದ್ದ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts