More

    ಸೋನುಗೆ ಕಿರುಚಿತ್ರದ ಮೂಲಕ ಥ್ಯಾಂಕ್ಸ್​ ಹೇಳಿದ ತಂಡ …

    ಒಂದೆರೆಡು ತಿಂಗಳ ಹಿಂದೆ ಆಂಧ್ರದಲ್ಲಿ ನಡೆದ ಘಟನೆಯೊಂದು ನೆನಪಿರಬಹುದು. ನಾಗೇಶ್​ ಎಂಬ ಟೀಸ್ಟಾಲ್​ ವ್ಯಾಪಾರಿಯು, ಕರೊನಾ ಮತ್ತು ಲಾಕ್​ಡೌನ್​ನಿಂದ ಅಂಗಡಿ ಮುಚ್ಚಬೇಕಾಯಿತು. ಮತ್ತೆ ಕೃಷಿಗೆ ಮರಳಿದ ಅವರ ಬಳಿ ಎತ್ತುಗಳಿರಲಿಲ್ಲ. ಈ ಸಂದರ್ಭದಲ್ಲಿ ಅವರ ಮಕ್ಕಳೇ ನೊಗ ಹೊತ್ತಿದ್ದರು. ಈ ವಿಡಿಯೋ ವೈರಲ್​ ಆಗಿ ನಟ ಸೋನು ಸೂದ್​, ನಾಗೇಶ್​ ಕುಟುಂಬಕ್ಕೆ ಒಂದು ಟ್ರಾಕ್ಟರ್​ ಗಿಫ್ಟ್​ ಆಗಿ ಕೊಟ್ಟಿದ್ದರು.

    ಈಗ ಈ ಕಥೆ, ಒಂದು ಕಿರುಚಿತ್ರವಾಗಿದೆ. ಲಾಕ್​ಡೌನ್​ ಸಮಯದಲ್ಲಿ ಸತತವಾಗಿ ಕಿರುಚಿತ್ರಗಳನ್ನು ಮಾಡುತ್ತಲೇ ಬಂದಿರುವ ನಟ-ನಿರ್ದೇಶಕ ಯತಿರಾಜ್​, ಈಗ ಈ ಘಟನೆಯನ್ನಿಟ್ಟುಕೊಂಡು ‘ದೇವದೂತ’ ಎಂಬ ಕಿರುಚಿತ್ರ ಮಾಡಿದ್ದಾರೆ. ಕರೊನಾ ಸಂಕಷ್ಟದಲ್ಲಿ ಸೋನು ಹೇಗೆ ದೇವದೂತನಾಗಿ ಬಂದು ಹಲವರಿಗೆ ಸಹಾಯ ಮಾಡಿದರು ಎಂಬುದನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ.

    ಇದನ್ನೂ ಓದಿ: ‘ನಶೆ’ಯ ನಗ್ನ ಸತ್ಯ; ವಕೀಲರ ಮೊರೆ ಹೋದ ನಟಿ ಸಂಜನಾ ಗಲ್ರಾನಿ

    ಸೋನುಗೆ ಕಿರುಚಿತ್ರದ ಮೂಲಕ ಥ್ಯಾಂಕ್ಸ್​ ಹೇಳಿದ ತಂಡ ...

    ಈ ಹಿಂದೆ ಅವರ ‘ಕರೊನಾ ಕಾಣಿಕೆ’ ಎಂಬ ಕಿರುಚಿತ್ರವು, ಕರೊನಾ ಬಿಚ್ಚಿಟ್ಟಿರುವ ಕರಾಳ ಮುಖವನ್ನು ತೋರಿಸಿತ್ತು. ಈಗ ಏಳು ನಿಮಿಷದ ಈ ಕಿರುಚಿತ್ರದ ಮೂಲಕ ಕರೊನಾ ಸಂದರ್ಭದಲ್ಲಿ ಸಾವಿರಾರು ಜನರಿಗೆ ಸಹಾಯಹಸ್ತ ಚಾಚಿರುವ ನಟ ಸೋನು ಸೂದ್​ ಅವರಿಗೆ ಥ್ಯಾಂಕ್ಸ್​ ಹೇಳಿದ್ದಾರೆ.

    ಈ ಕುರಿತು ಮಾತನಾಡಿರುವ ಯತಿರಾಜ್​, ‘ಲಾಕ್​ಡೌನ್​ ಸಂದರ್ಭದಲ್ಲಿ ಸೋನು ಸೂದ್​ ಅಷ್ಟೆಲ್ಲಾ ಮಾಡಿದರು. ನಾನು ಅವರಿಗೆ ಈ ಕಿರುಚಿತ್ರ ಮೂಲಕ ಥ್ಯಾಂಕ್ಸ್​ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ. ಸೋನು ಮಾಡಿದ ಕೆಲಸಕ್ಕೆ ಚಿತ್ರರಂಗಿಂದ ಯಾರೂ ಕೃತಜ್ಱತೆ ಸಲ್ಲಿಸಿರಲಿಲ್ಲ. ಕನ್ನಡದಲ್ಲಿ ನಾನು ಇಂಥದ್ದೊಂದು ಪ್ರಯತ್ನ ಮಾಡಿದ್ದೀನಿ ಎಂಬ ಸಂತೋಷವಿದೆ’ ಎನ್ನುತ್ತಾರೆ ಅವರು.

    ಇದನ್ನೂ ಓದಿ: ಗಾಂಜಾ ಇಲ್ಲದಿದ್ರೆ ನಿದ್ರೆ ಬರುತ್ತಿರಲಿಲ್ಲವಾ ರಾಗಿಣಿಗೆ?

    ಈ ಚಿತ್ರದ ಮೂಲಕ ಎಲ್ಲರೂ ತಮ್ಮ ಕೈಲಾದಷ್ಟು ಸಹಾಯ ಮಾಡಿದರೆ ಚೆನ್ನಾಗಿರುತ್ತದೆ ಎಂಬ ಸಂದೇಶವನ್ನು ಹೇಳುವ ಪ್ರಯತ್ನ ಮಾಡಿರುವ ಯತಿರಾಜ್​, ಸಾವನದುರ್ಗ ಸುತ್ತಮುತ್ತ ಈ ಕಿರುಚಿತ್ರದ ಚಿತ್ರೀಕರಣ ಮಾಡಿದ್ದಾರೆ. ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುವುದರ ಜತೆಗೆ, ಪ್ರಮುಖ ಪಾತ್ರವನ್ನೂ ಮಾಡಿದ್ದಾರೆ. ಇದಲ್ಲದೆ ಚಂದನ, ಯಶಿತಾ, ನಮಿತಾ, ಭಗತ್​ ಸಿಂಗ್​, ಚಂದ್ರಶೇಖರ್​ ಮುಂತಾದವರು ನಟಿಸಿದ್ದಾರೆ.

    ಕನ್ನಡ ಮತ್ತು ಹಿಂದಿಯಲ್ಲಿರುವ ಈ ಕಿರುಚಿತ್ರವು, ಶುಕ್ರವಾರ ಸಂಜೆ ಬಿಡುಗಡೆಯಾಗಿದ್ದು, ಯೂಟ್ಯೂಬ್​ನ ಕಲಾವಿಧ ಚಾನಲ್​ನಲ್ಲಿದೆ.

    ‘ರಾಬರ್ಟ್​’ ನಾಯಕಿ ಹುಟ್ಟುಹಬ್ಬಕ್ಕೆ ಚಿತ್ರತಂಡದ ಗಿಫ್ಟ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts