More

    ಯಶ್​-ರಾಧಿಕಾ ಮಗನ ಹೆಸರು ಕೊನೆಗೂ ಬಹಿರಂಗ …

    ಯಶ್​ ಮತ್ತು ರಾಧಿಕಾ ಪಂಡಿತ್​ ಅವರ ಮುದ್ದಿನ ಮಗನ ಹೆಸರು ಏನಿರಬಹುದು ಎಂದು ಅವರಿಬ್ಬರ ಅಭಿಮಾನಿಗಳು ಹಲವು ದಿನಗಳಿಂದ ತಲೆ ಕೆಡಿಸಿಕೊಂಡಿದ್ದರು. ಮಗಳಿಗೆ ಆಯ್ರಾ ಎಂದು ಹೆಸರಿಟ್ಟಿದ್ದ ಯಶ್​ ಮತ್ತು ರಾಧಿಕಾ ಪಂಡಿತ್​, ಮಗನಿಗೆ ಏನು ಹೆಸರಿಡಬಹುದು ಎಂಬ ಕುತೂಹಲ ಎಲ್ಲರಿಗೂ ಇತ್ತು.

    ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮ ಬೇಡ; ಅಭಿಮಾನಿಗಳಿಗೆ ಸುದೀಪ್​ ಮನವಿ

    ಆ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ಇತ್ತೀಚೆಗೆ ಯಶ್​ ಅವರ ಫಾರ್ಮ್​ ಹೌಸ್​ನಲ್ಲಿ ನಾಮಕರಣ ಸಮಾರಂಭವನ್ನು ಆಯೋಜಿಸಲಾಗಿದ್ದು, ಈ ಸಂದರ್ಭದಲ್ಲಿ ಯಥರ್ವ್​ ಎಂಬ ಹೆಸರನ್ನು ಇಡಲಾಗಿದೆ.

    ಯಶ್​ ಮಗನ ನಾಮಕರಣ ಆಯ್ತು … ಹೆಸರು ಏನು ಹೇಳಿ ನೋಡೋಣ?

    ಯಶ್​ ಮತ್ತು ರಾಧಿಕಾ ಪಂಡಿತ್​, ತಮ್ಮ ಮಗನಿಗೆ ಸದ್ಯದಲ್ಲೇ ಹೆಸರಿಡುವುದಾಗಿ ಹೇಳುತ್ತಲೇ ಇದ್ದರು. ಹೆಸರೇನಿರಬಹುದು ಗೆಸ್​ ಮಾಡಿ ಎಂದು ಸಹ ಹೇಳಿದ್ದರು. ಇದೀಗ ಕೊನೆಗೂ ಮಗುವಿನ ನಾಮಕರಣವಾಗಿದ್ದು, ಯಥರ್ವ್​ ಎಂದು ಹೆಸರಿಡಲಾಗಿದೆ. ಈ ನಾಮಕರಣ ಸಮಾರಂಭದ ವಿಡಿಯೋ ನಿಮಗಾಗಿ …ಕೃಪೆ: ರಾಧಿಕಾ ಪಂಡಿತ್​ ಇನ್​ಸ್ಟಾಗ್ರಾಂ ಖಾತೆ

    Posted by Vijayavani on Monday, August 31, 2020

    ಯಥರ್ವ್​​ ಎಂದರೆ ಸಂಪೂರ್ಣ ಎಂದರ್ಥ. ನಾಮಕರಣದ ವಿಡಿಯೋ ಶೇರ್​ ಮಾಡಿರುವ ಯಶ್​ ದಂಪತಿ, ‘ನಮ್ಮನ್ನು ಪೂರ್ಣಗೊಳಿಸಿದವನು’ ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ‘ರಾರಾಜಿಸುತ ಬದುಕು ಮಗನೇ. ಹರಸಿ ಹಾರೈಸಿ’ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಕಂಗನಾ ರಣಾವತ್​ಗೆ ಅಭಿಮಾನಿಗಳ ಕೊರತೆ

    ಕೆಲವು ದಿನಗಳ ಹಿಂದೆ, ತಮ್ಮ ಮಗನಿಗೆ ಒಂದು ಹೆಸರು ಹುಡುಕಿದ್ದೇವೆ ಎಂದು ರಾಧಿಕಾ ಸೋಷಿಯಲ್​ ಮೀಡಿಯಾ ಮೂಲಕ ಹೇಳಿಕೊಂಡಿದ್ದರು. ಅದನ್ನು ಸದ್ಯದಲ್ಲೇ ಅಧಿಕೃತವಾಗಿ ಹೇಳುವುದಾಗಿ ಹೇಳಿದ್ದರು. ಅದರಂತೆ, ಮಂಗಳವಾರ ಸೋಷಿಯಲ್​ ಮೀಡಿಯಾ ಮೂಲಕ ನಾಮಕರಣದ ವಿಡಿಯೋ ಬಿಡುಗಡೆ ಮಾಡುವ ಮೂಲಕ, ಮಗನಿಗೆ ಯಥರ್ವ್​ ಎಂಬ ಹೆಸರನ್ನು ಇಟ್ಟಿರುವುದಾಗಿ ಘೋಷಿಸಿದ್ದಾರೆ.

    ಪಂಚಾಕ್ಷರಿ ಗವಾಯಿ ಚಿತ್ರಕ್ಕೆ ರಜತ ಸಂಭ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts