More

    ಯಶಸ್ವಿನಿ ಚಿಕಿತ್ಸಾ ದರ ಹೆಚ್ಚಳ; ಒಂದು ವಾರದಲ್ಲೇ ಆಸ್ಪತ್ರೆಗಳಿಗೆ ಹಣ ಪಾವತಿ

    ಬೆಂಗಳೂರು: ಯಶಸ್ವಿನಿ ಯೋಜನೆ ಚಿಕಿತ್ಸಾ ದರವನ್ನು ಆಯುಷ್ಮಾನ್ ಭಾರತ್-ಆರ್ರೋಗ್ಯ ಕರ್ನಾಟಕ ಮಾದರಿಯಲ್ಲಿ ಪರಿಷ್ಕರಿಸಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.

    ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಯಶಸ್ವಿನಿ ಜಾರಿಯಲ್ಲಿದ್ದಾಗ ಕೆಲವು ಆಸ್ಪತ್ರೆಗಳ ಬಿಲ್ ಪೆಂಡಿಂಗ್ ಇದೆ. ವಿವಿಧ ಆಸ್ಪತ್ರೆಗಳಿಗೆ ಸುಮಾರು 25 ರಿಂದ 26 ಕೋಟಿ ರೂ. ಪಾವತಿ ಬಾಕಿ ಇದೆ. ಅದನ್ನು ಪಾವತಿಸುವ ಕುರಿತು ಇನ್ನೂ ತೀರ್ಮಾನ ಕೈಗೊಂಡಿಲ್ಲ ಎಂದರು. ಆದರೆ ಇತ್ತೀಚೆಗೆ ಒಂದು ವಾರದಲ್ಲೇ ಆಸ್ಪತ್ರೆಗಳಿಗೆ ಚಿಕಿತ್ಸಾ ವೆಚ್ಚ ಪಾವತಿ ಆಗುವ ಹಾಗೆ ಕ್ರಮ ಕೈಗೊಳ್ಳಲಾಗಿದೆ. ಎಲ್ಲ ಆಸ್ಪತ್ರೆಗಳಿಗೂ ಒಂದು ವಾರದಲ್ಲೇ ಚಿಕಿತ್ಸಾ ವೆಚ್ಚ ಪಾವತಿ ಆಗುತ್ತಿದೆ ಎಂದು ಹೇಳಿದರು.

    ಎಂಪ್ಯಾನಲ್‌ಮೆಂಟ್ ಆಗುತ್ತಿದೆ

    ಯಶಸ್ವಿನಿ ಯೋಜನೆಯಡಿ ಚಿಕಿತ್ಸಾ ದರ ಪರಿಷ್ಕರಿಸಿರುವುದರಿಂದ ಹಳೆ ಆಸ್ಪತ್ರೆಗಳು ಎಂಪ್ಯಾನಲ್ ಆಗಿ ಕಾರ್ಯನಿರ್ವಹಿಸುತ್ತಿವೆ. ಅದೇ ರೀತಿ ಹೊಸ ಆಸ್ಪತ್ರೆಗಳೂ ಎಂಪ್ಯಾನಲ್ ಆಗುತ್ತಿವೆ. ಪರಿಷ್ಕೃತ ದರವನ್ನು ಎಲ್ಲರೂ ಒಪ್ಪಿದ್ದಾರೆ. ಯಶಸ್ವಿನಿ ದರ ಬಹಳ ಕಡಿಮೆ ಇತ್ತು. ಈ ಕಡಿಮೆ ದರದಲ್ಲಿ ಚಿಕಿತ್ಸೆ ನೀಡಲು ಯಾರೂ ಮುಂದೆ ಬರುತ್ತಿರಲಿಲ್ಲ. ದರ ಪರಿಷ್ಕರಣೆ ಮಾಡಿರುವುದರಿಂದ ಆಸ್ಪತ್ರೆ ಎಂಪ್ಯಾನಲ್ಮೆಂಟ್ ಆಗುತ್ತಿವೆ. ರೈತರು ಎನ್‌ರೋಲ್ ಮೆಂಟ್ ಆಗುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ಒಂದು ವಾರದಲ್ಲೇ ಹಣ ಪಾವತಿ

    ಹೊಸ ದರ ನಿಗದಿ ಮಾಡಿರುವುದರಿಂದ ಸರ್ಕಾರಕ್ಕೆ ಹೊರೆ ಆಗುತ್ತದೆ. ಆದಾಗ್ಯೂ ನಾವು ಎಲ್ಲ ಆಸ್ಪತ್ರೆಗಳಿಗೆ ಒಂದು ವಾರದಲ್ಲಿ ಪೇಮೆಂಟ್ ಮಾಡುತ್ತಿದ್ದೇವೆ. ಹಳೆಯ ಬಾಕಿ ಹಣ ಪಾವತಿ ಬಗ್ಗೆ ತೀರ್ಮಾನ ಕೈಗೊಳ್ಳಬೇಕಿದೆ ಎಂದರು.

    ಬಡ್ಡಿ ಮನ್ನಾ ಅವಧಿ ವಿಸ್ತರಣೆ ಇಲ್ಲ

    ರೈತರ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಮಾಡುತ್ತಿದ್ದೇವೆ. ೆಬ್ರವರಿ 25 ಕೊನೆಯ ದಿನವಾಗಿದೆ. ಈ ದಿನವನ್ನು ಮತ್ತೆ ವಿಸ್ತರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಸಾಲ ಮನ್ನಾ ಇಲ್ಲ

    ಈ ಹಿಂದೆ ಸಾಲ ಮನ್ನಾ ಮಾಡಿದ 388 ರೂ. ವಿಲೇವಾರಿ ಇನ್ನೂ ಬಾಕಿ ಇದೆ. ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮತ್ತಿತರ ತಾಂತ್ರಿಕ ಕಾರಣಗಳಿಗಾಗಿ ಈ ಬಾಕಿ ಉಳಿದಿದೆ. ಸಾಲ ಮನ್ನಾ ಮಾಡುವುದಿಲ್ಲ. ಆದರೆ ನಾವು ಅಲ್ಪಾವಧಿ, ದೀರ್ಘಾವಧಿ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿದ್ದೇವೆ ಎಂದು ಹೇಳಿದರು.

    ಬಡ್ಡಿ ಮನ್ನಾದಿಂದ 200 ಕೋಟಿ ಹೊರೆ

    ಬಡ್ಡಿ ಮನ್ನಾಕ್ಕೆ 540 ಕೋಟಿ ರೂ.ಗಳ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಹಿಂದೆ ಇದೇ ರೀತಿ ಬಡ್ಡಿ ಮನ್ನಾ ಮಾಡಿದಾಗ 140 ಕೋಟಿ ರೂ. ಅಷ್ಟೆ ಹೊರೆ ಬಿದ್ದಿತ್ತು. ಎಲ್ಲ ರೈತರು ಸಾಲ ಮರುಪಾವತಿಸಿದರೆ 540 ಕೋಟಿ ರೂ. ಬೇಕಾಗುತ್ತದೆ. ಆದರೆ ಶೇ.50 ರಷ್ಟು ರೈತರು ಮಾತ್ರ ಸಾಲ ಮರುಪಾವತಿಸುವ ಸಾಧ್ಯತೆ ಇದೆ. ಹಾಗಾಗಿ ಸರ್ಕಾರಕ್ಕೆ 200 ಕೋಟಿ ರೂ. ಹೊರೆಯಾಗಬಹುದಾದ ಲೆಕ್ಕ ಹಾಕಲಾಗಿದೆ ಎಂದು ತಿಳಿಸಿದರು.

    ಹೊಸ ಸಾಲ ಕೊಡುತ್ತಿದ್ದೇವೆ

    ನಾವು ರೈತರಿಗೆ ಹೊಸ ಸಾಲ ಕೊಡುತ್ತಿದ್ದೇವೆ. ಬುಕ್ ಹೊಂದಾಣಿಕೆ ಇಲ್ಲವೇ ಇಲ್ಲ. ಶೇ.99 ರೈತರು ಸಾಲ ಕಟ್ಟುತ್ತಿದ್ದಾರೆ. ಸಾಲ ಪಡೆದು ಸತ್ತು ಹೋದಲ್ಲಿ ಮಾತ್ರ ದಾಖಲೆ ಕಾರಣಕ್ಕೆ ಬಾಕಿ ಉಳಿಯುತ್ತಿವೆ ಎಂದು ಕೆ.ಎನ್.ರಾಜಣ್ಣ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts