More

    ದಿಗ್ಗಜರ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿದ ಜೈಸ್ವಾಲ್; ಏನದು?

    ಧರ್ಮಶಾಲಾ: ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್​ ಅಸೋಸಿಯೇಷನ್​ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್​ ನಡುವಿನ ಸರಣಿಯ ಅಂತಿಮ ಪಂದ್ಯ ಮಹತ್ತರ ಕ್ಷಣಗಳಿಗೆ ಸಾಕ್ಷಿಯಾಗುತ್ತಿದ್ದು, ಐದನೇ ಟೆಸ್ಟ್​ ಪಂದ್ಯದಲ್ಲೂ ಯುವ ಆರಂಭಿಕ ಯಶಸ್ವಿ ಜೈಸ್ವಾಲ್​ ತಮ್ಮ ರನ್​ ಬೇಟೆಯನ್ನು ಮುಂದುವರೆಸುವ ಮೂಲಕ ದಿಗ್ಗಜರ ಹೆಸರಿನಲ್ಲಿದ್ದ ದಾಖಲೆಗಳನ್ನು ಸರಿಗಟ್ಟಿದ್ದಾರೆ.

    ಇತ್ತ ಭಾರತದ ಪರ ಮೊದಲ ಇನ್ನಿಂಗ್ಸ್ ಆರಂಭಿಸಿರುವದ ಆರಂಭಿಕ ಯಶಸ್ವಿ ಜೈಸ್ವಾಲ್ ಕೇವಲ 1 ರನ್ ಕಲೆಹಾಕುವ ಮೂಲಕ ವಿರಾಟ್​ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಜೈಸ್ವಾಲ್ 1 ರನ್ ಕಲೆಹಾಕಿದ ಕೂಡಲೇ ಇಡೀ ಸರಣಿಯಲ್ಲಿ ಅವರು ಕಲೆಹಾಕಿದ ರನ್​ಗಳ ಮೊತ್ತ 656 ರನ್​ಗಳಿಗೆ ಏರಿಕೆಯಾಗಿದೆ. ಈ ಮೂಲಕ ಜೈಸ್ವಾಲ್ ಇಂಗ್ಲೆಂಡ್‌ ವಿರುದ್ಧದ ದ್ವಿಪಕ್ಷೀಯ ಟೆಸ್ಟ್ ಸರಣಿಯಲ್ಲಿ ಅಧಿಕ ರನ್ ಕಲೆಹಾಕಿದ್ದ ಕಿಂಗ್ ಕೊಹ್ಲಿ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

    2016 ರಲ್ಲಿ ನಡೆದಿದ್ದ ಇಂಗ್ಲೆಂಡ್‌ ವಿರುದ್ಧದ ದ್ವಿಪಕ್ಷೀಯ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಬರೋಬ್ಬರಿ 655 ರನ್ ಬಾರಿಸಿ ಆಂಗ್ಲರ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅಧಿಕ ರನ್ ಬಾರಿಸಿದ ಭಾರತೀಯರ ಪೈಕಿ ಮೊದಲ ಸ್ಥಾನದಲ್ಲಿದ್ದರು. ಇದೀಗ ಇಂಗ್ಲೆಂಡ್‌ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ 655ಕ್ಕೂ ಅಧಿಕ ರನ್ ಬಾರಿಸಿರುವ ಜೈಸ್ವಾಲ್, ದ್ವಿಪಕ್ಷೀಯ ಟೆಸ್ಟ್ ಸರಣಿಯೊಂದರಲ್ಲಿ ಅಧಿಕ ರನ್ ಬಾರಿಸಿದ ಭಾರತೀಯ ಬ್ಯಾಟರ್​ಗಳ ಪೈಕಿ ಜೈಸ್ವಾಲ್ ನಾಲ್ಕನೇ ಸ್ಥಾನಕ್ಕೇರಿದ್ದಾರೆ.

    ಇದನ್ನೂ ಓದಿ: ಭಿಕ್ಷೆ ಬೇಡುವುದೇ ಈ ನಟನ ಕೆಲಸ; ತಿಂಗಳಿಗೆ ಲಕ್ಷ ಲಕ್ಷ… ಸಂಪಾದಿಸುವ ಈ ನಟ ಯಾರು ಗೊತ್ತಾ?

    ಟೂರ್ನಿಯಲ್ಲಿ ಐದು ಪಂದ್ಯಗಳನ್ನು ಆಡಿರುವ ಜೈಸ್ವಾಲ್​ ಎರಡು ದ್ವಿಶತಕ ಸೇರಿದಂತೆ ಒಟ್ಟು 712 ರನ್​ ಕಲೆಹಾಕಿದ್ದಾರೆ. ಈ ಮೂಲಕ ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲಿ ಭಾರತದ ಪರ 45 ವರ್ಷಗಳ ಬಳಿಕ ಸರಣಿಯೊಂದರಲ್ಲಿ 700 ರನ್‌ಗಳ ಗಡಿ ದಾಟಿದ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಯಶಸ್ವಿ ಜೈಸ್ವಾಲ್​ ಪಾತ್ರರಾಗಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ಒಂದೇ ಟೂರ್ನಿಯಲ್ಲಿ ಅತಿಹೆಚ್ಚು ರನ್‌ ಗಳಿಸಿದ ಟೀಂ ಇಂಡಿಯಾದ ಬ್ಯಾಟರ್‌ ಎಂಬ ದಾಖಲೆಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.

    ಇದುವರೆಗೆ ಕೇವಲ 9 ಟೆಸ್ಟ್‌ಗಳಲ್ಲಿ ಕಣಕ್ಕಿಳಿದಿರುವ ಜೈಸ್ವಾಲ್‌, 16ನೇ ಇನಿಂಗ್ಸ್‌ನಲ್ಲೇ ಸಾವಿರ ರನ್‌ ಗಡಿ ದಾಟಿದ್ದಾರೆ. ಇದರೊಂದಿಗೆ ಅವರು ಭಾರತ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ವೇಗವಾಗಿ ಸಹಸ್ರ ರನ್‌ ಕಲೆಹಾಕಿದ ಎರಡನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ವೇಗವಾಗಿ 1000 ರನ್‌ ಗಳಿಸಿದ ದಾಖಲೆ ವಿನೋದ್ ಕಾಂಬ್ಳಿ ಹೆಸರಲ್ಲಿದೆ. ಅವರು 12 ಪಂದ್ಯಗಳ 14 ಇನಿಂಗ್ಸ್‌ಗಳಲ್ಲಿ ಈ ದಾಖಲೆ ಬರೆದಿದ್ದರು.ಇದೀಗ, ಅವರನ್ನು ಯಶಸ್ವಿ ಜೈಸ್ವಾಲ್‌ ಹಿಂದಿಕ್ಕಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts