More

    ಕರ್ನಾಟಕಕ್ಕೆ ಇನಿಂಗ್ಸ್ ಹಿನ್ನಡೆ: ಪ್ರಾಬಲ್ಯ ಸಾಧಿಸಿದ ಆತಿಥೇಯ ವಿದರ್ಭ

    ನಾಗ್ಪುರ: ಉಪನಾಯಕ ನಿಕಿನ್ ಜೋಸ್ (82 ರನ್, 212 ಎಸೆತ, 11 ಬೌಂಡರಿ) ಏಕಾಂಗಿ ಹೋರಾಟದ ಹೊರತಾಗಿಯೂ ಕರ್ನಾಟಕ ತಂಡ ಪ್ರತಿಷ್ಠಿತ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ೈನಲ್‌ನಲ್ಲಿ ಆತಿಥೇಯ ವಿದರ್ಭ ಎದುರು ಇನಿಂಗ್ಸ್ ಹಿನ್ನಡೆ ಅನುಭವಿಸಿದೆ. ಇದರೊಂದಿಗೆ ಮಯಾಂಕ್ ಅಗರ್ವಾಲ್ ಬಳಗದ ಸೆಮಿೈನಲ್ ಹಾದಿ ಜಟಿಲಗೊಂಡಿದೆ. ಪಂದ್ಯದಲ್ಲಿ ಇನ್ನೂ 2 ದಿನದಾಟ ಬಾಕಿಯಿದ್ದು, ಬೃಹತ್ ಮುನ್ನಡೆಯತ್ತ ಸಾಗಿರುವ ವಿದರ್ಭ ತಂಡ ಬಿಗಿಹಿಡಿತ ಸಾಧಿಸಿದೆ. ಇನ್ನು ಕರ್ನಾಟಕ ತಂಡ ಪಂದ್ಯ ಗೆದ್ದರಷ್ಟೇ ಉಪಾಂತ್ಯಕ್ಕೇರಲಿದೆ.

    ವಿಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾನುವಾರ 2 ವಿಕೆಟ್‌ಗೆ 98 ರನ್‌ಗಳಿಂದ 3ನೇ ದಿನದಾಟ ಆರಂಭಿಸಿದ ಕರ್ನಾಟಕ, 90.3 ಓವರ್‌ಗಳಲ್ಲಿ 286 ರನ್‌ಗಳಿಗೆ ಮೊದಲ ಇನಿಂಗ್ಸ್ ಮುಗಿಸಿತು. 174 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಸರದಿ ಆರಂಭಿಸಿದ ವಿದರ್ಭ ದಿನದಂತ್ಯಕ್ಕೆ 14 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 50 ರನ್‌ಗಳಿಸಿದ್ದು, ಒಟ್ಟು 224 ರನ್‌ಗಳ ಮುನ್ನಡೆ ಕಂಡಿದೆ. ಅಥರ್ವ ತೈಡೆ (21*) ಜತೆಯಾಗಿ ಧ್ರುವ ಶೋರೆ (29*) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

    ವಿದರ್ಭ: 460 ಹಾಗೂ ವಿಕೆಟ್ ನಷ್ಟವಿಲ್ಲದೆ 50 (ಅಥರ್ವ 21*, ಧ್ರುವ 29*) ಕರ್ನಾಟಕ: 90.3 ಓವರ್‌ಗಳಲ್ಲಿ 286 (ನಿಕಿನ್ 82, ಮನೀಷ್ 15, ಹಾರ್ದಿಕ್ 23, ಶರತ್ 29, ವೈಶಾಕ್ 23, ಯಶ್ ಠಾಕೂರ್ 48ಕ್ಕೆ 3, ಆದಿತ್ಯ 50ಕ್ಕೆ 3).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts