More

    ಟಿಕ್​ಟಾಕ್​ನಲ್ಲಿ ಕೆಜಿಎಫ್​ ಹೊಸ ದಾಖಲೆ!

    ಈಗಾಗಲೇ ಸ್ಯಾಂಡಲ್​ವುಡ್​ನಲ್ಲಿ ಹಲವು ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡಿರುವ ಯಶ್​ ಅಭಿನಯದ ‘ಕೆಜಿಎಫ್​‘ ಸಿನಿಮಾ, ಇದೀಗ ಟಿಕ್​ಟಾಕ್​ನಲ್ಲೂ ದಾಖಲೆಯೊಂದನ್ನು ಮಾಡಿದೆ. ಕೇವಲ ಕರ್ನಾಟಕಕ್ಕಷ್ಟೇ ಆ ದಾಖಲೆ ಸೀಮಿತವಾಗಿಲ್ಲ. ಇಡೀ ಭಾರತೀಯ ಸಿನಿಮಾರಂಗದಲ್ಲಿ ಬೇರಾವ ಸಿನಿಮಾ ಮಾಡದ ದಾಖಲೆಯನ್ನು ಕೆಜಿಎಫ್​ ಮಾಡಿದೆ ಎಂದರೆ ಅದು ನಿಜಕ್ಕೂ ಮೆಚ್ಚುವ ವಿಷಯವೇ.
    ಹೌದು, ಟಿಕ್​ಟಾಕ್​ ಸದ್ಯ ಭಾರತದಲ್ಲಿ ಭಾರೀ ಜನಪ್ರಿಯತೆಯಲ್ಲಿರುವ ಆ್ಯಪ್​. ಆ ಆ್ಯಪ್​ನಲ್ಲಿ ಬರೋಬ್ಬರಿ 3.4 ಬಿಲಿಯನ್​ ಬಾರಿ ಕೆಜಿಎಫ್​ ಎಂದು ಹ್ಯಾಶ್​ಟ್ಯಾಗ್​ ಬಳಸಲಾಗಿದೆ. ಭಾರತೀಯ ಸಿನಿಮಾಗಳಲ್ಲಿ ಬೇರಾವ ಚಿತ್ರ ಇಷ್ಟೊಂದು ಬಾರಿ ಹ್ಯಾಶ್​ಟ್ಯಾಗ್​ ಬಳಸಿದ ಇತಿಹಾಸವಿಲ್ಲ. ಅಂಥ ಸಾಧನೆಗೆ ಕನ್ನಡದ ಮಾಸ್ಟರ್​ಪೀಸ್​ ಸಾಕ್ಷಿಯಾಗಿದೆ.

    ಟಿಕ್​ಟಾಕ್​ನಲ್ಲಿ ಕೆಜಿಎಫ್​ ಹೊಸ ದಾಖಲೆ!

     ಇದನ್ನೂ ಓದಿ: ಐ ಆ್ಯಮ್ ಸೋ ಪ್ರೌಡ್ ಆಫ್​ ಯೂ … ಸೋನಾಕ್ಷಿ ಬೆನ್ನು ತಟ್ಟಿದ ಆಲಿಯಾ ಭಟ್

    ಸಿನಿಮಾ ಬಿಡುಗಡೆಗೂ ಮುನ್ನವೇ ಹಲವು ದಾಖಲೆಗೆ ಅಚ್ಚೊತ್ತಿದ್ದ ಕೆಜಿಎಫ್​ ಸಿನಿಮಾ, ಬಿಡುಗಡೆ ಬಳಿಕವೂ ಗಳಿಕೆ ವಿಚಾರದಲ್ಲಿ ಮೈಲಿಗಲ್ಲು ಸೃಷ್ಟಿಸಿತ್ತು. ಟಿವಿ ರೈಟ್ಸ್, ಅಮೆಜಾನ್​ನಲ್ಲೂ ಸಿನಿಮಾ ಬಗ್ಗೆ ಕ್ರೇಜ್​ ಶುರುವಾಗಿತ್ತು. ಅದರಂತೆ ಚಾಪ್ಟರ್​ 2 ಬಗ್ಗೆಯೂ ಇದೀಗ ಎಲ್ಲೆಡೆ ಕೌತುಕ ಮನೆ ಮಾಡಿದೆ. ಈಗಾಗಲೇ ಘೋಷಣೆ ಆದಂತೆ ಅಕ್ಟೋಬರ್​ 23ಕ್ಕೆ ವಿಶ್ವಾದ್ಯಂತ ಐದು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

    ಹೇಳಿದ ದಿನದಂದೇ ಕೆಜಿಎಫ್ ​2 ಬಿಡುಗಡೆ ಆಗುವುದಾ?

    ಮಾಡೆಲಿಂಗ್ ಮಾಯೆಯನ್ನೂ ಬಿಡದ ಕರೊನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts