More

    ವಿಶ್ವಾದ್ಯಂತ ಥಿಯೇಟರ್​ಗಳಲ್ಲಿ ‘ಕೆಜಿಎಫ್​: ಚಾಪ್ಟರ್​ 2’ ಸ್ಟ್ಯಾಂಡಿಗಳ ಪ್ರದರ್ಶನ? ಭರ್ಜರಿ ಪ್ರಮೋಷನ್ಸ್…

    ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ನಟ ಯಶ್ ಅಭಿಮಾನಿಗಳಿಗೆ ತುಂಬಾನೇ ಮುಖ್ಯ ಎಂದೇ ಹೇಳಬೇಕು. ಉಳಿದ ಸಿನಿಪ್ರೇಕ್ಷಕರಿಗೆ ಅಂತೂ ಈ ಸಿನಿಮಾ ಮೇಲೆ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತಲೇ ಇದೆ ಎನ್ನಬಹುದು. ಹೌದು, ‘ಕೆಜಿಎಫ್​: ಚಾಪ್ಟರ್​ 2’ ಚಿತ್ರ ಪ್ರಪಂಚದಾದ್ಯಂತ ಬಿಡುಗಡೆ ಆಗಲಿದ್ದು, ಅದರ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಸೃಷ್ಟಿಯಾಗಿದೆ. ಇನ್ನು, ಸಿನಿಪ್ರೇಕ್ಷಕರ ಆ ನಿರೀಕ್ಷೆಗೆ ತಕ್ಕಂತೆ ಚಿತ್ರತಂಡ ಕೂಡಾ ಸಿನಿಮಾದ ಬಗ್ಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಲು ನಿರ್ಧರಿಸಿದೆ.
    ಈಗಾಗಲೇ, ಚಿತ್ರದ ಪ್ರಚಾರಕ್ಕೆ ಸಿನಿಮಾತಂಡ, ನಿರ್ಮಾಪಕರ ವತಿಯಿಂದ ಸಿದ್ಧತೆಗಳು ನಡೆಯುತ್ತಿವೆ. ಪ್ರಪಂಚದಾದ್ಯಂತ ಇರುವ ಪ್ರಮುಖ ಥಿಯೇಟರ್​ಗಳಲ್ಲಿ ಕೆಲವು ಸ್ಟ್ಯಾಂಡಿಗಳು, ಪೋಸ್ಟರ್​ಗಳನ್ನು ಪ್ರದರ್ಶಿಸಲು ನಿರ್ಧರಿಸಲಾಗಿದ್ದು, ಇದಕ್ಕೆ ತಯಾರಿ ಕೂಡಾ ನಡೆಯುತ್ತಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ, ಸ್ಟ್ಯಾಂಡಿಗಳು ವಿಶೇಷವಾಗಿ ವಿನ್ಯಾಸಗೊಂಡಿವೆ. ಜತೆಗೆ, ಅವು ಹೇಗೆ ಕಾಣುತ್ತಿವೆ ಎಂದು ತಿಳಿಸಲು ಸೋಶಿಯಲ್​ ಮೀಡಿಯಾದಲ್ಲಿ ಆ ಫೋಟೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ಸಿನಿಮಾತಂಡದಿಂದ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಭರ್ಜರಿ ಪ್ರಚಾರಕಾರ್ಯಕ್ಕೆ ಪ್ಲ್ಯಾನ್​ಗಳು ನಡೆಯುತ್ತಿವೆ.
    ಕೆಜಿಎಫ್​ 2’ ಸಿನಿಮಾದಿಂದ ಈವರೆಗೆ ಬಿಡುಗಡೆ ಆಗಿರುವುದು ಅಂದರೆ ಕೆಲವು ಪೋಸ್ಟರ್​ಗಳು ಮತ್ತು ಟೀಸರ್. ಸದ್ಯ, ಸಿನಿಮಾದ ಟ್ರೇಲರ್​ಗಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ ನಟ ಸಂಜಯ್​ ದತ್​, ರವೀನಾ ಟಂಡನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. 14 ಏಪ್ರಿಲ್ 2022ಕ್ಕೆ ಸಿನಿಮಾ ವಿಶ್ವಾದ್ಯಂತ ತೆರೆಗಪ್ಪಳಿಸಲಿದೆ. ಇದೀಗ, ಸಾಮಾಜಿಕ ಜಾಲತಾಣದಲ್ಲಿ ಮಿಂಚುತ್ತಿರುವ ಚಿತ್ರದ ಸ್ಟ್ಯಾಂಡಿಗಳು ಮತ್ತು ಪೋಸ್ಟರ್​ಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ

    ವಿಶ್ವಾದ್ಯಂತ ಥಿಯೇಟರ್​ಗಳಲ್ಲಿ ‘ಕೆಜಿಎಫ್​: ಚಾಪ್ಟರ್​ 2’ ಸ್ಟ್ಯಾಂಡಿಗಳ ಪ್ರದರ್ಶನ? ಭರ್ಜರಿ ಪ್ರಮೋಷನ್ಸ್... ವಿಶ್ವಾದ್ಯಂತ ಥಿಯೇಟರ್​ಗಳಲ್ಲಿ ‘ಕೆಜಿಎಫ್​: ಚಾಪ್ಟರ್​ 2’ ಸ್ಟ್ಯಾಂಡಿಗಳ ಪ್ರದರ್ಶನ? ಭರ್ಜರಿ ಪ್ರಮೋಷನ್ಸ್... ವಿಶ್ವಾದ್ಯಂತ ಥಿಯೇಟರ್​ಗಳಲ್ಲಿ ‘ಕೆಜಿಎಫ್​: ಚಾಪ್ಟರ್​ 2’ ಸ್ಟ್ಯಾಂಡಿಗಳ ಪ್ರದರ್ಶನ? ಭರ್ಜರಿ ಪ್ರಮೋಷನ್ಸ್... ವಿಶ್ವಾದ್ಯಂತ ಥಿಯೇಟರ್​ಗಳಲ್ಲಿ ‘ಕೆಜಿಎಫ್​: ಚಾಪ್ಟರ್​ 2’ ಸ್ಟ್ಯಾಂಡಿಗಳ ಪ್ರದರ್ಶನ? ಭರ್ಜರಿ ಪ್ರಮೋಷನ್ಸ್...

    ‘ಪುಷ್ಪ’ ಸಿನಿಮಾದ ‘ಶ್ರೀವಲ್ಲಿ’ ಹಾಡಿಗೆ ಬೆಂಗಾಲಿ ಟ್ವಿಸ್ಟ್ ನೀಡಿದ ಉಷಾ ಉತ್ತುಪ್! ಹೇಗಿದೆ ಬೆಂಗಾಲಿ ಹಾಡು?

    2 ವರ್ಷಗಳ ಬಳಿಕ ಶಿವರಾತ್ರಿಯಂದು ಮಾಸ್ ಅವತಾರದಲ್ಲಿ ಮಿಂಚಿದ ಪ್ರಿನ್ಸ್ ಮಹೇಶ್! ಪೋಸ್ಟರ್ ವೈರಲ್…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts