More

    ಬ್ರಹ್ಮಾಸ್ತ್ರ ಬಿಡ್ತಾರಾ? ಕರ್ಣ ಆಗ್ತಾರಾ? ಯಶ್​ ಮುಂದಿದೆ ಎರಡು ಆಯ್ಕೆಗಳು

    ಮುಂಬೈ: ‘ಕೆಜಿಎಫ್​ 2’ ಚಿತ್ರ ಬಿಡುಗಡೆ ಆದಾಗಿನಿಂದ ಯಶ್​ ಅವರ ಮುಂದಿನ ನಡೆ ಏನು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಲೇ ಇದೆ. ಆದರೆ, ಸದ್ಯಕ್ಕೆ ಉತ್ತರ ಮಾತ್ರ ಸಿಗುತ್ತಿಲ್ಲ. ಈಗಾಗಲೇ ಶಂಕರ್​, ಬೋಯಪಾಟಿ ಶ್ರೀನು, ನರ್ತನ್​ ಸೇರಿದಂತೆ ಕೆಲವು ದಕ್ಷಿಣದ ಜನಪ್ರಿಯ ನಿರ್ದೇಶಕರು ಯಶ್​ ಜತೆಗೆ ಸಿನಿಮಾ ಮಾಡುವ ಸಾಧ್ಯತೆ ಇದೆ ಎಂಬ ಸುದ್ದಿ ಕೇಳಿಬಂದಿತ್ತು. ಈಗ ಬಾಲಿವುಡ್​ ಚಿತ್ರಗಳಲ್ಲಿ ಯಶ್​ ಹೆಸರು ಕೇಳಿಬರುತ್ತಿವೆ.

    ಇದನ್ನೂ ಓದಿ: ರಾಜ್ಯಾದ್ಯಂತ ‘ಗಂಧದಗುಡಿ’ ಅದ್ಧೂರಿ ಬಿಡುಗಡೆ: ಬೆಳ್ಳಿಪರದೆಯಲ್ಲಿ ಅಪ್ಪು ನೋಡಿ ಭಾವುಕರಾದ ಅಭಿಮಾನಿಗಳು

    ಹೌದು, ಬಾಲಿವುಡ್​ನ ಎರಡು ಚಿತ್ರತಂಡಗಳಿಂದ ಯಶ್​ಗೆ ಆಫರ್​ ಹೋಗಿದ್ದು, ಈ ಪೈಕಿ ಯಶ್​ ಯಾವ ಚಿತ್ರವನ್ನು ಒಪ್ಪುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ. ಈ ಪೈಕಿ ಮೊದಲನೆಯದು ‘ಬ್ರಹ್ಮಾಸ್ತ್ರ 2’. ಈಗಾಗಲೇ ‘ಬ್ರಹ್ಮಾಸ್ತ್ರ’ ಚಿತ್ರವು ಬಿಡುಗಡೆಯಾಗಿ ಯಶಸ್ವಿಯಾಗಿದ್ದು, ಮುಂದಿನ ವರ್ಷ ಅದರ ಮುಂದುವರೆದ ಭಾಗ ಪ್ರಾರಂಭವಾಗಲಿದೆ. ಈ ಚಿತ್ರದಲ್ಲಿನ ದೇವ್​ ಎಂಬ ಪಾತ್ರಕ್ಕೆ ಯಶ್​ಗೆ ಆಫರ್​ ನೀಡಲಾಗಿದೆಯಂತೆ.

    ಇದಲ್ಲದೆ ರಾಕೇಶ್​ ಓಂಪ್ರಕಾಶ್​ ಮೆಹ್ರಾ ನಿರ್ದೇಶನದ ‘ಕರ್ಣ’ ಚಿತ್ರದಲ್ಲೂ ಯಶ್​ಗೆ ಆಫರ್​ ನೀಡಲಾಗಿದೆಯಂತೆ. ಮಹಾಭಾರತವನ್ನಾಧರಿಸಿದ ಈ ಚಿತ್ರವನ್ನು ಎಕ್ಸೆಲ್​ ಎಂಟರ್​ಟೈನ್​ಮೆಂಟ್​ನವರು ನಿರ್ಮಿಸುತ್ತಿದ್ದು, ಕರ್ಣನ ಪಾತ್ರ ಯಶ್​ ಮಾಡಿದರೆ ಚೆನ್ನ ಎಂದು ಚಿತ್ರತಂಡದವರಿಗೆ ಅನಿಸಿದೆ. ಈ ನಿಟ್ಟಿನಲ್ಲಿ ಆಫರ್​ ನೀಡಲಾಗಿದೆಯಂತೆ.

    ಇದನ್ನೂ ಓದಿ: ನಾನು ಬಡವ ಅಲ್ಲ ಶ್ರೀಮಂತ; ಹಾಗಂತ ಧನಂಜಯ್​ ಹೇಳಿದ್ದೇಕೆ?

    ಈ ಎರಡೂ ಚಿತ್ರಗಳೂ ಅತ್ಯಂತ ದೊಡ್ಡ ಬಜೆಟ್​ನ ಚಿತ್ರಗಳಾಗಿದ್ದು, ಪುರಾಣವನ್ನಾಧರಿಸಿದ ಚಿತ್ರಗಳಾಗಿವೆ. ಈಗಾಗಲೇ ಎರಡೂ ತಂಡದವರು ಯಶ್​ ಅವರನ್ನು ಸಂಪರ್ಕಿಸಿದ್ದಾರಂತೆ. ಆದರೆ, ಯಶ್​ ಕಡೆಯಿಂದ ಯಾವುದೇ ಉತ್ತರ ಬಂದಿಲ್ಲವಂತೆ. ‘ಕೆಜಿಎಫ್​ 2’ ನಂತರ ತಾವು ಅಭಿನಯಿಸುವ ಮುಂದಿನ ಚಿತ್ರವು ತಮ್ಮನ್ನು ಇನ್ನಷ್ಟು ಎತ್ತರಕ್ಕೆ ಕರೆದುಕೊಂಡು ಹೋಗಬೇಕು ಎಂಬ ನಿಟ್ಟಿನಲ್ಲಿ ಪ್ರತಿ ಅವಕಾಶವನ್ನೂ ಅಳೆದು ತೂಗಿ ನೋಡುತ್ತಿದ್ದಾರಂತೆ ಯಶ್​. ಹಾಗಾಗಿ, ‘ಕೆಜಿಎಫ್​ 2’ ಬಿಡುಗಡೆಯಾಗಿ ಆರು ತಿಂಗಳ ನಂತರವೂ ಅವರು ಯಾವೊಂದು ಹೊಸ ಚಿತ್ರವನ್ನೂ ಒಪ್ಪಿಲ್ಲ. ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಯಶ್​ ಹೊಸ ಚಿತ್ರವನ್ನು ಘೋಷಿಸಬಹುದು ಎಂಬ ನಿರೀಕ್ಷೆ ಎಲ್ಲರಲ್ಲೂ ಇದೆ.

    ಚಿತ್ರ ವಿಮರ್ಶೆ – ‘ಗಂಧದ ಗುಡಿ’ ಒಂದು ಚಿತ್ರವಲ್ಲ, ಅದೊಂದು ಅನುಭವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts