More

    ಯರಜಂತಿ ಸರ್ಕಾರಿ ಶಾಲೆ ಶಿಥಿಲಾವಸ್ಥೆಗೆ

    ಗುರುಗುಂಟಾ: ಯರಜಂತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಶಿಥಿಲಾವಸ್ಥೆಗೊಂಡಿದೆ. ಪದರು ಕಿತ್ತು ಹೋಗಿದ್ದು, ಕಬ್ಬಿಣದ ಸರಳು ಕಾಣುತ್ತಿದೆ. ಆತಂಕದಲ್ಲಿ ಮಕ್ಕಳು ಪಾಠ ಕೇಳುತ್ತಿದ್ದಾರೆ.

    ಇದನ್ನೂ ಓದಿ: ಕೇವಲ 47 ದಿನಗಳಲ್ಲಿ 32 ರಿಂದ 204 ರೂಪಾಯಿಗೆ ಏರಿಕೆ: 650% ಲಾಭ ತಂದುಕೊಟ್ಟ ಸರ್ಕಾರಿ ಸಂಸ್ಥೆ ಷೇರು; ಸೋಮವಾರ ಸಾರ್ವಕಾಲಿಕ ಗರಿಷ್ಠ ಬೆಲೆಗೆ ಮಾರಾಟ

    2001ರಲ್ಲಿ ಆರಂಭವಾದ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿಗಳಿವೆ. ಎಂಟು ಕೊಠಡಿಗಳಿದ್ದು, 444 ಮಕ್ಕಳು ಕಲಿಯುತ್ತಿದ್ದಾರೆ. ಮಕ್ಕಳ ಸಂಖ್ಯೆಗನುಗುಣವಾಗಿ ಒಂಬತ್ತು ವರ್ಷಗಳ ಹಿಂದೆ ಕಿಪ್ರಾ ಶಾಲೆಯಿಂದ ಹಿಪ್ರಾ ಶಾಲೆಯಾಗಿ ಪರಿವರ್ತನೆಗೊಂಡಿದೆ. ಆದರೂ, ಆರಂಭದಿಂದಲೂ ಸರ್ಕಾರ ಒಬ್ಬ ಕಾಯಂ ಶಿಕ್ಷಕರನ್ನು ಮಾತ್ರ ನೇಮಿಸಿದ್ದು, ಉಳಿದ ಏಳು ಶಿಕ್ಷಕರು ಅತಿಥಿಗಳು.

    ಗಣಿತ, ವಿಜ್ಞಾನ, ಇಂಗ್ಲಿಷ್ ಭಾಷೆ ಶಿಕ್ಷಕರಿಲ್ಲ. ಆರಂಭದಿಂದ ಹಿಂದಿ ಶಿಕ್ಷಕರು ಇಲ್ಲವೇ ಇಲ್ಲ. ಕನಿಷ್ಠ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಮುತುವರ್ಜಿ ವಹಿಸಿಲ್ಲ. ಶಾಲೆಯ ಬೋರ್ ಕೆಟ್ಟು ಒಳಪಟ್ಟು ವರ್ಷವಾದರೂ ದುರಸ್ತಿ ಮಾಡಿಲ್ಲ.

    ಸಾರ್ವಜನಿಕ ಬೋರ್‌ನಿಂದ ಶಾಲೆ ಗುಮ್ಮಿಗೆ ಪೂರೈಸುವ ನೀರೇ ಆಸರೆಯಾಗಿದೆ. ಅಕಸ್ಮಾತ್ ಇದೇ ಬೋರ್ ಕೆಟ್ಟರೆ ಮಕ್ಕಳಿಗೆ ಕುಡಿವ ನೀರೆಂಬುದು ಬಿಸಿಲು ಕುದುರೆಯಾಗಲಿದೆ. ಶಾಲೆ ಸುತ್ತಲೂ ಎಲ್ಲೆಂದರಲ್ಲಿ ಕಸ ಚೆಲ್ಲುತ್ತಿದ್ದರಿಂದ ಸ್ವಚ್ಛತೆ ಮಾಯವಾಗಿದೆ.

    ಅನೇಕ ವರ್ಷಗಳು ಕಳೆದರೂ ಶಾಲೆ ಸಣ್ಣ-ಪುಟ್ಟ ರಿಪೇರಿ ಹಾಗೂ ಸುಣ್ಣ-ಬಣ್ಣ ಕಂಡಿಲ್ಲ. ಮುಖ್ಯಶಿಕ್ಷಕ ರಾಚಯ್ಯಗೆ ಯರಜಂತಿ ಮತ್ತು ಮಲ್ಲಾಪುರ ಶಾಲೆಗಳ ಉಸ್ತುವಾರಿ ನೀಡಿದ್ದರಿಂದ ತಲಾ ಮೂರು ದಿನ ಆಯಾ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿದೆ.

    ಎರಡು ಅಂತಸ್ತಿನ ಶಾಲೆ ಕೊಠಡಿಯೊಂದಕ್ಕೆ ಹತ್ತಲು ಮೆಟ್ಟಿಲಿನ ಕೊರತೆಯಿದೆ. ಹೈಟೆಕ್ ಶೌಚಗೃಹವಿದೆ. ಇದು ಕೂಡಾ ನೀರಿನ ಕೊರತೆಯಿಂದ ಇದ್ದೂ ಇಲ್ಲವಾಗಿದೆ. ಈಚೆಗೆ ದೇವದುರ್ಗದಲ್ಲಿ ಸರ್ಕಾರಿ ಶಾಲೆಯಲ್ಲಿ ಮೇಲ್ಛಾವಣಿ ಕುಸಿದು ವಿದ್ಯಾರ್ಥಿನಿ ಗಾಯಗೊಂಡಿದ್ದಳು. ಇಂತಹ ಘಟನೆಗಳು ಇಲ್ಲಿ ಸಂಭವಿಸುವ ಮುನ್ನ ಸಂಬಂಧಿಸಿದವರು ಇತ್ತ ಗಮನ ಹರಿಸಬೇಕಿದೆ.

    ಬೋರ್ ದುರಸ್ತಿಗೆ ಬಂದಿದ್ದನ್ನು ಪಿಡಿಒಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಆಗಾಗ್ಗೆ ನೀರಿನ ತೊಂದರೆ ಅನುಭವಿಸುತ್ತಿರುತ್ತೇವೆ. ಅತಿಥಿ ಶಿಕ್ಷಕರೇ ಶಾಲೆಗೆ ಆಸರೆಯಾಗಿದ್ದಾರೆ. ಶಿಥಿಲಗೊಂಡ ಕೋಣೆಗೆ ಬೀಗ ಹಾಕಲಾಗಿದೆ
    ರಾಚಯ್ಯ ಮುಖ್ಯಶಿಕ್ಷಕ, ಯರಜಂತಿ ಹಿಪ್ರಾಶಾಲೆ

    ಇಲ್ಲಿನ ಸರ್ಕಾರಿ ಶಾಲೆಯಲ್ಲಿನ ಅವ್ಯವಸ್ಥೆ ನಮ್ಮ ಬಡ ಮಕ್ಕಳಿಗೆ ಶಾಪವಾಗಿದೆ. ಸುಧಾರಿಸುವಲ್ಲಿ ಶಿಕ್ಷಣ ಅಧಿಕಾರಿಗಳು ಮುಂದಾಗಬೇಕಿದೆ.
    ಹನುಮಂತ ಸೂಗೂರೇರ್
    ಅಧ್ಯಕ್ಷ, ಕರಾರೈಸಂಘ-ಯರಜಂತಿ ಘಟಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts