More

    ಹೇರ್ ಕಲರಿಂಗ್‌ಗೆ ಕೊನೆ ದಿನವೂ ಉತ್ತಮ ಸ್ಪಂದನೆ

    ಯಳಂದೂರು: ಪಟ್ಟಣದ ದೇವಾಂಗ ಬೀದಿಯಲ್ಲಿರುವ ಸರ್ಕಾರಿ ನೌಕರರ ಸಂಘದ ಕಟ್ಟಡದಲ್ಲಿ ಕಳೆದ ಎರಡು ದಿನಗಳಿಂದ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ಗಾರ್ನಿಯರ್ ಕಂಪನಿ ವತಿಯಿಂದ ನಡೆಯುತ್ತಿರುವ ಹೇರ್ ಕಲರ್ ಅಭಿಯಾನಕ್ಕೆ ಕೊನೆಯ ದಿನವಾದ ಮಂಗಳವಾರವೂ ಉತ್ತಮ ಸ್ಪಂದನೆ ದೊರಕಿತು. ನೂರಾರು ಜನರು ಆಗಮಿಸಿ ತಲೆಗೂದಲಿಗೆ ತಮಗಿಷ್ಟವಾದ ಬಣ್ಣ ಹಚ್ಚಿಸಿಕೊಂಡರು.

    ಕೊನೆಯ ದಿನವಾದ್ದರಿಂದ ಬೆಳಗ್ಗೆಯಿಂದ ಸಂಜೆವರೆಗೂ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ತಮ್ಮ ಹೆಸರನ್ನು ನೋಂದಾಯಿಸಿಕೊಂಡು ತಮಗೆ ಇಷ್ಟವಾದ ಹೇರ್ ಕಲರನ್ನು ತಲೆಗೂದಲಿಗೆ ಹಾಕಿಸಿಕೊಂಡು ಖುಷಿಪಟ್ಟರು.
    ಗ್ರಾಮ ಪಂಚಾಯಿತಿ ಸದಸ್ಯ ಆರ್. ಪುಟ್ಟಬಸವಯ್ಯ, ಸರ್ಕಾರಿ ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ಅಮ್ಮನಪುರ ಮಹೇಶ್, ಮಲ್ಲಿಗೆಹಳ್ಳಿ ಪ್ರಭುಸ್ವಾಮಿ, ಶೋಭಾ, ಮಹದೇವಮ್ಮ, ಕವಿತಾ, ಭಾಗ್ಯಾ, ಸರಸ್ವತಿ ಸೇರಿದಂತೆ ಅನೇಕರು ಇದ್ದರು.

    ವಿಜಯವಾಣಿ ದಿನಪತ್ರಿಕೆ ಸುದ್ದಿಯೊಂದಿಗೆ ಸದಾ ಹೊಸತನ್ನು ನೀಡುವ ಪ್ರಯತ್ನ ಮಾಡುವುದರ ಜತೆಗೆ ಹಲವು ಸಾಮಾಜಿಕ ಕೆಲಸಗಳನ್ನು ಮಾಡುತ್ತಿದೆ. ಈಗ ಗಾರ್ನಿಯರ್ ಕಂಪನಿಯ ಸಹಯೋಗದೊಂದಿಗೆ ನಡೆಸುತ್ತಿರುವ ಹೇರ್ ಕಲರಿಂಗ್ ಅಭಿಯಾನವೂ ಒಂದು ವಿಭಿನ್ನ ಕಾರ್ಯವಾಗಿದ್ದು, ಮುಂದೆಯೂ ಈ ಪತ್ರಿಕೆ ಇನ್ನಷ್ಟು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ.
    ಅಶ್ವಿನಿ ಪ್ರಕಾಶ್, ಗೃಹಿಣಿ, ಯಳಂದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts