More

    ಮಕ್ಕಳೇ ಸ್ವಚ್ಛ ಭಾರತದ ರಾಯಭಾರಿಗಳು: ಕೊಪ್ಪಳ ಜಿಪಂ ಸಿಇಒ ಫೌಜಿಯಾ ತರನ್ನುಮ್ ಹೇಳಿಕೆ

    ಯಲಬುರ್ಗಾ: ಮಕ್ಕಳೇ ನಾಳಿನ ಪ್ರಜೆಗಳು. ಹೀಗಾಗಿ ಅವರೇ ಸ್ವಚ್ಛ ಭಾರತದ ರಾಯಭಾರಿಗಳು ಎಂದು ಜಿಪಂ ಸಿಇಒ ಫೌಜಿಯಾ ತರನ್ನುಮ್ ಹೇಳಿದರು.

    ಚಿಕ್ಕಮ್ಯಾಗೇರಿ ಗ್ರಾಮದ ಬಾಲಕಿಯರ ಸರ್ಕಾರಿ ಶಾಲೆಯಲ್ಲಿ ಶುಕ್ರವಾರ ಜಿಪಂ, ತಾಪಂ, ಗ್ರಾಪಂ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಸ್ವಚ್ಛತೆ ಬಗ್ಗೆ ಪಾಲಕರಿಗೂ ಅರಿವು ಮೂಡಿಸಬೇಕು. ಹೀಗಾದಾಗ ಗಾಂಧೀಜಿ ಕಂಡ ಸ್ವಚ್ಛ ಭಾರತ ಕನಸು ನನಸಾಗಲು ಸಾಧ್ಯ. ಪ್ರತಿಯೊಬ್ಬರೂ ಶ್ರಮದಾನ ಮಾಡುವ ಮೂಲಕ ಸ್ವಚ್ಛತೆಗೆ ಮುಂದಾಗಬೇಕು ಎಂದರು. ವಿದ್ಯಾರ್ಥಿನಿಯರು ವೈಯಕ್ತಿಕ ಸ್ವಚ್ಛತೆ ಬಗ್ಗೆ ಕಾಳಜಿವಹಿಸಬೇಕು. ಮನೆಯಲ್ಲಿ ಹಸಿ, ಒಣ ಕಸ ಬೇರ್ಪಡಿಸುವ ವಿಧಾನ, ಅದರಿಂದ ಗೊಬ್ಬರ ತಯಾರಿಸುವ ಕುರಿತು ತಿಳಿಸಿದ ಸಿಇಒ, ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸ ಮಾಡುವಂತೆ ಸಲಹೆ ನೀಡಿದರು.

    ನರೇಗಾದಡಿ ಅಡುಗೆ ಕೊಠಡಿ, ಮೆಚ್ಚುಗೆ: ನರೇಗಾದಡಿ ನಿರ್ಮಾಣಗೊಂಡಿರುವ ಚಿಕ್ಕಮ್ಯಾಗೇರಿ ಸರ್ಕಾರಿ ಪ್ರಾಥಮಿಕ ಶಾಲೆಯ ಅಡುಗೆ ಕೊಠಡಿ, ಶಾಲಾ ರಕ್ಷಣಾಗೋಡೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸ್ಥಳದಲ್ಲಿದ್ದ ಅಡುಗೆ ತಯಾರಿಸುವವರು ಹಾಗೂ ಸಾರ್ವಜನಿಕರಿಂದ ಅಭಿಪ್ರಾಯ ಪಡೆದು ಕಾಮಗಾರಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಗುಣಮಟ್ಟದ ಶಾಲಾಭಿವೃದ್ಧಿ ಕಾಮಗಾರಿ ಆಗಬೇಕೆಂದು ಸಲಹೆ ನೀಡಿದರು. ಬಳಿಕ ವಿದ್ಯಾರ್ಥಿಗಳ ಜತೆ ಬಿಸಿಯೂಟ ಸವಿದರು.

    ತಾಪಂ ಇಒ ಸಂತೋಷ ಪಾಟೀಲ್, ಸಹಾಯಕ ನಿರ್ದೇಶಕರಾದ ಎಫ್.ಡಿ.ಕಟ್ಟಿಮನಿ, ಗೀತಾ ಅಯ್ಯಪ್ಪ, ಸಿಡಿಪಿಒ ಸಿಂಧು ಅಂಗಡಿ, ಗ್ರಾಪಂ ಅಧ್ಯಕ್ಷೆ ಕೆಂಚಮ್ಮ ರಾಮಣ್ಣ ಹಿರೇಮನಿ, ಉಪಾಧ್ಯಕ್ಷ ಶರಣಪ್ಪ ಕುರಿ, ಸದಸ್ಯರಾದ ದ್ಯಾಮಣ್ಣ, ಶರಣಕುಮಾರ ಅಮರಗಟ್ಟಿ, ಶರಣಪ್ಪ ಹಾದಿಮನಿ, ಶರಣಪ್ಪ ಕರಡದ, ಉಮೇಶ ವಡ್ಡರ, ಶರಣಯ್ಯ ಬಂಡಿಹಾಳ, ಪಿಡಿಒ ವೆಂಕಟೇಶ ನಾಯಕ, ಜಿಪಂ ಎಸ್‌ಬಿಎಂ ಸಂಯೋಜಕ ಮಾರುತಿ, ಐಇಸಿ ಸಂಯೋಜಕ ಶರಣಪ್ಪ ಹಾಳಕೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts