More

    ಶೈಕ್ಷಣಿಕ ಅಭಿವೃದ್ಧಿಗೆ ಸಂಸ್ಥೆ ಬದ್ಧ

    ಯಲಬುರ್ಗಾ: ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಓದುವ ಬಡಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಅಕ್ಷನ್ ಅಗ್ರಿ ಸೈನ್ಸ್ ಪ್ರೈವೇಟ್ ಕಂಪನಿ ಶ್ರಮಿಸುತ್ತಿದೆ ಎಂದು ಕಂಪನಿಯ ಎಂಡಿ ಸೆಂಥಲ್‌ನಾಥನ್ ಹೇಳಿದರು.

    ತಾಲೂಕಿನ ತುಮ್ಮರಗುದ್ದಿ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಅಕ್ಷನ್ ಅಗ್ರಿ ಸೈನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಿಂದ ನಿರ್ಮಿಸಲಾದ ಭೋಜನಾಲಯ ಮತ್ತು ಬಹು ಉಪಯೋಗಿ ಸಭಾಂಗಣವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

    ತುಮ್ಮರಗುದ್ದಿ ಶಾಲೆಯ ಭೋಜನಾಲಯ ಮತ್ತು ಸಭಾಂಗಣವನ್ನು 12 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಬಾಲ್ಯದಲ್ಲಿ ನಾನು 5ನೇ ತರಗತಿ ವರೆಗೆ ಕನ್ನಡ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ. ಸರ್ಕಾರಿ ಶಾಲೆಗೆ ಕೊಡುಗೆ ನೀಡುವ ಉದ್ದೇಶ ಕಂಪನಿಯದ್ದಾಗಿದೆ. ರೈತರ ಮಕ್ಕಳಿಗೆ ಊಟೋಪಚಾರಕ್ಕೆ ಅನುಕೂಲವಾಗಲು ಕಂಪನಿಯ ಸಿಎಸ್‌ಆರ್ ಅನುದಾನದಲ್ಲಿ ನಿರ್ಮಿಸಲಾಗುತ್ತಿದೆ ಎಂದರು.

    ಎಸ್ಡಿಎಂಸಿ ಅಧ್ಯಕ್ಷ ಚಂದಾಲಿಂಗಪ್ಪ ಹಿರೇಮನಿ, ಮುಖ್ಯಶಿಕ್ಷಕ ಹುಚ್ಚೀರಪ್ಪ ಬೆಟಗೇರಿ, ಶಿಕ್ಷಕ ಮಾರಯ್ಯ, ಕಂಪನಿ ಆರ್ಗನೈಜರ್‌ಗಳಾದ ಬಿರಾದಾರ, ಮಲ್ಲಿಕಾರ್ಜುನ ಹಿರೇಮನಿ, ಶಿವಕುಮಾರ ಅಂಗಡಿ, ಶಂಕರ ಬಡಿಗೇರ್, ಮಲ್ಲಿಕಾರ್ಜುನ ತೊಂಡಿಹಾಳ, ಬಸನಗೌಡ ತೊಂಡಿಹಾಳ, ಗ್ರಾಪಂ ಸದಸ್ಯರಾದ ನಿಂಗಪ್ಪ ಈಳಿಗೇರ್, ಬಾಳಪ್ಪ ತಳವಾರ್, ಸೋಮಲೆಪ್ಪ ನಾಯ್ಕ, ಬಸವರಾಜ ಹಿರೇಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts