More

    ಚೀನಾದಿಂದ ಬಂದ ಯಾಕ್​ ಪ್ರಾಣಿಗಳ ಹಿಂಡಿನ ಮೇಲೆ ಅನುಮಾನ? ಇದಕ್ಕೆ ಕಾರಣವೂ ಇದೆ!

    ನವದೆಹಲಿ: ಆಗಸ್ಟ್​ 31ರಂದು ಚೀನಾ ಪ್ರದೇಶದಿಂದ ಬಂದಂತಹ ಯಾಕ್​ ಪ್ರಾಣಿಗಳ ಹಿಂಡು ಅರುಣಾಚಲ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದವು. ಭಾರತ ಮತ್ತು ಚೀನಾ ದೇಶಗಳ ಯೋಧರು ಲಡಾಖ್‌ನ ಪ್ಯಾಂಗೊಂಗ್ ಸರೋವರದ ದಕ್ಷಿಣದಲ್ಲಿ ಜಮಾವಣೆಗೊಳ್ಳುತ್ತಿದ್ದ ಸಮಯದಲ್ಲೇ ಪ್ರಾಣಿಗಳು ಕಂಡುಬಂದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

    ಕಳೆದ ವಾರದವೂ ಸಹ ಇದೇ ಯಾಕ್​ ಪ್ರಾಣಿಗಳ ಹಿಂಡು ಗಡಿ ದಾಟಿ ಬಂದಿದ್ದವು. ಈ ವೇಳೆ ಅಲ್ಲಿಯೇ ಇದ್ದ ಭಾರತೀಯ ಸೈನಿಕರು ಅವುಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. 7 ದಿನಗಳವರೆಗೆ ಅವುಗಳ ಪಾಲನೆ ಮಾಡಿದ್ದ ಯೋಧರು ಮಾನವೀಯತೆ ದೃಷ್ಠಿಯಿಂದ ಚೀನಾ ಮಾಲೀಕರಿಗೆ ಹಿಂದಿರುಗಿಸಿದ್ದರು.

    ಇದನ್ನೂ ಓದಿ: ಒಂದೇ ಕೊಠಡಿಯಲ್ಲಿ ಮಾದಕ ನಟಿಯರು: ಸಣ್ಣ ವಿಚಾರಕ್ಕೆ ಕಿತ್ತಾಡಿಕೊಂಡ ಸಂಜನಾ-ರಾಗಿಣಿ?!

    ಮೊದಲೇ ಚೀನಾ ಮತ್ತು ಭಾರತ ನಡುವೆ ಗಡಿವಿವಾದ ನಡೆಯುತ್ತಿದ್ದು, ಚೀನಾ ನಿರಂತರವಾಗಿ ಗಡಿಯಲ್ಲಿ ಕ್ಯಾತೆ ತೆಗೆಯುತ್ತಿದೆ. ಹೀಗಿರುವಾಗ ಚೀನಾದಿಂದ ಬಂದಂತಹ ಜಾನುವಾರುಗಳು ಮುಗ್ಧ ಜೀವಿಗಳೇ ಆಗಿದ್ದರು ಅವು ಚೀನಾಗೆ ಸೇರಿದ್ದಾಗಿದ್ದರಿಂದ ಸಂಶಯ ಬರದೇ ಇರದು. ಈ ಪ್ರಾಣಿಗಳ ಹಿಂದೆ ಯಾವುದಾದರೂ ನಿಗೂಢತೆ ಇದೆಯಾ ಎಂಬ ಅನುಮಾನ ಹೊಗೆಯಾಡ ತೊಡಗಿದೆ.

    ಯಾಕ್​ ಪ್ರಾಣಿಗಳಲ್ಲಿರಬಹುದಾ ಬೇಹುಗಾರಿಕಾ ಸಾಧನ?
    ಯಾಕ್​ ಪ್ರಾಣಿಗಳನ್ನು ಇಂಡಿಯನ್​ ಆರ್ಮಿ ಮಾನವೀಯತೆ ದೃಷ್ಠಿಯಿಂದ ಹಿಂದಿರುಗಿಸಿತು. ಆದರೆ, ಇದೇ ಯಾಕ್​ಗಳಲ್ಲಿ ಬೇಹುಗಾರಿಕಾ ಸಾಧನವಿರಬಹುದಾ ಎಂಬ ಪ್ರಶ್ನೆ ಮೂಡಿದ್ದು, ಅದನ್ನು ತಳ್ಳಿಹಾಕುವಂತಿಲ್ಲ. ಉದಾಹರಣೆ ಕಳೆದ ವರ್ಷದ ಏಪ್ರಿಲ್​ನಲ್ಲಿ ನಾರ್ವೆ ಕರಾವಳಿಯಲ್ಲಿ ಬೆಲುಗಾ ತಿಮಿಂಗಿಲವನ್ನು ಹಿಡಿಯಕಲಾಗಿತ್ತು. ತುಂಬಾ ಬುದ್ಧಿವಂತ ಹಾಗೂ ಸ್ನೇಹ ಸ್ವಭಾವದ ಪ್ರಾಣಿಯಾಗಿರುವ ಬೆಲುಗಾ ತಲೆಯ ಸುತ್ತ ಗುಪ್ತಚರ ಇಲಾಖೆಗೆ ಸೂಚನೆ ನೀಡುವಂತಹ ಎಲೆಕ್ಟ್ರಾನಿಕ್​ ಸಾಧನವನ್ನು ಅಳವಡಿಸಲಾಗಿತ್ತು.

    ಅಮೆರಿಕ ನೌಕಾಪಡೆ ದಶಕಗಳಿಂದಲೂ ತರಬೇತಿ ನೀಡಿದ ಡಾಲ್ಫಿನ್​ಗಳನ್ನು ಬಳಸುತ್ತಿದ್ದಾರೆ. ಅವುಗಳಲ್ಲಿ ಸೆನ್ಸಾರ್​ಗಳನ್ನು ಅಳವಡಿಸಿ ನೀರಿನಾಳದಲ್ಲಿರುವ ಗಣಿ ಹಾಗೂ ಜಲಂತಾರ್ಗಾಮಿ ಮಾಹಿತಿಗಳನ್ನು ಪಡೆದುಕೊಳ್ಳುತ್ತಾರೆ. ಹೀಗಾಗಿ ಪ್ರಾಣಿಗಳನ್ನು ಬಳಸಿ ಮಾಹಿತಿಗಳನ್ನು ಪಡೆದ ಅನೇಕ ಉದಾಹರಣೆಗಳನ್ನು ಕಣ್ಣ ಮುಂದೆ ಇರುವಾಗ ಯಾಕ್​ ಪ್ರಾಣಿಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸುವಂತಿಲ್ಲ ಎಂಬುದು ತಜ್ಞರ ಅಭಿಮತವಾಗಿದೆ. (ಏಜೆನ್ಸೀಸ್​)

    ಸಿನಿಪ್ರಿಯರಿಗೆ ಗುಡ್ ನ್ಯೂಸ್, ಚಿತ್ರಮಂದಿರ ಓಪನ್​ಗೆ ಡೇಟ್​ ಫಿಕ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts